ಹಾಸನ ಮೂಲದ ಮೂವರು ಯುವಕರು ಮಂತ್ರಾಲಯ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿ ನೀರುಪಾಲಾಗಿದ್ದು, ಶವಗಳು ಪತ್ತೆಯಾಗಿವೆ. ಹಾಸನ ಮೂಲದ ಅಜಿತ್ (20), ಸಚಿನ್ (20), ಪ್ರಮೋದ್ (19) ಮೃತ ಯುವಕರು.
ರಾಘವೇಂದ್ರ ಸ್ವಾಮಿ ದರ್ಶನ ಪಡೆಯಲು ರಾಯರ ಮಠಕ್ಕೆ ಬಂದಿದ್ದ ಯುವಕರು ಶನಿವಾರ ಸಂಜೆ ನದಿಗೆ ಈಜಲು ಹೋದಾಗ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ನೀರಿನಲ್ಲಿ ನಾಪತ್ತೆಯಾಗಿದ್ದ ಸ್ಥಳದಲ್ಲೇ ಮೃತದೇಹಗಳು ಪತ್ತೆಯಾಗಿವೆ.
ರಾಯರ ದರ್ಶನಕ್ಕಾಗಿ ಹಾಸನದಿಂದ 7 ಯುವಕರ ತಂಡ ಬಂದಿತ್ತು. ಯುವಕರು ಸ್ನಾನಘಟ್ಟದ ಬಳಿ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದರು. ಆಗ ನದಿಗೆ ಹೆಚ್ಚಿನ ನೀರು ಹರಿಬಿಟ್ಟಿರುವುದ್ದರಿಂದ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದಾರೆ.
ನದಿಯಲ್ಲಿ ನೀರಿನ ರಭಸ ಹೆಚ್ಚಿದ್ದುಬೇಡವೆಂದು ಹೇಳಿದರೂ ಕೇಳದೆ ಈಜಲು ಹೋಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಪೊಲೀಸರು ಹಾಗೂ ಈಜುಗಾರರ ತಂಡ ಯುವಕರ ಶೋಧ ಕಾರ್ಯ ನಡೆಸಿ ರಾತ್ರಿಯಾಗಿದ್ದರಿಂದ ನಿಲ್ಲಿಸಿದ್ದು, ಭಾನುವಾರ ಬೆಳಗ್ಗೆ ಪುನರಾರಂಭಿಸಿ
ಮೃತದೇಹ ಪತ್ತೆ ಹಚ್ಚಿದ್ದಾರೆ.