Thursday, February 12, 2026
Menu

ಕಾರ್ಮಿಕ ಸಂಘಟನೆಗಳಿಂದ ಇಂದು ಭಾರತ್‌ ಬಂದ್‌

ದೇಶಾದ್ಯಂತ ಹಲವು ಕಾರ್ಮಿಕ ಸಂಘಟನೆಗಳು ಇಂದು (ಗುರುವಾರ) ಭಾರತ್ ಬಂದ್‌ಗೆ ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳ ರದ್ದು  ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲೂ ಪ್ರತಿಭಟನೆಗೆ ಕರೆ ನೀಡಲಾಗಿದೆ.

ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯೂಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಸೇರಿದಂತೆ 10 ಕೇಂದ್ರ ಕಾರ್ಮಿಕ ಸಂಘಗಳು ಪ್ರತಿಭಟನೆ ನಡೆಸುತ್ತಿವೆ. ಈ ಸಂಘಟನೆಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಅಖಿಲ ಭಾರತ ಕಿಸಾನ್ ಸಭಾ ಬೆಂಬಲ ನೀಡಿವೆ. ರಾಜ್ಯದಲ್ಲಿ ಬಹುತೇಕ ಸಹಜ ವಾಗಿಯೇ ಇರಲಿದೆ. ಬಸ್, ರೈಲು, ಆಟೋ, ಕ್ಯಾಬ್, ಮೆಟ್ರೋ, ಅಂಗಡಿ ಮುಂಗಟ್ಟು, ಶಾಲೆ ಕಾಲೇಜು ಎಂದಿನಂತಿರುತ್ತದೆ.

ಬೆಂಗಳೂರಲ್ಲಿ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್‌ನಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ರಾಜ್ಯ ಕಾರ್ಮಿಕ ಸಂಘಟನೆಗಳು ಅಥವಾ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್‌ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಸಂಹಿತೆ ರದ್ದುಗೊಳಿಸಬೇಕು. ನರೇಗಾ ಯೋಜನೆ ಪುನರ್ ಸ್ಥಾಪಿಸಬೇಕು, ವಿಜಿ ರಾಮ್ ಜಿ ಕಾಯ್ದೆ, ಭೂಸ್ವಾಧೀನ ಕಾಯ್ದೆ, ಬೀಜ ಮಸೂದೆ ಕಾಯ್ದೆ ರದ್ದುಗೊಳಿಸಬೇಕು. ವಿದ್ಯುತ್ ಖಾಸಗೀಕರಣ ಕೈ ಬಿಟ್ಟು ವಿಮಾ ತಿದ್ದುಪಡಿ ಕಾಯ್ದೆ, ಶಾಂತಿ ಕಾಯ್ದೆ ರದ್ದುಗೊಳಿಸಬೇಕು ಎಂದು ಆಗ್ರಹಿಸುತ್ತಿವೆ.

ರಾಜ್ಯದಲ್ಲಿ ಕನಿಷ್ಟ ವೇತನ ಪರಿಷ್ಕ್ರರಣೆಯಾಗಬೇಕೆಂಬ ಪ್ರಮುಖ ಬೇಡಿಕೆ ಮೊಳಗಿದೆ. ಪ್ರತಿಭಟನೆಗೆ ಬೆಂಗಳೂರು ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್, ಸಾರಿಗೆ ಚಾಲಕರ ಸಂಘಟನೆ ಬೆಂಬಲಿಸಿದೆ.

ಅನಧಿಕೃತ ಬೈಕ್ ಟ್ಯಾಕ್ಸಿಗಳನ್ನು ಸುಗ್ರೀವಾಜ್ಞೆ ಮೂಲಕ ನಿಷೇಧಿಸಬೇಕು, ಮೋಟಾರ್ ವಾಹನ ತಿದ್ದುಪಡಿ ಕಾಯ್ದೆ -2019 ವಾಪಸ್ ಪಡೆಯಬೇಕು, ಚಾಲಕರ ಮೇಲಿನ ಹಿಟ್ ಆಂಡ್ ರನ್ ಕೇಸ್ ವಾಪಸ್ ಪಡೆಯಬೇಕು, ಸಾರಿಗೆ ಚಾಲಕರ ಕಲ್ಯಾಣ ಮಂಡಳಿಗೆ 500 ಕೋಟಿ ಅನುದಾನ ನೀಡಬೇಕು, ಅನಧಿಕೃತ ಓಲಾ, ಊಬರ್, ನಮ್ಮ ಯಾತ್ರಿ, ಆಪ್ ವ್ಯವಸ್ಥೆ ರದ್ದುಗೊಳಿಸಬೇಕು, ಆಟೋ ಚಾಲಕರಿಗೆ ಪ್ರತಿ ತಿಂಗಳು 25 ಸಾವಿರ ಸಹಾಯಧನ ನೀಡಬೇಕು, ಸರ್ಕಾರದ ವತಿಯಿಂದ ಒಂದು ಆಪ್ ರಚಿಸಬೇಕೆಂದು ಒತ್ತಾಯಿಸಲಾಗುತ್ತಿದೆ.

Related Posts

Leave a Reply

Your email address will not be published. Required fields are marked *