ಮುಧೋಳ ನಗರದ ಮಂಡ ಬಸಪ್ಪ ದೇವಸ್ಥಾನದ ಬಳಿಎರಡು ಬೈಕ್‌ಗಳು ಪರಸ್ಪರ ಡಿಕ್ಕಿಯಾಗಿದ್ದು, ಈ ವೇಳೆ ಒಂದು ಬೈಕ್‌ನಿಂದ ರಸ್ತೆಗೆ ಬಿದ್ದ ಬಾಲಕಿಯ ಮೇಲೆ ಟ್ರ್ಯಾಕ್ಟರ್ ಹರಿದು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬೈಕ್‌ನಲ್ಲಿದ್ದ ಬರಗಿ ಗ್ರಾಮದ ನಿವಾಸಿ, 7 ವರ್ಷದ ಬಾಲಕಿ ಅಂಜಲಿ ಸ್ಥಳದಲ್ಲೇ ಮೃತಪಟ್ಟವಳು. ಆಕೆ ಮುಧೋಳದಿಂದ ಬರಗಿ ಗ್ರಾಮಕ್ಕೆ ತಂದೆ ಉಮೇಶ್ ಜೊತೆ ಪುತ್ರಿ ಅಂಜಲಿಯೂ ಹೊರಟಿದ್ದಳು.
ಈ ದುರಂತ ನಡೆದ ತಕ್ಷಣ ಸ್ಥಳದಲ್ಲೇ ಟ್ರ್ಯಾಕ್ಟರ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮುಧೋಳ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.