ಕರ್ನಾಟಕ ವಿಧಾನ ಸಭೆ ಸಚಿವಾಲಯದ ವತಿಯಿಂದ ಫೆಬ್ರುವರಿ 28, 2025 ರಿಂದ ಮಾರ್ಚ 03, 2025ರ ವರೆಗೆ ನಾಲ್ಕು ದಿನಗಳ ಕಾಲ ಪುಸ್ತಕ ಮೇಳವನ್ನು ವಿಧಾನಸೌಧ ಆವರಣದಲ್ಲಿ ಆಯೋಜಿಸಲಾಗುತ್ತಿದೆ.
ಪುಸ್ತಕ ಮೇಳಕ್ಕೆ ಸಂಬಂಧಿಸಿದ ಲಾಂಛನವನ್ನು ವಿನ್ಯಾಸಗೊಳಿಸಲು ಉದ್ದೇಶಿಸಿದ್ದು, ಲಾಂಛನ ವಿನ್ಯಾಸಗೊಳಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ. ಆಯ್ಕೆಗೊಳ್ಳುವ ಲಾಂಛನದ ವಿನ್ಯಾಸಕರಿಗೆ ಗೌರವಪೂರ್ವಕವಾಗಿ ಬಹುಮಾನ ನೀಡಲಾಗುವುದು.
ಆಸಕ್ತರು ಈ ಪುಸ್ತಕ ಮೇಳ ಕಾರ್ಯಕ್ರಮಕ್ಕೆ ಸರಿಹೊಂದುವ ಲಾಂಛನವನ್ನು ವಿನ್ಯಾಸಗೊಳಿಸಿ, ತಮ್ಮ ಅಂಚೆ ವಿಳಾಸ, ದೂರವಾಣಿ ಸಂಖ್ಯೆಯ ವಿವರಗಳೊಂದಿಗೆ ಫೆಬ್ರುವರಿ 03, 2025 ರೊಳಗಾಗಿ ಕಾರ್ಯದರ್ಶಿಗಳು, ಕರ್ನಾಟಕ ವಿಧಾನ ಸಭೆ ಸಚಿವಾಲಯ, ಕೊಠಡಿ ಸಂಖ್ಯೆ:121, ಮೊದಲನೇ ಮಹಡಿ, ವಿಧಾನ ಸೌಧ, ಬೆಂಗಳೂರು-560001 ಇವರಿಗೆ ಕಳುಹಿಸುವಂತೆ ಕರ್ನಾಟಕ ವಿಧಾನ ಸಭೆ ಸಚಿವಾಲಯ ನಿರ್ದೆಶಕ ಬಿ.ಎಸ್. ಮಹಾಲಿಂಗೇಶ್ ಅವರು ತಿಳಿಸಿದ್ದಾರೆ.