ಬೆಂಗಳೂರು ನಗರದ ಹಲವು ಶಾಲೆಗಳು ಮತ್ತು ಕಾಲೇಜುಗಳಿಗೆ ಬಾಂಬ್ ಬೆದರಿಕೆ ಒಡ್ಡಿದ್ದ ಕಿಂಗ್‌ಪಿನ್ ಲೇಡಿ, ಮಹಿಳಾ ಟೆಕ್ಕಿಯನ್ನು ಬೆಂಗಳೂರಿನ ಉತ್ತರ ವಿಭಾಗದ ಸೈಬರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಗುಜರಾತ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ರೆನೆ ಜೋಶಿಲ್ಡಾ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 14ರಂದು ಕಲಾಸಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಪಬ್ಲಿಕ್ ಶಾಲೆಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. ಪ್ರಕರಣವನ್ನು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡ ನಂತರ, ನಗರ ಪೊಲೀಸ್ ಆಯುಕ್ತರು ಉತ್ತರ ವಿಭಾಗದ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಿದರು. ಸೈಬರ್ ತಜ್ಞರು ತನಿಖೆ ಆರಂಭಿಸಿದಾಗ ಬೆಂಗಳೂರಿನ ಕನಿಷ್ಠ 7 ಶಾಲೆಗಳಿಗೆ ಬಾಂಬ್ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾಳೆ. ಆಕೆಯ ವಿರುದ್ಧ ಗುಜರಾತ್, ಮೈಸೂರು, ತಮಿಳುನಾಡಿನ ಚೆನ್ನೈ ನಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ ದಾಖಲಾಗಿದೆ ಎಂಬುದು ತಿಳಿದು ಬಂದಿದೆ.
ಯುವಕ ತನ್ನ ಪ್ರೀತಿ ನಿರಾಕರಿಸಿದ್ದಕ್ಕೆ ಆತನನ್ನು ಬೆಂಗಳೂರಿನ ಶಾಲಾ-ಕಾಲೇಜುಗಳಿಗೆ ಆಕೆ ಹುಸಿಬಾಂಬ್ ಬೆದರಿಕೆ ಹಾಕಿದ್ದಾಳೆ ಎಂದು ಹೇಳಲಾಗುತ್ತಿದೆ. ಯುವಕನ ಇಮೇಲ್ ಐಡಿ ಬಳಸಿಕೊಂಡು ಹುಸಿಬಾಂಬ್ ಇಮೇಲ್ ಬೆದರಿಕೆ ಕಳಿಸಿದ್ದಳು. ಆಕೆಯ ಪ್ರೀತಿ ಮತ್ತು ಗೆಳೆತನವನ್ನು ಯುವಕ ನಿರಾಕರಿಸಿದ್ದ ಎನ್ನಲಾಗಿದೆ. ಅಹಮದಾಬಾದ್ ಕೇಂದ್ರ ಕಾರಾಗೃಹದಲ್ಲಿ ಇದ್ದುಕೊಂಡು ಬಾಂಬ್ ಬೆದರಿಕೆ ಹಾಕಿದ್ದಳು, ದ್ವೇಷಕ್ಕೆ ಆತನ ಹೆಸರಲ್ಲಿ ಹುಸಿಬಾಂಬ್ ಬೆದರಿಕೆ ಕಳುಹಿಸಿದ್ದಾಳೆಎಂಬುದಾಗಿ ತಿಳಿದು ಬಂದಿದೆ.
ಬಾಡಿ ವಾರೆಂಟ್ ಮುಖಾಂತರ ಗುಜರಾತ್‌ನಿಂದ ಕರೆದುಕೊಂಡು ಬಂದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಬೆಂಗಳೂರಿನ ಕಲಾಸಿಪಾಳ್ಯ ಸೇರಿ ಆರು ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಬೆಂಗಳೂರಿನ ಆರರಿಂದ ಏಳು ಶಾಲೆಗಳಿಗೆ, ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಾಂಬ್ ಬೆದರಿಕೆ ಹಾಕಿದ್ದಳು.


