“ನನ್ನ ದೇಹದ ಬಗ್ಗೆ ಮಾತನಾಡುವುದು ಚರ್ಚೆಯ ವಿಷಯವಲ್ಲ, ಆ ಬಗ್ಗೆ ನಿಮ್ಮ ಅಭಿಪ್ರಾಯ ಬೇಕಿದ್ದರೆ ನಾನೇ ಕೇಳುತ್ತೇನೆ ಎಂದು ಕಿಚ್ಚ ಸುದೀಪ್ ಪುತ್ರಿ ಸಾನ್ವಿ ತಮ್ಮ ವಿರುದ್ಧ ನೆಗೆಟಿವ್ ಕಾಮೆಂಟ್ ಮಾಡುವ ಟ್ರೋಲರ್ಸ್ಗೆ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿರುಗೇಟು ನೀಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಹಿಂದೆಯೂ ಬಾಡಿ ಶೇಮಿಂಗ್ ಹಾಗೂ ನೆಗೆಟಿವ್ ಟ್ರೋಲಿಂಗ್ ವಿರುದ್ಧ ಸಾನ್ವಿ ಸುದೀಪ್ ಕೌಂಟರ್ ಕೊಟ್ಟಿದ್ದರು. ತಿಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅನಗತ್ಯ ಟೀಕೆಗಳು ಹಾಗೂ ವೈಯಕ್ತಿಕ ದೇಹದ ಕುರಿತಾಗಿ ನಡೆಯುವ ವಿಷಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾರ್ಕ್ ಸಿನಿಮಾ ರಿಲೀಸ್ ವೇಲೆ ಕಿಚ್ಚ ಸುದೀಪ್ ಅವರು ಪತ್ರಿಕಾಗೋಷ್ಠಿ ಕರೆದಿದ್ದಾಗ ಮಗಳ ಬಗ್ಗೆಯೂ ಮಾತನಾಡಿದ್ದಾರೆ. ಮಗಳು ಸಾನ್ವಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಕುರಿತು ಧ್ಯಮದವರು ಪ್ರಶ್ನೆ ಮಾಡಿದಾಗ ಕಿಚ್ಚ ಸುದೀಪ್, ಕಿತ್ತೋಗಿರೋ ಕಾಮೆಂಟ್ಗಳ ಬಗ್ಗೆ ನಾನು ತಲೆ ಕೆಡಿಸ್ಕೊಳೋದಿಲ್ಲ. ಇಲ್ಲೇ ನಾವು ಚೀಪ್ ಆಗೋದು, ಸೆಲೆಬ್ರೇಶನ್ ಬಗ್ಗೆ ಮಾತಾಡೋಣ” ಎಂದು ಹೇಳಿದ್ದರು.
ನನ್ನ ಟೈಮ್ ಯಾಕೆ ವೇಸ್ಟ್ ಮಾಡಲಿ, ನನ್ನ ಮಗಳು ನನಗಿಂತ ಸ್ಟ್ರಾಂಗ್ , ನಾನು ಏನು ಫೇಸ್ ಮಾಡಿರೋ ಹತ್ತರಷ್ಟು ಅವಳು ಫೇಸ್ ಮಾಡ್ತಾಳೆ. ನನ್ನ ಮಗಳು ನನಗಿಂತ ದೊಡ್ಡದಾಗಿ ಬೆಳೆಯುತ್ತಾಳೆ” ಎಂದು ಹೇಳಿದ್ದಾರೆ. ಮಾರ್ಕ್ ಸಿನಿಮಾದಲ್ಲಿ ಮಲೈಕಾ ಹಾಡು ಹಾಡಿದ್ದ ನನ್ನ ಮಗಳ ಬಗ್ಗೆ ಚಿತ್ರರಂಗದವರು ಸೇರಿದಂತೆ ಅನೇಕರು ಮೆಚ್ಚುಗೆ ಸೂಚಿಸಿದ್ದರು. ಅವರಿಗೆ ಧನ್ಯವಾದಗಳು ಎಂದು ಸುದೀಪ್ ಹೇಳಿದ್ದರು.
ಹುಬ್ಬಳ್ಳಿಯಲಿ ನಡೆದ ಮಾರ್ಕ್ ಇವೆಂಟ್ನಲ್ಲಿ ಸುದೀಪ್ ಅವರು ಯುದ್ಧಕ್ಕೆ ರೆಡಿ ಇದ್ದೇವೆ ಎಂದ ಬಳಿಕ ಸುದೀಪ್ ಮಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು. ಕೆಟ್ಟ ಕಾಮೆಂಟ್ಗಳು ಬಂದಿದ್ದವು.
‘ಮ್ಯಾಕ್ಸ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರಿಗೆ ಮಗಳ ವಿರುದ್ಧ ನಡೆಯುತ್ತಿರುವ ನೆಗೆಟಿವ್ ಟ್ರೋಲ್ ಕುರಿತು ಪ್ರಶ್ನೆ ಕೇಳಲಾಗಿತ್ತು. ನಮಗೆ ಪ್ರೋತ್ಸಾಹ ಕೊಡುವವರ ಬಗ್ಗೆ ಮಾತಾಡೋಣ. ನನ್ನ ಬಗ್ಗೆ ಅಥವಾ ನನ್ನ ಮಗಳ ಬಗ್ಗೆ ನೆಗೆಟಿವ್ ಮಾತಾಡುವ ಯಾರೋ ಒಬ್ಬನ ಬಗ್ಗೆ ನಾನು ಯಾಕೆ ಮಾತಾಡಲಿ ಎಂದು ಸುದೀಪ್ ಪ್ರಶ್ನಿಸಿದ್ದರು.


