ಬೆಂಗಳೂರಿನಲ್ಲಿ ಬಿಕ್ಲು ಶಿವ ಕೊಲೆ ನಡೆದು ವಾರ ಕಳೆದರೂ ಪ್ರಮುಖ ಆರೋಪಿ ಜಗದೀಶ ಇನ್ನೂ ಪೊಲೀಸರಿಗೆ ಪತ್ತೆಯಾಗಿಲ್ಲ, ಆದರೆ ಆತ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.
ಕೊಲೆಯ ಪ್ರಮುಖ ಆರೋಪಿ ಜಗದೀಶ್‌ಗೆ ಶಾಸಕ ಬೈರತಿ ಬಸವರಾಜ್ ಶ್ರೀರಕ್ಷೆ ಎಂಬ ಆರೋಪ ಕೇಳಿ ಬಂದಿದೆ. ಈ ಕೊಲೆ ನಡೆಯುವ ಮೊದಲೇ ಆರೋಪಿ ಜಗದೀಶ್ ಮನೆ ಖಾಲಿ ಮಾಡಿದ್ದು, ಒಂದು ವಾರದಿಂದ ಆತನಿಗಾಗಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಕೇಸ್ ದಾಖಲಾದ ಎರಡೇ ದಿನಕ್ಕೆ ಆತ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಆದರೆ ಪೊಲೀಸರಿಗೆ ಜಗದೀಶ್ ಎಲ್ಲಿದ್ದಾನೆ ಎಂಬ ಸುಳಿವು ಸಿಗುತ್ತಿಲ್ಲ.
ಬಿಕ್ಲು ಶಿವು ಕೊಲೆ ಪ್ರಕರಣ ಸಂಬಂಧ ಭಾರತಿ ನಗರ ಪೊಲೀಸರು ಶಾಸಕ ಭೈರತಿ ಬಸವರಾಜ್ ಅಣ್ಣನ ಮಗ ಅನಿಲ್ ಸೇರಿದಂತೆ ಈವರೆಗೆ ಒಟ್ಟು 7 ಜನರನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ಭಾರತಿ ನಗರ ಪೊಲೀಸರು ಶಾಸಕ ಭೈರತಿ ಬಸವರಾಜ್ ಅಣ್ಣನ ಮಗ ಅನಿಲ್ ಎಂಬಾತನನ್ನು ಅರೆಸ್ಟ್ ಮಾಡಿದೆ. ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಹಿಂದೆ ಭೈರತಿ ಬಸವರಾಜ್ ಅವರನ್ನು ವಿಚಾರಣೆ ನಡೆಸಿತ್ತು.