ಬಾಲಿವುಡ್ ನಟ ಸಲ್ಮಾನ್ ಖಾನ್ ಬಿಗ್ ಬಾಸ್ 19ನೇ ಆವೃತ್ತಿಯ ನಿರೂಪಣೆಗೆ 120ರಿಂದ 150 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಅತ್ಯಂತ ಜನಪ್ರಿಯವಾಗಿರುವ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಹಿಂದಿ ಆವೃತ್ತಿಯನ್ನು ನಡೆಸಿಕೊಡುತ್ತಿರುವ ಸಲ್ಮಾನ್ ಖಾನ್, ಪ್ರತಿ ಆವೃತ್ತಿಗೂ ತಮ್ಮ ಸಂಭಾವನೆ ವೃದ್ಧಿಸಿಕೊಳ್ಳುತ್ತಿದ್ದಾರೆ. ಈ ಬಾರಿ ಸಂಭಾವನೆ ಹೆಚ್ಚಿಸಿಕೊಂಡಿದ್ದು, 120 ರಿಂದ 150 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಪ್ರತೀ ವೀಕೆಂಡ್ ನಲ್ಲಿ ಎರಡು ದಿನ ನಡೆಸಿಕೊಡುವ ಕಾರ್ಯಕ್ರಮದಲ್ಲಿ ೮ರಿಂದ 10 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಅಂದರೆ ಒಂದು ದಿನಕ್ಕೆ ಸುಮಾರು 5 ಕೋಟಿ ರೂ. ಸಂಭಾವನೆ ಪಡೆದಂತೆ ಆಗುತ್ತದೆ. ಸುಮಾರು 15 ವಾರ ಬಿಗ್ ಬಾಸ್ ಪ್ರಸಾರ ಆಗಲಿದ್ದು, ಒಟ್ಟಾರೆ 150 ಕೋಟಿ ರೂ. ಆಗಬಹುದು ಎಂದು ನಿರೀಕ್ಷಿಸಲಾಗಿದೆ.
ಬಿಗ್ ಬಾಸ್ ಬಜೆಟ್ ಕಡಿಮೆ ಆಗಿದ್ದು, ಕಳೆದ ಬಾರಿ ಓಟಿಟಿ-2 ಕಾರ್ಯಕ್ರಮ ನಡೆಸಿಕೊಟ್ಟಾಗ ಸಲ್ಮಾನ್ ಖಾನ್ 96 ಕೋಟಿ ರೂ. ಸಂಭಾವನೆ ಪಡೆದಿದ್ದರು. ಬಿಗ್ ಬಾಸ್ 17 ಮತ್ತು 18ನೇ ಆವೃತ್ತಿಯಲ್ಲಿ 200 ಮತ್ತು 250 ಕೋಟಿ ರೂ. ಸಂಭಾವನೆ ಪಡೆದಿದ್ದ ಸಲ್ಮಾನ್ ಖಾನ್ ಈ ಬಾರಿ ಸಂಭಾವನೆ ಮೊತ್ತದಲ್ಲಿ ಇಳಿಕೆಯಾಗಿದೆ.
ಮೂಲಗಳ ಪ್ರಕಾರ 5 ತಿಂಗಳ ಕಾಲ ನಡೆಯಲಿರುವ ಬಿಗ್ ಬಾಸ್ 19ನೇ ಆವೃತ್ತಿಯ ಆರಂಭದ ಮೂರು ತಿಂಗಳು ಮಾತ್ರ ಸಲ್ಮಾನ್ ಖಾನ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದು, ನಂತರದ ಮೂರು ತಿಂಗಳು ವಿವಿಧ ಸೆಲೆಬ್ರೆಟಿಗಳು ನಡೆಸಿಕೊಡಲಿದ್ದಾರೆ. ಇವರಲ್ಲಿ ಅನಿಲ್ ಕಪೂರ್, ಅರ್ಷಿಫಾ ಖಾನ್ ಮತ್ತು ಮಿಕ್ಕಿ ಮೇಕ್ ಓವರ್ ಇದ್ದಾರೆ ಎಂದು ಹೇಳಲಾಗಿದೆ.