Menu

ಚೀನಾದ ಬಳಿಕ ಭಾರತದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ: ಟ್ರಂಪ್‌

ನಾವು ನಿನ್ನೆ ಚೀನಾದೊಂದಿಗೆ ಸಹಿ ಹಾಕಿದ್ದೇವೆ. ನಾವು ಕೆಲವು ಉತ್ತಮ ಒಪ್ಪಂದಗಳನ್ನು ಹೊಂದಿದ್ದೇವೆ. ಭಾರತದ ಜೊತೆ ಶೀಘ್ರವೇ ಬಹಳ ದೊಡ್ಡ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ಭಾರತ ಮತ್ತು ಅಮೆರಿಕ ನಡುವೆ ಕಳೆದ 4 ದಿನಗಳಿಂದ ವ್ಯಾಪಾರ ಒಪ್ಪಂದ ಸಂಬಂಧ ಸುದೀರ್ಘ ಮಾತುಕತೆ ನಡೆಯುತ್ತಿದೆ. ಈ ಸಮಯದಲ್ಲೇ ಟ್ರಂಪ್‌ ಶ್ವೇತ ಭವನದಲ್ಲಿ ನಡೆದ ಬಿಗ್ ಬ್ಯೂಟಿಫುಲ್ ಕಾರ್ಯಕ್ರಮದಲ್ಲಿ ಭಾರತದ ಜೊತೆಗಿನ ಒಪ್ಪಂದ ಬಗ್ಗೆ ಮಾತನಾಡಿದರು.

ಪ್ರತಿಯೊಬ್ಬರೂ ಒಪ್ಪಂದ ಮಾಡಿಕೊಳ್ಳಲು ಮತ್ತು ಭಾಗವಹಿಸಲು ಬಯಸುತ್ತಾರೆ. ಭಾರತದೊಂದಿಗೆ ಬಹಳ ದೊಡ್ಡ ಒಪ್ಪಂದ ಮಾಡುತ್ತಿದ್ದೇವೆ. ನಾವು ಎಲ್ಲರೊಂದಿಗೆ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಕೆಲವರಿಗೆ ಮಾತ್ರ ಪತ್ರ ಕಳುಹಿಸುತ್ತೇವೆ ಎಂದು ಹೇಳಿದರು.

ಮಾತುಕತೆ ವೇಳೆ ಎರಡು ದೇಶಗಳ ನಡುವೆ ಪ್ರಸ್ತುತ ಇರುವ 190 ಬಿಲಿಯನ್ ಡಾಲರ್‌ ವಾರ್ಷಿಕ ದ್ವಿಪಕ್ಷೀಯ ವ್ಯಾಪಾರವನ್ನು 2023ರ ವೇಳೆಗೆ 500 ಬಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ. ಚೀನಾದ ಜೊತೆ ಅಮೆರಿಕದ ವ್ಯಾಪಾರ ಒಪ್ಪಂದದ ವಿವರ ಲಭ್ಯವಾಗದೇ ಇದ್ದರೂ ಅಪರೂಪದ ಭೂ ಖನಿಜ ರಫ್ತನ್ನು ತ್ವರಿತಗೊಳಿಸಲು ಈ ಒಪ್ಪಂದ ಗಮನಹರಿಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *