ವಿಜಯಪುರ ಜಿಲ್ಲೆ ಆಲಮೇಲ ತಾಲೂಕಿನ ತಾರಾಪೂರ ಗ್ರಾಮದ ಬಳಿ ರಸ್ತೆಯಲ್ಲಿ ಯುವಕನ ಶವ ಪತ್ತೆಯಾಗಿದೆ. ಸಂತೋಷ ಬಿರಾದಾರ (36) ಶವವಾಗಿ ಪತ್ತೆಯಾಗಿರುವ ಯುವಕ.
ತಾರಾಪೂರ ಗ್ರಾಮ ಪಂಚಾಯತಿ ಸದಸ್ಯನಾಗಿರುವ ಸಂತೋಷ ಬೈಕ್ ಮೇಲಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ, ತಲೆಗೆ ಏಟು ಬಿದ್ದು ರಕ್ತಸ್ರಾವವಾಗಿರುವ ಗುರುತು ಪತ್ತೆಯಾಗಿದೆ.
ಸ್ಥಳಕ್ಕೆ ಆಲಮೇಲ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ತನಿಖೆ ಬಳಿಕ ಇದು ಅಪಘಾತವೋ ಕೊಲೆಯೋ ಎಂಬ ಮಾಹಿತಿ ತಿಳಿದು ಬರಲಿದೆ.
ಲಾಡ್ಜ್‌ನಲ್ಲಿ ಪ್ರೇಯಸಿ ಜೊತೆ ಸಿಕ್ಕಿಹಾಕಿಕೊಂಡ ಪತಿಗೆ ಥಳಿಸಿದ ಪತ್ನಿ
ಚಿಕ್ಕೋಡಿ ನಿವಾಸಿ ಅವಿನಾಶ್ ಭೋಸಲೆ ಎಂಬಾತ ಪ್ರೇಯಸಿಯೊಂದಿಗೆ ಪಟ್ಟಣದ ಬಸ್ ನಿಲ್ದಾಣದ ಎದುರಿನ ಲಾಡ್ಜ್‌ನಲ್ಲಿ ರೂಮ್ ಬುಕ್ ಮಾಡಿಕೊಂಡು ಇದ್ದ ಮಾಹಿತಿ ತಿಳಿದ ಪತ್ನಿಯು ತನ್ನ ತಂದೆ ಜೊತೆಗೆ ಸ್ಥಳಕ್ಕೆ ಧಾವಿಸಿ ಪತಿಯನ್ನು ಥಳಿಸಿದ್ದಾಳೆ.
ಲಾಡ್ಜ್ ಸಿಬ್ಬಂದಿ ನೆರವಿನಿಂದ ಪತ್ನಿ ಕೊಠಡಿ ಬಾಗಿಲು ತೆರೆದಾಗ ಪತಿ ಪ್ರೇಯಸಿಯೊಂದಿಗೆ ಸಿಕ್ಕಿಬಿದ್ದಿದ್ದಾನೆ. ಸಿಟ್ಟಿಗೆದ್ದ ಪತ್ನಿ ಪತಿಯನ್ನು ಚಪ್ಪಲಿಯಿಂದ ಅಟ್ಟಾಡಿಸಿ ಹೊಡೆದಿದ್ದಾಳೆ. ಘಟನೆಯ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.


