Menu

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: 6ನೇ ಸ್ಥಳದಲ್ಲಿ ತಲೆಬುರುಡೆ ಪತ್ತೆ

dharmastala case

ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳಿಗೆ ಗುರುವಾರ 6ನೇ ಸ್ಥಳದಲ್ಲಿ ತಲೆಬುರುಡೆ ಸೇರಿದಂತೆ 7ರಿಂದ 8 ಮೂಳೆಗಳು ಪತ್ತೆಯಾಗಿವೆ.

ಕಳೆದ ಮೂರು ದಿನಗಳಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ದೂರುದಾರ ಗುರುತಿಸಿದ 13 ಸ್ಥಳಗಳಲ್ಲಿ ಉತ್ಖನನ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳು ಗುರುವಾರ 6ನೇ ಸ್ಥಳದಲ್ಲಿ ಶೋಧ ಕಾರ್ಯ ಪೂರ್ಣಗೊಳಿಸಿದ್ದು, ಅಸ್ಥಿಪಂಜರದ ಆವಶೇಷಗಳು ಪತ್ತೆಯಾಗಿವೆ.

ಕಳೆದ 3 ದಿನಗಳಿಂದ ನಡೆದ 5 ಸ್ಥಳದಲ್ಲಿಯಲ್ಲಿ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. ಆದರೆ ಗುರುವಾರ 6ನೇ ಸ್ಥಳದಲ್ಲಿ ತಲೆಬುರುಡೆ ಸೇರಿದಂತೆ 7-8 ಮೂಳೆಗಳು ಪತ್ತೆಯಾಗಿದೆ. ಕೈಕಾಲು ಮೂಳೆಗಳನ್ನು ಪರೀಕ್ಷಿಸಲಾಗಿದ್ದು, ಇದು ಪರುಷನದ್ದು ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು 6ನೇ ಸ್ಥಳವನ್ನು ಸಂರಕ್ಷಿತ ಪ್ರದೇಶ ಎಂದು ಗುರುತು ಮಾಡಿದೆ.

ಪತ್ತೆಯಾದ ಮೂಳೆಗಳು ಪುರುಷ ಕೈ ಮೂಳೆಗಳು ಎನ್ನಲಾಗಿದ್ದು, ಎಸ್ ಐಟಿ ಮಾಹಿತಿಯನ್ನು ಸಂಗ್ರಹಿಸುತ್ತಿದ್ದು, ಮೂಳೆಯ ಮಹಜರು ಕಾರ್ಯ ನಡೆಸಿದ್ದಾರೆ. ಇದೇ ವೇಳೆ ಎಸ್ ಐಟಿ ಮುಖ್ಯ ಮಹಾಂತಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

ಆವಶೇಷಗಳ ಮಹಜರು ನಡೆಸುವಾಗ ಎಸ್ ಐಟಿ ಅಧಿಕಾರಿಗಳು ಕವರ್ ನಿಂದ ಪ್ರದೇಶವನ್ನು ಮುಚ್ಚಿ ಪರಿಶೀಲನೆ ನಡೆಸಿದ್ದಾರೆ. ಬೆಳಿಗ್ಗೆ ಉತ್ಖನನ ಆರಂಭಿಸುವ ವೇಳೆ 6ನೇ ಪಾಯಿಂಟ್ ನಲ್ಲಿ ಮಳೆ ನೀರು ಹಾಗೂ ನೀರಿನ ಒರತೆಯಿಂದ ಮುಚ್ಚಿತ್ತು. ನೀರು ತೆಗೆಯುವ ಯಂತ್ರದ ಮೂಲಕ ನೀರು ತೆಗೆಸಿ ಮಣ್ಣು ತೆಗೆಸುವಾಗ ಅಸ್ಥಿಪಂಜರದ ಆವಶೇಷಗಳು ಪತ್ತೆಯಾಗಿವೆ.

Related Posts

Leave a Reply

Your email address will not be published. Required fields are marked *