ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ರೈತ ನೀತಿಗಳನ್ನು ವಿರೋಧಿಸಿ ಸೆಂಟ್ರಲ್ ಟ್ರೇಡ್ ಯೂನಿಯನ್ಗಳು ಜುಲೈ 9 ರಂದು ಭಾರತ ಬಂದ್ಗೆ ಕರೆ ಕೊಟ್ಟಿವೆ. ಹತ್ತು ಟ್ರೇಡ್ ಯನಿಯನ್ಗಳ 25 ಕೋಟಿಗೂ ಹೆಚ್ಚು ಕಾರ್ಮಿಕರು ಈ ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಬ್ಯಾಂಕ್, ಪೋಸ್ಟ್, ವಿಮೆ ಕಂಪನಿಗಳು, ಗಣಿ ಸಂಸ್ಥೆಗಳು, ಖಾಸಗಿ ಸಾರಿಗೆ ಸಂಸ್ಥೆಗಳ ಸೇವೆಗಳಲ್ಲಿ ವ್ಯತ್ಯಯವಾಗಬಹುದು.
ಕಾರ್ಮಿಕ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಅನುಸರಿಸುತತ ಕೇಂದ್ರ ಸರ್ಕಾರವು ಕಾರ್ಪೊರೇಟ್ ಕಂಪನಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಟ್ರೇಡ್ ಯೂನಿಯನ್ಗಳು ಆರೋಪಿಸಿವೆ. ಕೇಂದ್ರ ಸರ್ಕಾರದ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾಗೆ ಕಳೆದ ವರ್ಷ ಸಲ್ಲಿಸಿದ 17 ಬೇಡಿಕೆಗಳನ್ನು ಈಡೇರಿಸಿಲ್ಲ, ಬೇಡಿಕೆಗಳ ಶೀಘ್ರ ಜಾರಿಗೆ ಸರ್ಕಾರದ ಗಮನ ಸೆಳೆಯಲು ಮುಷ್ಕರಕ್ಕೆ ಸಂಘಟನೆಗಳು ಮುಂದಾಗಿವೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಅಮರಜೀತ್ ಕೌರ್ ಬಂದ್ ತಿಳಿಸಿದ್ದಾರೆ.
ಶಾಲೆಗಳು ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಖಾಸಗಿ ಬಸ್ಗಳ ಸಿಬ್ಬಂದಿ ಬಂದ್ ಬೆಂಬಲಿಸಿ ಮುಷ್ಕರ ಕೈಗೊಂಡರೆ ಬಸ್ಗಳಲ್ಲಿ ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗಬಹುದು. ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ, ನೈರುತ್ಯ, ವಾಯವ್ಯ ಸಾರಿಗೆ ಹಾಗೂ ಬಿಎಂಟಿಸಿ ಬಸ್ಗಳು ಎಂದಿನಂತೆ ಸಂಚರಿಸಲಿವೆ. ಕರ್ನಾಟಕದ ಆಟೋ, ಟ್ಯಾಕ್ಸಿ ಹಾಗೂ ಖಾಸಗಿ ಬಸ್ ಮಾಲೀಕರು, ಸಂಘಟನೆಗಳು ಬಂದ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿಲ್ಲ.
ಸರ್ಕಾರ ಖಾಸಗೀಕರಣ ಕೈಬಿಡಬೇಕು.ಸಾರ್ವಜನಿಕ ವಲಯದಲ್ಲಿ ನೇಮಕಾತಿ ಹೆಚ್ಚಳ ಮಾಡಬೇಕು. ಕಾರ್ಮಿಕ ಕೂಲಿ ಹೆಚ್ಚಳ ಮಾಡಬೇಕು. ಭಾರತೀಯ ಕಾರ್ಮಿಕರ ಸಮ್ಮೇಳನ ಮಾಡಬೇಕು. ಕಾರ್ಮಿಕರ ಕೆಲಸದ ಸಮಯ ಹೆಚ್ಚಾಳಕ್ಕೆ ಮುಂದಾಗಬಾರದು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ತಡೆಯಬೇಕು.ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಯೋಜನೆಗಳಿಗಾಗಿ ಮೀಸಲಿಟ್ಟ ಹಣವನ್ನು ಸರ್ಕಾರ ಕಡಿತಗೊಳಿಸದೇ ಹೆಚ್ಚಿನ ಅನುದಾನ ನೀಡಬೇಕು ಎಂಬುದು ಟ್ರೇಡ್ ಯೂನಿಯನ್ಗಳ ಆಗ್ರಹವಾಗಿದೆ.