ದೆಹಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಮುಕ್ತಾಯಗೊಂಡಿದ್ದು, ಆಡಳಿತಾರೂಢ ಎಎಪಿ ನಾಯಕ , ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಸಹಿತ ಘಟಾನುಘಟಿ ನಾಯಕರು ಸೇರಿದಂತೆ ಆಪ್ ಹೀನಾಯ ಸೋಲು ಕಂಡಿದೆ. ಚುನಾವಣಾಪೂರ್ವ ಸಮೀಕ್ಷೆಗಳು ಹೇಳಿದಂತೆ ಬಿಜೆಪಿ ದೆಹಲಿಯ ಅಧಿಕಾರದ ಗದ್ದುಗೆ ಹಿಡಿದಿದೆ.
ಫೆಬ್ರವರಿ 5 ರಂದು ಚುನಾವಣೆ ನಡೆದಿತ್ಯತು. 70 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 49 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.
ಕಳೆದ ಚುನಾವಣೆಯಲ್ಲಿ 62 ಸ್ಥಾನ ಗೆದ್ದಿರುವ ಆಮ್ ಆದ್ಮಿ ಪಕ್ಷ 21 ಸ್ಥಾನ ಗೆದ್ದು ಸೋಲು ಕಂಡಿದ್ದು, ದೆಹಲಿಯಲ್ಲಿ ಖಾತೆ ತೆರೆಯುವಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿ ವಿಫಲವಾಗಿದೆ. ಪಕ್ಷದ ವರಿಷ್ಠ ಅರವಿಂದ ಕೇಜ್ರಿವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪರ್ವೇಶ್ ವಿರುದ್ಧ ಸೋತಿದ್ದಾರೆ.