ದೆಹಲಿ ಹೈಕೋರ್ಟ್‌ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಕೋರ್ಟ್ ಆವರಣದಲ್ಲಿ ಆತಂಕವುಂಟಾಗಿ ನ್ಯಾಯಾಧೀಶರು ಡಯಾಸ್‌ನಿಂದ ಎದ್ದಿದ್ದು, ನ್ಯಾಯಾಲಯದ ಕೊಠಡಿಗಳನ್ನು ತೆರವುಗೊಳಿಸಲಾಯಿತು.
ರಿಜಿಸ್ಟ್ರಾರ್ ಜನರಲ್ ಅವರಿಗೆ ಶುಕ್ರವಾರ ಬೆಳಗ್ಗೆ 8.39 ಕ್ಕೆ ಇ-ಮೇಲ್ ಬಂದಿದ್ದು, ಪವಿತ್ರ ಶುಕ್ರವಾರದ ಸ್ಫೋಟಗಳಿಗೆ ಪಾಕಿಸ್ತಾನ ತಮಿಳುನಾಡು ಕೈಜೋಡಿಸಿದೆ. ನ್ಯಾಯಾಧೀಶರ ಕೊಠಡಿ/ಕೋರ್ಟ್ ಆವರಣದಲ್ಲಿ 3 ಬಾಂಬ್‌ಗಳನ್ನು ಇಡಲಾಗಿದೆ. ಮಧ್ಯಾಹ್ನ 2 ಗಂಟೆಯೊಳಗೆ ಎಲ್ಲರೂ ಸ್ಥಳಾಂತರಗೊಳ್ಳಿ ಎಂದು ಬರೆಯಲಾಗಿತ್ತು.
ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಕೋರ್ಟ್ ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ ಮತ್ತು ನ್ಯಾಯಾಲಯದ ಆವರಣದಲ್ಲಿದ್ದ ಎಲ್ಲರೂ ಅಲ್ಲಿಂದ ತೆರಳುವಂತೆ ಕೇಳಿಕೊಳ್ಳಲಾಗಿದೆ. ಸ್ಥಳಕ್ಕೆ ಪೊಲೀಸ್, ಶ್ವಾನದಳ, ಬಾಂಬ್ ನಿಷ್ಕ್ರಿಯ ದಳ ಆಗಮಿಸಿ ಪರಿಶೀಲನೆ ನಡೆಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.
ಪ್ರಾದೇಶಿಕ ಪಕ್ಷಗಳಲ್ಲಿ ಬಿಆರ್‌ಎಸ್ ಆದಾಯ 685.5 ಕೋಟಿ ರೂ.
ದೇಶದ ಪ್ರಾದೇಶಿಕ ಪಕ್ಷಗಳಲ್ಲಿ ಭಾರತೀಯ ರಾಷ್ಟ್ರ ಸಮಿತಿ(ಬಿಆರ್‌ಎಸ್) 685.5 ಕೋಟಿ ರೂ. ಆದಾಯದೊಂದಿಗೆ ಅಗ್ರಸ್ಥಾನದಲ್ಲಿದೆ. ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್(ಎಐಟಿಎಂಸಿ) 646 ಕೋಟಿ ರೂ. ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ.
ನಂತರದ ಸ್ಥಾನಗಳಲ್ಲಿ ಬಿಜು ಜನತಾ ದಳ(ಬಿಜೆಡಿ) 297 ಕೋಟಿ ರೂ., ತೆಲುಗು ದೇಶಂ ಪಕ್ಷ(ಟಿಡಿಪಿ) 287 ಕೋಟಿ ರೂ. ಮತ್ತು ಯುವಜನ ರೈತ ಶ್ರಮಿಕ ಕಾಂಗ್ರೆಸ್ ಪಕ್ಷ(ವೈಎಸ್‌ಆರ್‌ಸಿಪಿ) 191 ಕೋಟಿ ರೂ. ಇವೆ. ಆಡಳಿತಾರೂಢ ತೆಲುಗು ದೇಶಂ ಪಕ್ಷ (ಟಿಡಿಪಿ) ಆದಾಯ ಮೂರು ಪಟ್ಟು ಹೆಚ್ಚಿಸಿಕೊಂಡಿದ್ದು, 2023-24ರ ಆರ್ಥಿಕ ವರ್ಷದಲ್ಲಿ 285.07 ಕೋಟಿ ರೂ. ಆದಾಯ ಗಳಿಸಿದೆ ಎಂದು ವರದಿ ತಿಳಿಸಿದೆ.
ಟಿಡಿಪಿ 2022-23ರ ಆರ್ಥಿಕ ವರ್ಷದಲ್ಲಿ 63.9 ಕೋಟಿ ರೂ. ಆದಾಯ ಗಳಿಸಿತ್ತು. ಅಧಿಕಾರಕ್ಕೆ ಬಂದ ನಂತರ ತನ್ನ ಆದಾಯವನ್ನು ಮೂರು ಪಟ್ಟು ಹೆಚ್ಚಿಸಿಕೊಳ್ಳುವ ಮೂಲಕ ದೇಶದ ನಾಲ್ಕನೇ ಶ್ರೀಮಂತ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಿದೆ.
ವೈಎಸ್‌ಆರ್‌ಸಿಪಿ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 191 ಕೋಟಿ ರೂ. (1.6 ಪಟ್ಟು ಹೆಚ್ಚಳ) ಆದಾಯ ಗಳಿಸಿದೆ. ಪ್ರಾದೇಶಿಕ ಪಕ್ಷಗಳ ಆದಾಯದ ಡೇಟಾವನ್ನು ಭಾರತದ ಚುನಾವಣಾ ಆಯೋಗ(ಇಸಿಐ)ದಿಂದ ಪಡೆಯಲಾಗಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ತಿಳಿಸಿದೆ.