Wednesday, February 05, 2025
Menu

ಬಿಎಂಟಿಸಿ ಟಿಕೆಟ್ ರೋಲ್ ಕದ್ದು ತರಕಾರಿ ಅಂಗಡಿಗೆ ಮಾರಾಟ

ಬಿಎಂಟಿಸಿ ಎಲೆಕ್ಟ್ರಿಕ್ ಬಸ್​ನ ಪೇಪರ್ ಟಿಕೆಟ್ ರೋಲ್ ಹಣ್ಣು ಹಾಗೂ ತರಕಾರಿ ಅಂಗಡಿಯಲ್ಲಿ ಗ್ರಾಹಕರಿಗೆ ಬಿಲ್ ಕೊಡಲು ಬಳಕೆಯಾಗುತ್ತಿದೆ. ಯಲಹಂಕದ ಅಟ್ಟೂರು ಲೇಔಟ್​​ನ ಎಸ್​ಆರ್​ಎಸ್ ತರಕಾರಿ ಹಾಗೂ ಹಣ್ಣು ವ್ಯಾಪಾರಿ ಮಳಿಗೆಯಲ್ಲಿ ಟಿಕೆಟ್ ರೋಲ್ ಉಪಯೋಗಿಸಿ ತರಕಾರಿ ಹಾಗೂ ಹಣ್ಣಿನ ರೇಟ್ ಮುದ್ರಿಸಿ ಕೊಡಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರು ಸೋಶಿಯಲ್ ಮೀಡಿಯಾದಲ್ಲಿ ಬಿಎಂಟಿಸಿಗೆ ಮಾಹಿತಿ ನೀಡಿದ ಬಳಿಕ ಬಿಎಂಟಿಸಿ ಅಧಿಕಾರಿಗಳು ಅಂಗಡಿಗೆ ಹೋಗಿ ಪರಿಶೀಲಿಸಿದಾಗ ಎರಡು ಟಿಕೆಟ್ ರೋಲ್ ಪತ್ತೆಯಾಗಿದೆ.

ಈ ಸಂಬಂಧ ವ್ಯಾಪಾರಿ ಮುರಳಿಕೃಷ್ಣ ಮೇಲೆ ಯಲಹಂಕ ನ್ಯೂ ಟೌನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಬಿಎಂಟಿಸಿ ಭದ್ರತಾ ಮತ್ತು ಜಾಗೃತದಳದ ಅಧಿಕಾರಿಗಳ ನಿರ್ಲಕ್ಷ್ಯ ಎಂದು ಸಾರಿಗೆ ನೌಕರರ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಲಹಂಕದ ಸುತ್ತಮುತ್ತಲಿನ ಸಾಕಷ್ಟು ಅಂಗಡಿಯಲ್ಲಿ ಬಿಎಂಟಿಸಿ ಟಿಕೆಟ್​ ರೋಲ್​ನಲ್ಲಿ ಅಂಗಡಿಯ ಬಿಲ್ ಗಳನ್ನು ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆ ಇನ್ಸೆಂಟಿವ್​ಗಾಗಿ ಕಂಡಕ್ಟರ್​ಗಳು ಬಿಎಂಟಿಸಿಯ ಶಕ್ತಿ ಯೋಜನೆಯ ಟಿಕೆಟ್​​ಗಳನ್ನು ದುರ್ಬಳಕೆ ಮಾಡಿಕೊಂಡಿದ್ದ ಆರೋಪ ಕೇಳಿಬಂದಿತ್ತು.  ಬಿಎಂಟಿಸಿ ಟಿಕೆಟ್ ರೋಲ್​ಗಳನ್ನು ಕದ್ದು ಮಾರಾಟ ಮಾಡಿದವರು ಸಿಕ್ಕಿಬಿದ್ದರೆ ಅಮಾನತು ಖಚಿತ ಎಂದು ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *