Menu

ರೌಡಿ ಕೊಲೆ ಹಿಂದೆ ಬಿಜೆಪಿ ಶಾಸಕ ಬೈರತಿ ಬಸವರಾಜ್: ಎಫ್ ಐಆರ್ ನಲ್ಲಿ ಎ-5 ಆರೋಪಿ!

bhyrati basavraj

ಭಾರತಿನಗರ ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಬೈರತಿ ಬಸವರಾಜ್ ಹೆಸರು ತಳುಕು ಹಾಕಿಕೊಂಡಿದ್ದು ರಾಜಕೀಯ ಬಣ್ಣ ಪಡೆದಿದೆ.

ಕೆಲವು ದಿನಗಳ ಹಿಂದೆ ಮನೆಯ ಮುಂದೆ ಭೀಕರವಾಗಿ ಕೊಲೆಯಾದ ಶಿವಪ್ರಕಾಶ್ ಅವರ ತಾಯಿ ವಿಜಯಕ್ಷ್ಮಿ ಭಾರತಿನಗರ ಠಾಣೆಗೆ ನೀಡಿದ ದೂರಿನ ಅನ್ವಯ ಕೆಆರ್‌ ಪುರಂನ ಶಾಸಕ ಬೈರತಿ ಬಸವರಾಜ್‌ ಎ5 ಆರೋಪಿಯಾಗಿದ್ದಾರೆ. ಬೈರತಿ ಬಸವರಾಜ್ ಆಪ್ತ ಜಗದೀಶ್ ಎ1 , ಕಿರಣ್ ಎ2 ವಿಮಲ್ ಎ3, ಅನಿಲ್ ಎ4 ಆರೋಪಿಗಳಾಗಿದ್ದಾರೆ.

ತಾಯಿ ನೀಡಿದ ದೂರಿನಲ್ಲಿ ಏನಿದೆ?

ಕಿತ್ತಕನೂರು ಜಾಗದ ವಿಚಾರವಾಗಿ ಕೊಲೆ ಮಾಡಲಾಗಿದೆ. ಬಿಳಿ ಬಣ್ಣದ ಸ್ಕಾರ್ಪಿಯೋದಲ್ಲಿ 8 ರಿಂದ 9 ಮಂದಿ ಬಂದು ಮಚ್ಚಿನಿಂದ ಹೊಡೆದಿದ್ದಾರೆ. ಕೊಲೆ ಮಾಡಿರುವ ಆರೋಪಿಗಳು ಹಲವು ಬಾರಿ ಮಗನಿಗೆ ಬೆದರಿಕೆ ಹಾಕಿದ್ದರು. ಮಾಜಿ ಸಚಿವ ಬೈರತಿ ಬಸವರಾಜ್ , ಜಗದೀಶ್ ಮತ್ತು ಇತರರಿಂದ ನನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಮಗ ಹೇಳಿದ್ದ. ಬಸವರಾಜ್ ಕುಮ್ಮಕ್ಕಿನಿಂದಲೇ ಕೊಲೆ ನಡೆದಿದೆ ಎಂದು ಆರೋಪಿಸಿದ್ದಾರೆ.

ದೂರು ನೀಡಿದ್ದ ಶಿವಪ್ರಕಾಶ್‌:

ಈ ಫೆಬ್ರವರಿ 21 ರಂದು ಶಿವಪ್ರಕಾಶ್‌ ಜಗದೀಶ್‌ ಮತ್ತು ಇತರರ ವಿರುದ್ಧ ಭಾರತಿ ನಗರ ಠಾಣೆಯಲ್ಲಿ ದೂರು ನೀಡಿದ್ದ. ಕಿತ್ತಕನೂರು ಬಳಿ ನಾನು ಜಾಗವನ್ನು ಖರೀದಿಸಿದ್ದೆ. ಈ ಜಾಗವನ್ನು ಮಾರಾಟ ಮಾಡಬೇಕೆಂದು ಜಗದೀಶ್‌ ಮತ್ತು ಇತರರು ನನಗೆ ಜೀವ ಬೆದರಿಕೆ ಹಾಕಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದ. ಈ ಸಂಬಂಧ ಜಗದೀಶ್‌ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

Related Posts

Leave a Reply

Your email address will not be published. Required fields are marked *