ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ ಹಾಗೂ ನಿರ್ದೇಶಕ ಮನೋಜ್ ಕುಮಾರ್ (87) ನಿಧನರಾಗಿದ್ದಾರೆ. ಅವರನ್ನು ಕೆಲವು ವಾರಗಳ ಹಿಂದೆ ಮುಂಬೈನ ಕೊಕಿಲಾಬೇನ್ ಧೀರುಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮನೋಜ್ ಕುಮಾರ್ ರಾಷ್ಟ್ರ ಪ್ರೇಮದ ಸಿನಿಮಾಗಳನ್ನು ಮಾಡಿ ಪ್ರಸಿದ್ಧರಾಗಿದ್ದರು. ಅವರ ನಿರ್ದೇಶನದಲ್ಲಿ ಮೂಡಿ ಬಂದ ‘ಉಪ್ಕಾರ್’ (1967) ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಪದ್ಮಶ್ರೀ (1992) ಹಾಗೂ ದಾದಾ ಸಾಹೇಬ್ ಫಾಲ್ಕೆ ಅವಾರ್ಡ್ (2015) ಕೂಡ ಅವರಿಗೆ ಸಂದಿದೆ.
ಮನೋಜ್ ಕುಮಾರ್ ಅವರು ಪಂಜಾಬಿ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ 1937ರಲ್ಲಿ ಜನಿಸಿದ್ದು, ಮೂಲ ಹೆಸರು ಹರಿಕೃಷ್ಣ ಗಿರಿ ಗೋಸ್ವಾಮಿ. ಅವರು 10ನೇ ವಯಸ್ಸಿನಲ್ಲಿರುವಾಗ ಕುಟುಂಬ ದೆಹಲಿಗೆ ಸ್ಥಳಾಂತರ ಆಯಿತು. 1957ರಲ್ಲಿ ನಟನಾಗಿ ಮನೋಜ್ ಬಣ್ಣದ ಬದುಕು ಪ್ರವೇಶಿಸಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ,
‘ಕ್ರಾಂತಿ’, ‘ಶೋರ್’, ‘ಕ್ಲರ್ಕ್’, ‘ಜೈ ಹಿಂದ್’ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು. ಕೆಲವು ಸಿನಿಮಾಗಳಿಗೆ ಸಂಕಲನಾಕರರಾಗಿ, ಕೆಲವು ಹಾಡುಗಳಿಗೆ ಸಾಹಿತ್ಯವನ್ನು ಬರೆದಿದ್ದಾರೆ.