ಬೆಳಗಾವಿ ನೂತನ ಪೊಲೀಸ್ ಕಮೀಷನರ್ ಆಗಿ ಬೋರಸೆ ಭೂಷಣ್ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಯಡಾ ಮಾರ್ಟಿನ್ ಅವರನ್ನು ವರ್ಗಾವಣೆ ಮಾಡಿ ಆ ಹುದ್ದೆಗೆ ಬೋರಸೆ ಭೂಷಣ್ ಗುಲಾಬ್ರಾವ್ ನೇಮಕಗೊಳಿಸಲಾಗಿದೆ.
ಬೋರಸೆ ಭೂಷಣ್ ಸೈಬರ್ ಅಪರಾಧ ಮತ್ತು ಮಾದಕ ದ್ರವ್ಯ, ಕ್ರಿಮಿನಲ್ ಇನ್ವಿಸ್ಟಿಗೇಷನ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಯಡಾ ಮಾರ್ಟಿನ್ ಕಾರ್ಯವೈಖರಿ ಬಗ್ಗೆ ಸರ್ಕಾರದಲ್ಲಿ ಅಸಮಾಧಾನದ ಹಿನ್ನಲೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ.
ಕಂಡಕ್ಟರ್ ಮೇಲಿನ ಹಲ್ಲೆ, ಕನ್ನಡಿಗರ ಮೇಲೆ ದಬ್ಬಾಳಿಕೆ, ಮಸೀದಿಯಲ್ಲಿ ಕುರಾನ್ ಸುಟ್ಟಿರುವ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಿಂದ ಸರ್ಕಾರಕ್ಕೆ ಮುಜುಗರ ತಂದ ಕಾರಣ ಯಡಾ ಮಾರ್ಟಿನ್ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗಿದೆ.