ಮುಂಬೈ: ಬೃಹನ್ ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಜಯಭೇರಿ ಬಾರಿಸಿದ್ದು, 4 ದಶಕಗಳ ಆಡಳಿತಕ್ಕೆ ಕೊನೆಗೊಳ್ಳುವ ಮೂಲಕ ಶಿವಸೇನೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಗುರುವಾರ ನಡೆದ ಬಿಎಂಸಿ ಚುನಾವಣೆಯಲ್ಲಿ ಸಮೀಕ್ಷೆ ವರದಿ ನಿಜವಾಗಿದ್ದು, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 4 ದಶಕಗಳ ನಂತರ ಇದೇ ಬಾರಿ ಪೂರ್ಣ ಬಹುಮತದೊಂದಿಗೆ ಗೆಲುವು ದಾಖಲಿಸಿದೆ.
ಮುಂಬೈಯ ಒಟ್ಟು 227 ವಾರ್ಡ್‌ಗಳ ಪೈಕಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 127 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಶಿವಸೇನೆ ಮೈತ್ರಿಕೂಟ 73 ಹಾಗೂ ಕಾಂಗ್ರೆಸ್ 15 ಹಾಗೂ ಇತರರು 15 ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಮುಂಬೈ ಉದ್ದವ್ ಶಿವಸೇನೆಯ ಭದ್ರ ಕೋಟೆಯಾಗಿದ್ದು ಕಳೆದ ಚುನಾವಣೆಯಲ್ಲಿ ಜಯಗಳಿಸಿತ್ತು. ಆದರೆ ಈ ಬಾರಿ ಉದ್ದವ್ ಕೋಟೆಯನ್ನು ಮಹಾಯುತಿ ಒಕ್ಕೂಟ ಛಿದ್ರ ಮಾಡುತ್ತಾ ಎಂಬ ಪ್ರಶ್ನೆ ಎದ್ದಿದೆ.
ನವಿ ಮುಂಬೈ ಪಾಲಿಕೆಯಲ್ಲಿ ಒಟ್ಟು 111 ವಾರ್ಡ್‌ಗಳಿವೆ. ಈ ಪೈಕಿ ಬಿಜೆಪಿ 15, ಶಿಂಧೆ ಶಿವಸೇನೆ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಸದ್ಯದ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಮತ್ತು ಉದ್ದವ್ ಶಿವಸೇನೆ ಯಾವ ವಾರ್ಡ್‌ನಲ್ಲೂ ಮುನ್ನಡೆ ಸಾಧಿಸಿಲ್ಲ.
ಥಾಣೆಯಲ್ಲಿ ಒಟ್ಟು 131 ವಾರ್ಡ್‌ಗಳಿದ್ದು ಶಿಂದೆ ಶಿವಸೇನೆ 14, ಬಿಜೆಪಿ 12, ಶರಾದ್ ಪವಾರ್ ಅವರ ಎನ್‌ಸಿಪಿ 2 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿವೆ.


