ಕಳಸ ತಾಲೂಕಿನ ಕೊಳಮಗೆಯಲ್ಲಿ ಯುವಕ ಜೀಪ್ ಸಮೇತ ಭದ್ರಾ ನದಿಗೆ ಬಿದ್ದು ಮೂರು ದಿನ ಕಳೆದು ಹೋದರೂ ಆತನ ಶವ ಪತ್ತೆಯಾಗಿಲ್ಲ, ಜೀಪ್ ಪತ್ತೆಯಾಗಿದೆ.
ನಿಯಂತ್ರಣ ತಪ್ಪಿ ಚಲಾಯಿಸುತ್ತಿದ್ದ ಜೀಪ್ ಸಮೇತ ಶಮಂತ್ ಎಂಬ ಯುವಕ ಮೂರು ದಿನಗಳ ಹಿಂದೆ ಭದ್ರಾ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದರು. ನದಿಯಲ್ಲಿ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.
ಧಾರಾಕಾರ ಮಳೆ ಮಧ್ಯೆಯೂ ಮೃತದೇಹಕ್ಕಾಗಿ ರಕ್ಷಣಾ ಸಿಬ್ಬಂದಿ, ಸ್ಥಳೀಯರು , ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಮಗನ ಶವ ಸಿಗುವ ಮೊದಲೇ ನೊಂದ ಆತನ ತಾಯಿ ಕೂಡ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.