ಬೆಂಗಳೂರಿನಲ್ಲಿ ದೃಷ್ಟಿಮಾಂದ್ಯರು ಓಡಾಡುವ ಪ್ರದೇಶದಲ್ಲಿ ಅವರು ಪ್ರಯಾಣಿಸಬೇಕಿರುವ ಬಸ್ ಯಾವ ನಿಲ್ದಾಣಕ್ಕೆ ಬರುತ್ತದೆ ಎಂಬುದನ್ನು ಸುಲಭವಾಗಿ ತಿಳಿಯಲು ಹೊಸದೊಂದು ತಂತ್ರಜ್ಞಾನವನ್ನು ಬಿಎಂಟಿಸಿ ಅಭಿವೃದ್ಧಿಪಡಿಸಿದೆ.
ಬಿಎಂಟಿಸಿ ನಿಗಮದಲ್ಲಿ 6800 ಬಸ್ಸುಗಳಿದ್ದು, ಪ್ರತಿದಿನ 40 ಲಕ್ಷ ಮಂದಿ ಪ್ರಯಾಣ ಮಾಡುತ್ತಾರೆ, ದೃಷ್ಟಿಯಿಲ್ಲದವರು ನಗರದ ಯಾವುದೇ ಬಸ್ ಸ್ಟ್ಯಾಂಡ್ನಲ್ಲಿ ನಿಂತು ರಿಮೋಟ್ ಡಿವೈಸ್ ಪ್ರೆಸ್ ಮಾಡಿದರೆ ಬಿಎಂಟಿಸಿ ಬಸ್ಗಳು ಅವರು ಇರುವ ಜಾಗದಲ್ಲಿ ನಿಲ್ಲಲಿವೆ. ದೃಷ್ಟಿ ಇಲ್ಲದವರಿಗಾಗಿ ವಿಶೇಷವಾಗಿ ರಿಮೋಟ್ ಡಿವೈಸ್ ರೂಪಿಸಿ, ಬ್ರೈಲ್ ಮಾದರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅವರು ರಿಮೋಟ್ನಲ್ಲಿ ಬಟನ್ ಪ್ರೆಸ್ ಮಾಡಿದರೆ ಆ ಮಾರ್ಗದ ಬಸ್ಗಳಿಗೆ ಮಾಹಿತಿ ಗೊತ್ತಾಗಲಿದೆ ಎಂದು ಬಿಎಂಟಿಸಿ ಮೂಲಗಳು ಹೇಳಿವೆ.
ಮೊದಲ ಹಂತದಲ್ಲಿ ಬಿಎಂಟಿಸಿಯ 25 ಬಸ್ಗಳಲ್ಲಿ ಕಮ್ಯುನಿಕೇಷನ್ ಡಿವೈಸ್ಗಳನ್ನು ಅಳವಡಿಸಲಾಗಿದೆ. ಈಗಾಗಲೇ 401K ಯಲಹಂಕ ಟು ಕೆಂಗೇರಿ, 401KB ಯಶವಂತಪುರ ಟು ಕೆಂಗೇರಿ ಮಾರ್ಗದಲ್ಲಿ ಸಂಚಾರ ಮಾಡುವ ಬಿಎಂಟಿಸಿ ಬಸ್ಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ನವೆಂಬರ್ ಒಳಗೆ ಬಿಎಂಟಿಸಿಯ 500 ಬಸ್ಗಳಿಗೆ ಈ ಆನ್ ಬೋರ್ಡ್ ಟೆಕ್ನಾಲಜಿ ಅಳವಡಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ಬಸ್ಗಳಲ್ಲಿ ಅಳವಡಿಕೆಯಾಗಲಿದೆ. ಬಿಎಂಟಿಸಿಯ ಈ ಕ್ರಮಕ್ಕೆ ದೃಷ್ಟಿಮಾಂದ್ಯರು ಸೇರಿದಂತೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.