Menu

ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಬಿಎಂಆರ್​​ಸಿಎಲ್ ಟೆಂಡರ್ ಆಹ್ವಾನ

ಬೆಂಗಳೂರಿನ ಆರೆಂಜ್ ಲೈನ್ ಮೆಟ್ರೋ ಯೋಜನೆಗೆ ಬಿಎಂಆರ್​​ಸಿಎಲ್ ಸಿವಿಲ್ ಟೆಂಡರ್ ಆಹ್ವಾನಿಸಿದ್ದು, ಫೆಬ್ರವರಿ 20ರಿಂದ 25ರೊಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶವಿದೆ.

2024ರ ಆಗಸ್ಟ್‌ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು. ಜೆಪಿ ನಗರ, ಹೊಸಕೆರೆಹಳ್ಳಿ, ನಾಗರಭಾವಿ ಸುತ್ತಮುತ್ತಲ ಜನರಿಗೆ ಈ ಮೂಲಕ ಬಿಎಂಆರ್​​ಸಿಎಲ್ ಗುಡ್​​ನ್ಯೂಸ್​​ ಕೊಟ್ಟಿದೆ ಎಂದರೆ ತಪ್ಪಾಗದು.

ಆರೆಂಜ್ ಲೈನ್ ಮೆಟ್ರೋ ಜೆಪಿ ನಗರ 4ನೇ ಹಂತದಿಂದ ನಾಗರಭಾವಿವರೆಗಿನ‌ ಕಾಮಗಾರಿಯನ್ನು ಒಳಗೊಂಡಿದೆ. ಫೆಬ್ರವರಿ 20ರಿಂದ 25ರೊಳಗೆ ಟೆಂಡರ್ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದ್ದು, ಮೂರು ಪ್ಯಾಕೇಜ್‌ನಲ್ಲಿ ಬಿಎಂಆರ್‌ಸಿಎಲ್‌ ಸಿವಿಲ್​​ ಟೆಂಡರ್​​ ಕರೆದಿದೆ. ಮೂರು ಪ್ಯಾಜೇಜ್​​ಗಳಿಗೂ ಪ್ರತ್ಯೇಕ ಬಜೆಟ್​​ ನೀಡಲಾಗಿದೆ.

ಪ್ಯಾಕೇಜ್ 1 ಜೆಪಿನಗರ 4ನೇ ಹಂತದಿಂದ ಕಾಮಾಕ್ಯವರೆಗೆ ಡಬಲ್ ಡೆಕ್ಕರ್ ಹಾಗೂ ಡಾಲರ್ಸ್ ಕಾಲೋನಿ ಫ್ಲೈಒವರ್‌ ತೆರವು‌ ಒಳಗೊಂಡು ಒಟ್ಟು ಜೆಪಿ ನಗರ 5ನೇ ಹಂತ, ಜೆಪಿ ನಗರ, ಕದಿರೇನಹಳ್ಳಿ, ಕಾಮಾಕ್ಯ ಜಂಕ್ಷನ್ ನಿಲ್ದಾಣಗಳನ್ನು ಒಳ ಗೊಂಡಿದೆ. ಈ ಪ್ಯಾಕೇಜ್​​ನ ಮೊತ್ತ 1,375 ಕೋಟಿ ರೂಪಾಯಿ. ಹೊಸಕೆರಹಳ್ಳಿಯಿಂದ ನಾಗರಭಾವಿ ಸರ್ಕಲ್‌ವರೆಗೆ ಡಬಲ್ ಡೆಕ್ಕರ್​​ನ ಪ್ಯಾಕೇಜ್ 2 ಒಳಗೊಂಡಿದೆ. 1,396 ಕೋಟಿ ಮೊತ್ತದ ಈ ಪ್ಯಾಕೇಜ್‌ನಲ್ಲಿ ಹೊಸಕೆರಹಳ್ಳಿ, ದ್ವಾರಕಾನಗರ, ಮೈಸೂರು ರಸ್ತೆ ಮತ್ತು ನಾಗರಭಾವಿ ಸರ್ಕಲ್ ನಿಲ್ದಾಣ ಸೇರಿವೆ.

ಪ್ಯಾಕೇಜ್ 3ರ ಕಾರಿಡಾರ್ 1 ವಿನಾಯಕ ಲೇಔಟ್‌ನಿಂದ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್‌ವರೆಗೆ ಒಟ್ಟು 3 ನಿಲ್ದಾಣಗಳನ್ನು ಒಳಗೊಂಡಿದೆ. ವಿನಾಯಕ ಲೇಔಟ್, ಪಾಪಿರೆಡ್ಡಿಪಾಳ್ಯ, ಬಿಡಿಎಕಾಂಪ್ಲೆಕ್ಸ್ ನಾಗರಭಾವಿ ನಿಲ್ದಾಣ ಇದರಲ್ಲಿ ಸೇರಿವೆ. ಪ್ಯಾಕೇಜ್ 3ರ ಕಾರಿಡಾರ್ 2 ಸುಂಕದಕಟ್ಟೆ ನಿಲ್ದಾಣ , ಸುಂಕದಕಟ್ಟೆ ಡಿಪೋ ಪ್ರವೇಶ ಮಾರ್ಗ ಮತ್ತು ನಿರ್ಗಮನ ಮಾರ್ಗ ಒಳಗೊಂಡಿದ್ದು, ಇದರ ಒಟ್ಟು ಮೊತ್ತ 1415 ಕೋಟಿ ರೂಪಾಯಿ.

ನಮ್ಮ ಮೆಟ್ರೋ ಮೂರನೇ ಹಂತದ ಪ್ರಾಜೆಕ್ಟ್​​ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರೂ ಯೋಜನೆ ಮಾತ್ರ ಆರಂಭವಾಗಿರಲಿಲ್ಲ. 2024ರ ಆಗಸ್ಟ್‌ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತ್ತು. ಅದಾಗಿ ಒಂದು ವರ್ಷ ಕಳೆದರೂ ಬಿಎಂಆರ್‌ಸಿಎಲ್‌ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿರಲಿಲ್ಲ.

Related Posts

Leave a Reply

Your email address will not be published. Required fields are marked *