ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸೊಪ್ಪಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ದೈತ್ಯಾಕಾರದ ಕಾಡೆಮ್ಮೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ.
ಕಾಡಿನಿಂದ ದಾರಿತಪ್ಪಿ ಗ್ರಾಮಕ್ಕೆ ಬಂದ ಕಾಡೆಮ್ಮೆ ಆತಂಕದಿಂದ ಗ್ರಾಮದೆಲ್ಲೆಡೆ ಓಡಾಡಿದೆ. ಕಾಡೆಮ್ಮೆ ಓಡಾಟದ ದೃಶ್ಯ ಗ್ರಾಮಸ್ಥರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ಗ್ರಾಮಸ್ಥರು
ಆನೇಕಲ್ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸೂಕ್ತ ಕ್ರಮ ಕೈಗೊಂಡು ಕಾಡಾನೆಯನ್ನು ಕಾಡಿಗೆ ಸೇರಿಸುವುದಾಗಿ ಅರಣ್ಯಾಧಿಕಾರಿಗಳು ತಿಳಿಸಿದ್ದು, ಪರಿಸರದಲ್ಲಿ ಓಡಾಡುವಾಗ ಎಚ್ಚರಿಕೆ ವಹಿಸುವಂತೆಯೂ ಗ್ರಾಮಸ್ಥರಿಗೆ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಆನೇಕಲ್‌ನ ಲಕ್ಷ್ಮೀಪುರದಲ್ಲಿ ಕಾಡಾನೆ ದಾಳಿಗೆ ನಾಲ್ಕು ಎಕರೆ ಪ್ರದೇಶಕ್ಕೂ ಹೆಚ್ಚಿನ ಕಟಾವು ಹಂತದಲ್ಲಿದ್ದ ರಾಗಿ ಬೆಳೆ ನಾಶವಾಗಿದೆ.


