ಬಿಜೆಪಿಯವರಿಗೆ ಪಕ್ಷ, ಸಿದ್ಧಾಂತ, ಪದ್ಧತಿ ಇಲ್ಲ, ನೀತಿ ನಿಯಮ ಅವರಿಗಿಲ್ಲ ಎಲ್ಲರ ಪರ, ವಿರೋಧ ಎಲ್ಲವೂ ಹೇಳುವರು. ಯಾವಾಗ ಏನು ಬೇಕಾದರು ಮಾತನಾಡುವರು ನಮ್ಮ ಮಾತಿನಿಂದ ಸಮಾಜದ ಮೇಲಾಗುವ ಅಶಾಂತಿ ಬಗ್ಗೆ ಎಚ್ಚರವಿರಬೇಕು ಎಂದು ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರು ಹಾಗೂ , ಕರ್ನಾಟಕ ವಿಧಾನ ಪರಿಷತ್ತು, ಸಭಾನಾಯಕ ಬೋಸರಾಜು ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಾಲಿಬಾನ್ ಸರ್ಕಾರವೆಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರವಾಗಿ ಮಾತನಾಡಿ ಈ ರೀತಿಯ ಹೇಳಿಕೆಗಳಿಂದ ಸಮಾಜದಲ್ಲಿ ಇಂತಹ ವಾತಾವರಣ ನಿರ್ಮಾಣವಾಗುತ್ತದೆ. ಅವರೇ ಸಿದ್ದರಾಮಯ್ಯ ಪರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಪಾರ್ಟಿಯಿಂದಲೇ ಅವರಿಗೆ ರಿಯಾಕ್ಷನ್ ಬಂದಿವೆ ಎಂದರು.
ಜನಪ್ರತಿನಿಧಿ ಆದವರು ಸಮಾಜದಲ್ಲಿ ಶಾಂತಿ,ನೆಮ್ಮದಿ ಕದಡುವ ಪರಿಸ್ಥಿತಿ ಮೂಡಿಸಬಾರದು ಬಿಜೆಪಿಯವರಿಗೆ ಇದು ಸಹಜ ಎನಿಸಿದೆ ಯಾವ್ದೊ ಒಂದು ಮಾತಾಡಿದಾಗ ಅನಾಹುತ ಆಗಲಿವೆ ಎಂದು ಸಚಿವರು ಎಚ್ಚರಿಸಿದರು.
ಮುನಿರತ್ನ ಈಗ ಸಿದ್ದರಾಮಯ್ಯ ಪರ ಹೇಳಿದ್ದಾರೆ ಯಾವುದೇ ವಿಚಾರ ಮಾತನಾಡುವಾಗ ಅದರ ಹಿನ್ನಲೆ ತಿಳಿದು ಮಾತಾಡಬೇಕು ಎಂದ ಅವರು ಘಟನೆಗಳ ಬಗ್ಗೆ ಪೊಲೀಸ್ ಇಲಾಖೆಯಲ್ಲಿ ಅಕೌಂಟ್ ಇವೆ ಅಸೆಂಬ್ಲಿ ಕೌನ್ಸಿಲ್ನಾಲ್ಲಿ ಎಲ್ಲಾ ಕ್ರೈಂ ವರದಿಯನ್ನು ಗೃಹಸಚಿವರು ನೀಡಿದ್ದಾರೆ ಎಂದು ಸಚಿವ ಬೋಸರಾಜ್ ತಿಳಿಸಿ ಉದಯಗಿರಿ ಗಲಾಟೆ ಪ್ರಕರಣ ವಿಚಾರ ಗಲಾಟೆ ಬಗ್ಗೆ ಮಾಹಿತಿಯಿಲ್ಲ ಮಾಹಿತಿ ಪಡೆದು ಪ್ರತಿಕ್ರಿಯಿಸುವೆ ಎಂದರು.