ಸ್ನೇಹಿತರ ದಿನವನ್ನು ಸಂಭ್ರಮಿಸಲೆಂದು ಬೈಕ್‌ನಲ್ಲಿ ನಂದಿಬೆಟ್ಟಕ್ಕೆ ತೆರಳಿದ್ದ ಸ್ನೇಹಿತರಿಬ್ಬರು ರಸ್ತೆ ಅಪಘಾತಕ್ಕೆ ಬಲಿಯಾಗಿದಾರೆ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಬೆಟ್ಟದ ರಸ್ತೆಯ 15ನೇ ತಿರುವಿನ ಬಳಿಈ ಅಪಘಾತ ಸಂಭವಿಸಿದೆ.
ಚಿಕ್ಕಬಳ್ಳಾಪುರ ಕಣಿತಹಳ್ಳಿ ಗ್ರಾಮದ ಅರವಿಂದ್ (21) ಹಾಗೂ ಶ್ರೀಕಾಂತ್ (21) ಮೃತಪಟ್ಟವರು. ಇಬ್ಬರು ಸ್ನೇಹಿತರಾಗಿದ್ದು ಫ್ರೆಂಡ್‌ಶಿಪ್ ಸೆಲಬ್ರೇಷನ್ ಪ್ಲ್ಯಾನ್ ಮಾಡಿಕೊಂಡು ಒಂದೇ ಬೈಕ್‌ನಲ್ಲಿ ಬೆಟ್ಟಕ್ಕೆ ಹೋಗಿ ವಾಪಸ್ ಬರುವಾಗ ಅಪಘಾತ ನಡೆದಿದೆ.
ರಸ್ತೆ ಬದಿಯಲ್ಲಿರುವ ದೊಡ್ಡ ಬಂಡೆಗಲ್ಲಿಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರ ತಲೆಗಳಿಗೆ ಗಂಭೀರ ಗಾಯಗಾಳಾಗಿ ಮೃತಪಟ್ಟಿದ್ದಾರೆ. ಮೃತದೇಹಗಳನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.