Thursday, September 11, 2025
Menu

ಈಜಿಪುರ ಫ್ಲೈ ಓವರ್‌ ಈಸಿ ಮಾಡಿ: ಟ್ರಂಪ್‌ ಮಧ್ಯಸ್ಥಿಕೆ ಕೋರಿದ ಟ್ವೀಟ್‌ ವೈರಲ್‌

ವಿಳಂಬಗೊಳ್ಳುತ್ತಿರುವ ಈಜಿಪುರ ಫ್ಲೈಓವರ್ ಕಾಮಗಾರಿಯಿಂದ ನಾಗರಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ, ನೀವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೊತೆ ಮಾತನಾಡಿ ಈಜಿಪುರ ಮೇಲ್ಸೇತುವೆ ಕೆಲಸವನ್ನು ಬೇಗ ಈಸಿ ಆಗಿ ಮುಗಿಸಲು ಸಹಾಯ ಮಾಡಬಹುದೇ, ಅದಕ್ಕೆ “ಮಗಾ ಟ್ರಂಪ್ ಮೇಲ್ಸೇತುವೆ” ಎಂದು ಹೆಸರಿಡುವುದಾಗಿ ಮಾಡಿರುವ  ಹಾಸ್ಯಾಸ್ಪದ  ಟ್ವೀಟ್‌ ಬಹಳಷ್ಟು ವೈರಲ್‌ ಆಗಿದೆ. Hello @realDonaldTrump Could you please mediate with BBMP to ESCALATE Ejipura flyover works in Bengaluru.

ನೆಲಮಂಗಲದಲ್ಲಿ ಆಯಿಲ್‌ ಗೋದಾಮು ಬೆಂಕಿಗಾಹುತಿ

ನೆಲಮಂಗಲ ಬಳಿಯ ಅಡಕಮಾರನಹಳ್ಳಿ ಬಳಿ ಶಾರ್ಟ್‌ ಸರ್ಕ್ಯೂಟ್‌ನಿಂದ ಶಲ್‌ ಕಂಪನಿಗೆ ಸೇರಿದ ಆಯಿಲ್‌ ಗೋದಾಮು ಬೆಂಕಿಗಾಹುತಿಯಾಗಿದೆ. ಬೆಳಗಿನ ಜಾವ ಮೂರು ಗಂಟೆಗೆ ಈ ದುರಂತ ನಡೆದಿದೆ. ನೆಲಮಂಗಲ, ಪೀಣ್ಯ ಯಶವಂತಪುರ ಭಾಗದ 8 ಕ್ಕೂ ಹೆಚ್ಚು ಅಗ್ನಿಶಾಮಕ ತಂಡಗಳು ಬೆಂಕಿ ನಂದಿಸುವ

ವೈಟ್ ಟ್ಯಾಪಿಂಗ್ ರಸ್ತೆ ಗುಣಮಟ್ಟ ಪರಿಶೀಲಿಸಿದ ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ವೈಟ್ ಟ್ಯಾಪಿಂಗ್ ನಡೆಯುತ್ತಿರುವ ರಸ್ತೆಗಳ ಗುಣಮಟ್ಟ ಚೆನ್ನಾಗಿರಬೇಕು. ಈ ರಸ್ತೆಗಳು 30 ವರ್ಷಗಳ ಕಾಲ ಬಾಳಿಕೆ ಬರಬೇಕು. ಹೀಗಾಗಿ ನಾನು ಆಗಾಗ್ಗೆ ಕಾಮಗಾರಿಗಳ ಪರಿಶೀಲನೆ ಮಾಡುತ್ತಿದ್ದೇನೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ನಗರದ ವಿವಿಧ ಕಡೆಗಳಲ್ಲಿ ಸೋಮವಾರ ರಸ್ತೆ

ಸದ್ಯದಲ್ಲೇ ಬೆಂಗಳೂರಿಗೆ ಹೊಸ ರೂಪ: ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು: ಕೆಲವೇ ದಿನಗಳಲ್ಲಿ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬರಲಿದೆ. ನಂತರ ಸ್ವಚ್ಛತಾ ಅಭಿಯಾನದ ಮೂಲಕ ನಗರದಲ್ಲಿ ಕಸ ವಿಲೇವಾರಿ ಮಾಡಿ ಸ್ವಚ್ಛ ಬೆಂಗಳೂರು ನಿರ್ಮಿಸಲಾಗುವುದು. ಆ ಮೂಲಕ ಬೆಂಗಳೂರಿಗೆ ಹೊಸ ರೂಪ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು. ಪುಲಕೇಶಿನಗರ

ಬೋರ್‌ವೆಲ್‌ಗಳಿಗೆ ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯ

ರಾಜ್ಯದಲ್ಲಿ ಅಂತರ್ಜಲ ಮೂಲಗಳ ಅತಿ ಬಳಕೆಯಿಂದಾಗಿ ಅಂತರ್ಜಲ ಮಟ್ಟ ಗಮನಾರ್ಹವಾಗಿ ಕುಸಿದಿದೆ. ಹೀಗಾಗಿ ಅಂತರ್ಜಲ ನಿರ್ದೇಶನಾಲಯ ಮತ್ತು ಕರ್ನಾಟಕ ಅಂತರ್ಜಲ ಪ್ರಾಧಿಕಾರ ರಾಜ್ಯದ ಎಲ್ಲಾ ಇಲಾಖೆಗಳಿಗೆ ಮತ್ತೊಮ್ಮೆ ಸೂಚನಾ ಪತ್ರ ಕಳುಹಿಸಿದ್ದು, ನಿರ್ಮಾಣ ಚಟುವಟಿಕೆಗಳಿಗೆ ಅಂತರ್ಜಲವನ್ನು ಬಳಸಲು ‘ಆಕ್ಷೇಪಣಾ ಪ್ರಮಾಣಪತ್ರ’ ಅಥವಾ

ದೇವನಹಳ್ಳಿಯಲ್ಲಿ ತಂದೆಯ ಗನ್‌ನಿಂದ ಫೈರಿಂಗ್‌ ಮಾಡಿಕೊಂಡು ಮಗ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನಲ್ಲಿ ಯುವಕನೊಬ್ಬ ತಂದೆಯ ಸಿಂಗಲ್ ಬ್ಯಾರಲ್​ ಗನ್​ನಿಂದ ಫೈರಿಂಗ್​ ಮಾಡಿಕೊಂಡು ಆತ್ಮ ಹತ್ಯೆಗೆ ಶರಣಾಗಿದ್ದಾನೆ. ಬೈಯೇಶ್(28) ಆತ್ಮಹತ್ಯೆ ಮಾಡಿಕೊಂಡ ಯುವಕ. ಆತ ಇತ್ತೀಚೆಗಷ್ಟೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿ ಬಂದಿದ್ದ. ಸ್ಥಳಕ್ಕೆ ತಿರುಮಲಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ

ಅಕ್ರಮ ಸಂಬಂಧದಿಂದ ಮಗು: ಬೆಂಗಳೂರಿನ ಆಟೊದಲ್ಲಿ ಮಲಗಿಸಿ ಜೋಡಿ ಪರಾರಿ

ಕಾನೂನು ಬಾಹಿರವಾದ ಸಂಬಂಧದಿಂದ ಜನಿಸಿದ 15 ದಿನಗಳ ಹೆಣ್ಣು ಮಗುವನ್ನು ರಸ್ತೆ ಬದಿಯ ಆಟೋದಲ್ಲಿ ಮಲಗಿಸಿ ಪರಾರಿಯಾಗಿದ್ದ ಜೋಡಿಯನ್ನು ಬ್ಯಾಟರಾಯನಪುರ ಠಾಣೆಯ ಪೊಲೀಸರು ಪತ್ತೆ ಹಚ್ಚಿ, ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕೆಲವು ದಿನಗಳ ಹಿಂದೆ ಬೆಳಿಗ್ಗೆ ಎಂಟಿಟಿಸಿ ಕ್ಯಾಟ್ರಸ್ ಹತ್ತಿರ  ರಸ್ತೆ ಬದಿಯಲ್ಲಿ

ಸೈಬರ್ ದಾಳಿಗಳ ಬಗ್ಗೆ ನಾಗರಿಕರು ಎಚ್ಚರ ವಹಿಸಿ: ಪೊಲೀಸ್ ಕಮಿಷನರ್ ಬಿ. ದಯಾನಂದ್

ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಸೈಬರ್ ದಾಳಿಗಳ ಸಾಧ್ಯತೆ ಬಗ್ಗೆ ನಾಗರಿಕರು ಎಚ್ಚರ ವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಹೇಳಿದ್ದಾರೆ. ಸೈಬರ್ ಅಪರಾಧಿಗಳು ನಕಲಿ ಲಿಂಕ್‌ಗಳು, ಇ-ಮೇಲ್‌ಗಳು, ಮತ್ತು ದುರುದ್ದೇಶಪೂರಿತ ಫೈಲ್‌ಗಳ ಮೂಲಕ ಡೇಟಾ ಕದಿಯಲು

ಯುದ್ಧದ ಹಿನ್ನೆಲೆಯಲ್ಲಿ ಜನ್ಮಾದಿನಚರಣೆ ಆಚರಿಸಿಕೊಳ್ಳದೇ ಇರಲು ಡಿಸಿಎಂ ಡಿಕೆ ಶಿವಕುಮಾರ್ ನಿರ್ಧಾರ

ಬೆಂಗಳೂರು: ಭಯೋತ್ಪಾದನೆ ವಿರುದ್ಧ ನಮ್ಮ ಯೋಧರು ಪ್ರಾಣ ಪಣಕ್ಕಿಟ್ಟು ಹೋರಾಡುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ ಮೇ 15 ರಂದು ಯಾರೂ ನನ್ನ ಜನ್ಮದಿನಾಚರಣೆ ಮಾಡುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ. “ನನ್ನ ಜನ್ಮದಿನದ ಹೆಸರಿನಲ್ಲಿ ಯಾರೊಬ್ಬರೂ ಸಂಭ್ರಮಾಚರಣೆ

ಭಾರತೀಯ ಸೇನೆಗೆ ಬೆಂಬಲ ಸೂಚಿಸುವ ತಿರಂಗಾ ಯಾತ್ರೆಗೆ ಭರ್ಜರಿ ಜನಸ್ಪಂದನ

ಬೆಂಗಳೂರು: ಪಹಲ್ಗಮ್ ನರಮೇಧಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ನಡೆಸುತ್ತಿರುವ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಬೆಂಬಲ ಸೂಚಿಸಲು ರಾಜ್ಯ ಸರ್ಕಾರವು ಬೆಂಗಳೂರಿನಲ್ಲಿ ನಡೆಸಿದ “ಜೈ ಹಿಂದ್ ತಿರಂಗಾ ಯಾತ್ರೆ”ಗೆ ಸಾರ್ವಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಯಿತು. ಕೆ ಆರ್ ಸರ್ಕಲ್ ನಿಂದ ಮಿನ್ಸ್ಕ್ ಚೌಕದವರೆಗೆ ಸಿಎಂ