Menu

ಬಿಜೆಪಿ, ಜೆಡಿಎಸ್ ಪಕ್ಷಗಳು ಟೂರಿಂಗ್ ಟಾಕೀಸ್ ನಂತೆ ದೇಶ ಬಿಟ್ಟು ತೊಲಗಲಿ: ಸಚಿವ ಬೈರತಿ ಸುರೇಶ್

birati suresh

ಬೆಂಗಳೂರು:  ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ 30000ಸಾವಿರ ಜನರಿಗೆ ದಿನಸಿ ಕಿಟ್ ಗಳನ್ನು ಸಚಿವ ಬೈರತಿ ಸುರೇಶ್, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ, ಬೆಂಗಳೂರು ನಗರ ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಬ್ದುಲ್ ವಾಜಿದ್ ರವರು ವಿತರಿಸಿದರು.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್ ಗಳಲ್ಲಿ ದಿನಸಿ ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಮೈದಾ, ಶೇವಿಗೆ ಇನ್ನಿತರೆ ಆಹಾರ ಪದಾರ್ಥಗಳು ದಿನಸಿ ಕಿಟ್ ನಲ್ಲಿ ಇರುತ್ತದೆ.

ಇದೇ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್ ರವರು ಮಾತನಾಡಿ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ,ಆಶೀರ್ವಾದದಿಂದ ಶಾಸಕ, ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜ್ಯದ ಜನರು ಆಶೀರ್ವಾದದಿಂದ 136ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರು ಆಯ್ಕೆಯಾಗಿದ್ದಾರೆ.

5 ಗ್ಯಾರೆಂಟಿ ಯೋಜನೆಗಳು ನಾಡಿನ ಜನತೆಗೆ ನೀಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ. ಮನೆಯ ಯಾಜಮಾನಿಗೆ 2ಸಾವಿರ, 200ಯೂನಿಟ್ ವಿದ್ಯುತ್ ಉಚಿತ, ಅನ್ನಭಾಗ್ಯ, ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಯುವನಿಧಿ ಯೋಜನೆಗಳು.

ನೀವು ಆಶೀರ್ವಾದದಿಂದ ದಿನಸಿ ಕಿಟ್ ಗಳನ್ನು ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಿಜೆಪಿ ಸರ್ಕಾರ ಜನರಿಗೆ ಯಾವುದೇ ಯೋಜನೆ ನೀಡಿಲ್ಲ. ಹಿಂದೂ ಮುಸ್ಲಿಂ, ಕಿಶ್ಚಿಯನ್, ಜೈನ್, ಸಿಖ್ ಎಲ್ಲರು ಒಗ್ಗಾಟ್ಟಗಿ ಬಾಳಿ ಬದುಕುತ್ತಿದ್ದೇವೆ. ನಿಮ್ಮ ಆಶೀರ್ವಾದ, ಪ್ರೀತಿ ಇರುವ ನನ್ನನು ಏನು ಮಾಡಲು ಸಾಧ್ಯವಿಲ್ಲ. ವ್ಯಾಪಾರಕ್ಕಾಗಿ ಬಿಜೆಪಿ , ಜೆಡಿಎಸ್ ಪಕ್ಷಗಳು ಟೂರಿಂಗ್ ಟಾಕೀಸ್ ನಂತೆ ವರ್ತಿಸುತ್ತಿದೆ. ಎರಡು ಪಕ್ಷಗಳು ದೇಶದಿಂದ ತೊಲಗಲಿದೆ ಎಂದು ಹೇಳಿದರು.

ಅಬ್ದುಲ್ ವಾಜಿದ್ ರವರು ಮಾತನಾಡಿ ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದವರು ಸಹೋದರತ್ವದಲ್ಲಿ ಬಾಳುತ್ತಿದ್ದೇವೆ. ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಸಚಿವರಾದ ಬೈರತಿ ಸುರೇಶ್ ರವರು ಉತ್ತಮ ಆಡಳಿತ ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ 5 ಗ್ಯಾರೆಂಟಿ ಯೋಜನೆಗಳು ಮನೆ, ಮನೆಗಳಿಗೆ ತಲುಪಿಸಲಾಗಿದೆ. ಮನೆಯ ಯಾಜಮಾನಿಗೆ 24ಸಾವಿರ ವರ್ಷದಲ್ಲಿ ಸಿಗಲಿದೆ. ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ, ಅನ್ನಭಾಗ್ಯ ಅಕ್ಕಿ ಉಚಿತ, ವಿದ್ಯುತ್ ಉಚಿತ ಕಾರ್ಯಗಳಿಂದ ಮನೆ ಬಾಗಿಲಿಗೆ ಕಾಂಗ್ರೆಸ್ ಸರ್ಕಾರ ಬಂದಿದೆ.

ನಾಡಿನ ಜನರು 2028ಕ್ಕೆ ಮತ್ತೇ ಕಾಂಗ್ರೆಸ್ ಪಕ್ಷದ ಸರ್ಕಾರದ ಅಧಿಕಾರ ಬರಲಿ, ಮುಂದಿನ ಮುಖ್ಯಮಂತ್ರಿಗಳಾಗಿ ಸಿದ್ದರಾಮಯ್ಯರವರು ಆಗಲಿ ಎಂದು ಆಶೀರ್ವಾದ ಮಾಡಿ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *