Wednesday, October 08, 2025
Menu

ಹೊನ್ನಾಳಿಯಲ್ಲಿ ಬಾಯ್ಲರ್‌ ಸ್ಫೋಟ: ಬಾಲಕಿ ಸಾವು

ಹೊನ್ನಾಳಿ ಪಟ್ಟಣದ ದುರ್ಗಿಗುಡಿ ಉತ್ತರ ಭಾಗದಲ್ಲಿ ಮನೆಯಲ್ಲಿ ಬಾಯ್ಲರ್ ಸ್ಫೋಟಗೊಂಡು 11 ವರ್ಷದ ಬಾಲಕಿ ಮೃತಪಟ್ಟಿದ್ದು, ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಸ್ವೀಕೃತಿ ಮೃತ ಬಾಲಕಿ, ತೀರ್ಥಿಬಾಯಿ, ಹೂವಾ ನಾಯ್ಕ್, ಸುನೀತಾ ಬಾಯಿ ಗಂಭೀರವಾಗಿ ಗಾಯಗೊಂಡವರು. ಮನೆಯಲ್ಲಿ ಬೆಳಗ್ಗೆ ಬಾಯ್ಲರ್ ಆನ್ ಮಾಡಿದಾಗ ಸ್ಟೋಟಗೊಂಡಿದೆ. ಬಾಯ್ಲರ್ ಪಕ್ಕದಲ್ಲೇ ಇದ್ದ ಬಾಲಕಿ ಸ್ವೀಕೃತಿ ಸ್ಥಳದಲ್ಲೇ ಅಸು ನೀಗಿದ್ದಾಳೆ.

ಗಂಭೀರವಾಗಿ ಗಾಯಗಳಾಗಿರುವ ಮೂವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿಗೆ ಮೆಸೇಜ್‌ ಮಾಡುತ್ತಿದ್ದ ಸ್ನೇಹಿತನ ಕೊಲೆ

ಬೆಂಗಳೂರಿನ ಕೊಡುಗೇಹಳ್ಳಿ ಮರಿಯಪ್ಪನ ಪಾಳ್ಯದಲ್ಲಿ ಸ್ನೇಹಿತನನ ಕತ್ತು‌ ಕೊಯ್ದು ಹತ್ಯೆ ಮಾಡಿದ ಘಟನೆ ಸಂಬಂಧ ಪೊಲೀಸರಿಗೆ ತನಿಖೆಯಲ್ಲಿ ಹತ್ಯೆಗೆ ಕಾರಣವಾದ ವಿಚಾರ ಏನೆಂಬುದು ತಿಳಿದು ಬಂದಿದೆ.

ಜಾರ್ಖಂಡ್‌ ಮೂಲದ ರಾಘು ಎಂಬಾತನನ್ನು ಅದೇ ರಾಜ್ಯದ ಸ್ನೇಹಿತ ರಾಜು ಕೊಲೆ ಮಾಡಿದ್ದ. ಕೊಲೆ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ರಾಘು ನನ್ನ ಹೆಂಡತಿಗೆ ಮೆಸೇಜ್‌ ಮಾಡುತ್ತಿದ್ದ, ಇದನ್ನು ಸಹಿದೆ ಕೊಲೆ ಮಾಡಿದ್ದಾಗಿ ಬಹಿರಂಗಪಡಿಸಿದ್ದಾನೆ.

ಕೊಲೆ ಮಾಡಿದ ಬಳಿಕ ಆರೋಪಿ ಜಾರ್ಖಂಡ್‌ಗೆ ತೆರಳಲು ಬೈಯ್ಯಪನಹಳ್ಳಿ ರೈಲು ನಿಲ್ದಾಣಕ್ಕೆ ಹೋಗಿದ್ದಾಗ ಪೊಲೀಸರು ರೈಲು ನಿಲ್ದಾಣಕ್ಕೆ ಹೋಗಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *