Thursday, February 12, 2026
Menu

ಬಿಕ್ಲು ಶಿವ ಕೊಲೆ ಕೇಸ್‌: ಬೈರತಿ ಬಸವರಾಜ್‌ ಸಿಐಡಿಗೆ ಸರೆಂಡರ್‌ ಆಗಿ ಎಂದ ಸುಪ್ರೀಂಕೋರ್ಟ್‌

byrati basavaraju

ರೌಡಿ ಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿ, ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರು ಸಿಐಡಿ ಮುಂದೆ ಸರೆಂಡರ್ ಆಗಿ ತನಿಖೆಗೆ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್‌ ಸಪ್ಷ್ಟವಾಗಿ ನಿರ್ದೇಶನ ನೀಡಿದೆ.  ಸಿಐಡಿ ವಿಚಾರಣೆಯನ್ನು ಯಾವುದೇ ಕಾರಣಕ್ಕೂ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿದ್ದು ಸಿಐಡಿ ತನಿಖೆ ಮತ್ತಷ್ಟು ಚುರುಕಾಗಲಿದೆ.

ಸುಪ್ರೀಂ ಕೋರ್ಟ್ ಬೈರತಿ ಬಸವರಾಜ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸಿದೆ. ನಿಯಮಿತ ಜಾಮೀನಿಗೆ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ. ಈ ಮೊದಲು ಕರ್ನಾಟಕ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರ ವಕೀಲ ಮುಕುಲ್ ರೊಹಟಗಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು. ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿ “ವಿಚಾರಣೆ ಎದುರಿಸಲು ಧೈರ್ಯ ತೋರಿಸಿ” ಎಂಬಂತೆ ಸೂಚನೆ ನೀಡಿದೆ ಎನ್ನಲಾಗಿದೆ.

ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಭೈರತಿ ಬಸವರಾಜ್ 5ನೇ ಆರೋಪಿ. ಕಳೆದ ಜುಲೈ 15ರಂದು ಬೆಂಗಳೂರಿನ ಹಲಸೂರು ಕೆರೆ ಸಮೀಪದಲ್ಲಿ ರೌಡಿ ಶೀಟರ್-ರಿಯಲ್ಟರ್ ಬಿಕ್ಲು ಶಿವನನ್ನು ಗುಂಪೊಂದು ಕೊಲೆ ಮಾಡಿತ್ತು. ಸಿಐಡಿ ತನಿಖೆಯಲ್ಲಿ ಭೈರತಿ ಬಸವರಾಜ್ ಹೊರ ಬಂದಿತ್ತು, ಈಗಾಗಲೇ 18 ಆರೋಪಿಗಳು ಸಿಐಡಿ ವಶದಲ್ಲಿದ್ದಾರೆ. ಬಸವರಾಜ್ ಮೊಬೈಲ್ ಸ್ವಿಚ್ ಆಫ್ ಮಾಡಿ ದುಬೈಗೆ ಪರಾರಿಯಾಗಿದ್ದಾರೆ ಎಂಬ ಆರೋಪಗಳಿವೆ. ಸಿಐಡಿ ಅವರ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿ ಬಂಧನಕ್ಕೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ.

ಬೈರತಿ ಬಸವರಾಜ್ ಅವರಿಗೆ ಯಾವುದೇ ಮಧ್ಯಂತರ ರಿಲೀಫ್ ನೀಡಲು ಸ್ಪಷ್ಟವಾಗಿ ನಿರಾಕರಿಸಿದ ಸುಪ್ರೀಂ ಕೋರ್ಟ್‌ ಸಿಐಡಿ ನಡೆಸುತ್ತಿರುವ ತನಿಖೆಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದಿದೆ. ಬಸವರಾಜ್ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದರು. ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಅದಕ್ಕೂ ಅವಕಾಶ ಕೊಟ್ಟಿಲ್ಲ.

Related Posts

Leave a Reply

Your email address will not be published. Required fields are marked *