ಶಿವಮೊಗ್ಗದ ಬೇಡರ ಹೊಸಹಳ್ಳಿ ಕ್ರಾಸ್ ನಲ್ಲಿ ಸೋಮವಾರ ರಾತ್ರಿ ಕೆಲಸ ಮುಗಿಸಿ ರಾತ್ರಿ 11 ಗಂಟೆಗೆ ಮನೆಗೆ ತೆರಳುತ್ತಿದ್ದ ಬೈಕ್ ಸವಾರನಿಗೆ ಅಪರಿಚ ವಾಹನವೊಂದು ಡಿಕ್ಕಿ ಹೊಡೆದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸಚಿನ್ (25) ಮೃತ ಯುವಕ. ಡಿಕ್ಕಿ ಹೊಡೆದ ವಾಹನವನ್ನು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ. ಕ್ಯಾತಿನಕೊಪ್ಪ ಗ್ರಾಮದ ನಿವಾಸಿ ಸಚಿನ್ ಶಿವಮೊಗ್ಗದಲ್ಲಿ ಮೆಡಿಕಲ್ ರೆಪ್ ಕೆಲಸ ಮಾಡುತ್ತಿದ್ದ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಕ್ಕಿ ಹೊಡೆದು ಪರಾರಿಯಾಗಿರುವ ವಾಹನ ಮತ್ತು ಚಾಲಕನಿಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದು, ಶೀಘ್ರವೇ ಪತ್ತೆಹಚ್ಚುವುದಾಗಿ ತಿಳಿಸಿದ್ದಾರೆ.