Menu

ಸಿಎಸ್ ಶಾಲಿನಿ ರಜನೀಶ್ ವಿರುದ್ಧ ಅಶ್ಲೀಲ ನಿಂದನೆ: ಬಿಜೆಪಿ ಎಂಎಲ್ ಸಿ ರವಿಕುಮಾರ್ ಗೆ ಬಿಗ್ ರಿಲೀಫ್

ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ವಿಧಾನಪರಿಷತ್ ಸದಸ್ಯ ರವಿಕುಮಾರ್‌ ಅವರನ್ನು ಜುಲೈ 8ರವರೆಗೆ ಬಂಧಿಸದಂತೆ  ಹೈಕೋರ್ಟ್‌ ಸೂಚಿಸಿದೆ.

ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ ರದ್ದುಗೊಳಿಸುವಂತೆ ರವಿಕುಮಾರ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಸ್.ಆರ್ ಕೃಷ್ಣಕುಮಾರ್ ನೇತೃತ್ವದ  ಪೀಠ ಜುಲೈ 8ರವರೆಗೆ ಬಂಧಿಸದಂತೆ ಪೊಲೀಸರಿಗೆ ಸೂಚನೆ ನೀಡಿದ್ದು, ಅಲ್ಲಿಯವರೆಗೂ ತನಿಖೆಗೆ ಸಹಕರಿಸುವಂತೆ ರವಿಕುಮಾರ್ ಗೆ ಸೂಚಿಸಿದೆ.

ರವಿಕುಮಾರ್ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಎಂಎಲ್‌ಸಿ ರವಿಕುಮಾರ್ ವಿಧಾನಸೌಧ ಬಳಿ ಪ್ರತಿಭಟನೆ ವೇಳೆ ಶಾಲಿನಿ ರಜನೀಶ್ ವಿರುದ್ಧ ಮಾತನಾಡಿರುವ ವೀಡಿಯೋ ಆಧರಿಸಿ ಎಫ್ ಐಆರ್ ದಾಖಲಿಸಿಕೊಳ್ಳಲಾಗಿದೆ.

ಮುಖ್ಯ ಕಾರ್ಯದರ್ಶಿ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ ಎಂದು ರವಿಕುಮಾರ್ ಮೆಚ್ಚುಗೆ ಸೂಚಿಸಿದ್ದಾರೆ. ಇದು ರಾಜಕೀಯ ದುರುದ್ದೇಶದ ಪ್ರಕರಣವಾಗಿದ್ದು, ಪೀಠಕ್ಕೆ ರವಿಕುಮಾರ್ ಏನು ಮಾತನಾಡಿದ್ದಾರೆ ಎಂಬುದರ ವಿಡಿಯೊವನ್ನು ಟ್ಯಾಬ್ ಮೂಲಕ ತೋರಿಸಿದರು.

ಎಸ್‌ಪಿಪಿ ಬೆಳ್ಳಿಯಪ್ಪ ಪ್ರತಿವಾದ ಮಂಡಿಸಿ ರವಿಕುಮರ್ 2ನೇ ಬಾರಿ ಹೀಗೆ ಮಾತನಾಡಿದ್ದಾರೆ. ಈ ಹಿಂದೆ ಮಹಿಳಾ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನದ ಸಹೋದರಿ ಎಂದು ನಿಂದಿಸಿದ್ದರು. ನಾವು ಇಲ್ಲಿ ಡಿಸೈಡ್ ಮಾಡೋದಕ್ಕೆ ಬರೋದಿಲ್ಲ, ತನಿಖೆ ಆಗಲಿ, ಎಫ್‌ಐಆರ್ ಆಗಿ 24 ಗಂಟೆ ಕಳೆದಿಲ್ಲ ಆಗಲೇ ಕೋರ್ಟ್‌ಗೆ ಬಂದಿದ್ದಾರೆ. ಆರೋಪಿ ಮುಖ್ಯ ಕಾರ್ಯದರ್ಶಿ ಅವರ ಹೇಳಿಕೆ ದಾಖಲಿಸಬೇಕಿದೆ. ಮಾಧ್ಯಮಗಳ ಹೇಳಿಕೆಯನ್ನೂ ದಾಖಲಾಸಲಾಗುತ್ತೆ, ಇದೊಂದು 7 ವರ್ಷಗಳವರೆಗಿನ ಸಜೆಯುಳ್ಳ ಕೇಸ್ ಆಗಿದ್ದು, ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ಇಲ್ಲಿ ರಕ್ಷಣೆ ಕೋರೋದು ಸರಿಯಿಲ್ಲ. ಐಎಎಸ್ ಅಧಿಕಾರಿಗಳು ಇವ್ರ ವಿರುದ್ಧ ಪ್ರತಿಭಟಿಸ್ತಿದ್ದಾರೆ ಅಂತ ವಾದ ಮಂಡಿಸಿದರು.

ರಾಜಕಾರಣಿಗಳು ಬಳಸುವ ಭಾಷೆ ಕೆಳಮಟ್ಟಕ್ಕಿಳಿದಿದೆ ಅಂತ ಅಭಿಪ್ರಾಯ ಪಟ್ಟ ನ್ಯಾಯಾಧೀಶರು, ಜುಲೈ 8ರ ವರೆಗೆ ಬಂಧಿಸದಂತೆ, ತನಿಖೆಗೆ ಸಹಕಾರ ನೀಡುವಂತೆ ಆದೇಶ ನೀಡಿದ್ರು. ಇನ್ನು ಸಂಜೆ ವೇಳೆಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ್ ಭಟ್, ಎಂಎಲ್‌ಸಿ ರವಿಕುಮಾರ್‌ಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಬಂಧನ ಭೀತಿಯಲ್ಲಿದ್ದ ರವಿಕುಮಾರ್‌ಗೆ ಎರಡೂ ಕೋರ್ಟ್ ಗಳ ಆದೇಶ ನಿರಾಳತೆ ತಂದಿದೆ.

Related Posts

Leave a Reply

Your email address will not be published. Required fields are marked *