ಬೆಂಗಳೂರು
ನೆಲಮಂಗಲದಲ್ಲಿ ರೈಲು ಡಿಕ್ಕಿಯಾಗಿ ಬಾಲಕ ಸಾವು
ನೆಲಮಂಗಲ ತಾಲೂಕಿನ ಅಲ್ಪಯ್ಯನಪಾಳ್ಯದಲ್ಲಿ ಹಳಿ ದಾಟುವ ವೇಳೆ ತಂದೆ-ಮಗನಿಗೆ ರೈಲು ಡಿಕ್ಕಿಯಾಗಿದ್ದು, ಬಿಹಾರ ಮೂಲದ ಸೌರವ್(8) ಮೃತಪಟ್ಟಿದ್ದಾನೆ. ಆತನ ತಂದೆ ನಿತಿನ್(40) ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಬಸ್ ಪೇಟೆಯಿಂದ ಅಲ್ಪಯ್ಯನಪಾಳ್ಯಕ್ಕೆ ತೆರಳುವಾಗ ಈ ದುರಂತ ನಡೆದಿದೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ
ಹೆಚ್ಚು ಹಣ ಕೇಳಿ ಗ್ರಾಹಕನ ನಿಂದಿಸಿದ ಚಾಲಕನ ಐಡಿ ಬ್ಲಾಕ್ ಮಾಡಿದ ರ‍್ಯಾಪಿಡೋ
ಬೆಂಗಳೂರಿನ ಶಿವಾಜಿನಗರ ಠಾಣೆ ವ್ಯಾಪ್ತಿಯಲ್ಲಿ ಆಟೊ ಚಾಲಕನೊಬ್ಬ ಗ್ರಾಹಕನಿಂದ ಹೆಚ್ಚುವರಿ ಹಣ ಕೇಳಿ ಕಿರಿಕ್ ಮಾಡಿ ಕೆಟ್ಟ ಪದಗಳಿಂದ ಬೈದಿದ್ದ ವೀಡಿಯೊ ರೆಕಾರ್ಡ್ ಗಮನಿಸಿದ ರ‍್ಯಾಪಿಡೋ ಕಂಪೆನಿಯು ಆತನ ಐಡಿ ಬ್ಲಾಕ್ ಮಾಡುವ ಮೂಲಕ ಕ್ರಮ ಕೈಗೊಂಡಿದೆ. ಮಳೆ ಮಧ್ಯೆಯೇ ಬಾಡಿಗೆ
ಮೇ 21ರವರೆಗೆ ಮಧ್ಯರಾತ್ರಿ ಹೆಬ್ಬಾಳ ಫ್ಲೈಓವರ್ ಸಂಚಾರ ಬಂದ್
ಬಿಡಿಎ ಕಾಮಗಾರಿ ಹಿನ್ನೆಲೆಯಲ್ಲಿ ಮೇ 21ರವರೆಗೆ ಪ್ರತಿದಿನ ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆವರೆಗೆ ಹೆಬ್ಬಾಳ ಫ್ಲೈಓವರ್ ರಸ್ತೆ ಸಂಚಾರ ಬಂದ್ ಆಗಲಿದೆ. ಎಸ್ಟೀಮ್ ಮಾಲ್ನಿಂದ ಬಾಪ್ಟಿಸ್ಟ್ ಆಸ್ಪತ್ರೆವರೆಗಿನ ಮಾರ್ಗ ಬಂದ್ ಇರಲಿದ್ದು ಈ ವೇಳೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ
ಕನ್ನಡಿಗರಿಗೆ ಅವಮಾನಿಸಿದ ಜಿಎಸ್ ಸೂಟ್ ಹೋಟೆಲ್ ಸೀಜ್, ಮ್ಯಾನೇಜರ್ ಅರೆಸ್ಟ್
ಹೋಟೆಲ್‌ನ ಹೊರಭಾಗದ ಎಲ್‌ಇಡಿ ಡಿಜಿಟಲ್ ಡಿಸ್‌ಪ್ಲೇ ಬೋರ್ಡ್‌ನಲ್ಲಿ ಕನ್ನಡಿಗರನ್ನು ಅವಮಾನಿಸಿ ಬರಹ ಪ್ರದರ್ಶನ ಮಾಡುತ್ತಿದ್ದ ಆರೋಪದಲ್ಲಿ ಬೆಂಗಳೂರಿನ ಕೋರಮಂಗಲದ ಜಿ.ಎಸ್ ಸೂಟ್ ಹೋಟೆಲ್ ಅನ್ನು ಸೀಜ್ ಮಾಡಲಾಗಿದ್ದು, ಮ್ಯಾನೇಜರ್ ಸರ್ಫಜ್ ಎಂಬಾತನನ್ನು ಬಂಧಿಸಲಾಗಿದೆ. ಮ್ಯಾನೇಜರ್‌ನನ್ನು ಅರೆಸ್ಟ್ ಮಾಡಿ ಜಿ.ಎಸ್ ಸೂಟ್ ಹೋಟೆಲ್‌ಗೆ
ಕಕ್ಷೆ ಸೇರಲು ವಿಫಲಗೊಂಡ ಇಸ್ರೋದ EOS-09 ಉಪಗ್ರಹ
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ ಉಡಾವಣೆಯಾಗಿದ್ದ ಇಸ್ರೋದ EOS-09 ಉಪಗ್ರಹ ನಿರ್ದಿಷ್ಟ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ಬೆಳಗ್ಗೆ 5:59ಕ್ಕೆ EOS-09 ರೇಡಾರ್ ಇಮೇಜಿಂಗ್ ಉಪಗ್ರಹ ನಭಕ್ಕೆ ಚಿಮ್ಮಿತ್ತು. 1,696 ಕಿಲೋಗ್ರಾಂ ತೂಕದ EOS-09 ರೇಡಾರ್ ಇಮೇಜಿಂಗ್ ಉಪಗ್ರಹವು
35,000 ಅಡಿ ಮೇಲೆ ವಿಮಾನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹುಟ್ಟುಹಬ್ಬ ಆಚರಣೆ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜನ್ಮದಿನವನ್ನು ಏರ್ ಇಂಡಿಯಾ ಸಿಬ್ಬಂದಿ ವಿಮಾನದಲ್ಲಿ ಆಚರಿಸುವ ಮೂಲಕ ಸಂಭ್ರಮಿಸಿದ್ದಾರೆ. ಮೇ 18ರಂದು 92 ವರ್ಷ ಪೂರೈಸಿ 93ನೇ ವಸಂತಕ್ಕೆ ಕಾಲಿಡಲಿರುವ ಎಚ್.ಡಿ. ದೇವೇಗೌಡರಿಗೆ ಏರ್ ಇಂಡಿಯಾ ಸಿಬ್ಬಂದಿ ವಿಮಾನದಲ್ಲಿಯೇ ಹುಟ್ಟುಹಬ್ಬ ಆಚರಿಸಿತು. ದೆಹಲಿಯಿಂದ
ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬಮುಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ: ಡಿಕೆ ಸುರೇಶ್
ಬೆಂಗಳೂರು: ಪಕ್ಷದ ಮುಖಂಡರ ಒತ್ತಾಯದ ಮೇರೆಗೆ ಬೆಂಗಳೂರು ಹಾಲು ಒಕ್ಕೂಟದ ಕನಕಪುರ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಶನಿವಾರ ಪ್ರತಿಕ್ರಿಯೆ ನೀಡಿದ ಅವರು, ವಿಶ್ರಾಂತಿ ಅವಧಿ ಮುಗಿಸಿದ ಮೇಲೆ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ
ಬಿಡದಿ ಟೌನ್ ಶಿಪ್ ಯೋಜನೆ ಕಾಂಗ್ರೆಸ್ ನಾಯಕರು ಲೂಟಿ ಮಾಡಲು ರೂಪಿಸಿದ ಯೋಜನೆ: ಆರ್.ಅಶೋಕ
ಬೆಂಗಳೂರು: ಬಿಡದಿ ಟೌನ್ ಶಿಪ್ ಯೋಜನೆ ಎಂಬುದು ಕಾಂಗ್ರೆಸ್ ನಾಯಕರು ಲೂಟಿ ಮಾಡಲು ರೂಪಿಸಿದ ಯೋಜನೆ. ಇದರಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಯಾವುದೇ ಪಾತ್ರವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಾಡುತ್ತಿರುವ ಭೂ ಸ್ವಾಧೀನ ವಿರೋಧಿಸಿ
ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ: ಡಿ.ಕೆ.ಶಿವಕುಮಾರ್
ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆಗೆ ಸಿದ್ಧತೆ ನಡೆಸಲಾಗುವುದು. ಮೊದಲು ಮೀಸಲಾತಿ ಹಾಗೂ ವಲಯವಾರು ವಿಭಾಗಗಳನ್ನು ರಚಿಸಲಾಗುವುದು. ಚುನಾವಣೆ ವಿಳಂಬ ಮಾಡುವುದರಲ್ಲಿ ಯಾವುದೇ ಅರ್ಥ ವಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ
ಬೆಂಗಳೂರು ಬ್ಲಡ್ ಬ್ಯಾಂಕ್‌ಗಳಲ್ಲಿ ಅಕ್ರಮ: ಆರೋಗ್ಯ ಇಲಾಖೆ ತನಿಖೆ ಚುರುಕು
ಬೆಂಗಳೂರಿನ ರಕ್ತನಿಧಿ ಘಟಕಗಳಲ್ಲಿ ನಿಗದಿಗಿಂತ ಹೆಚ್ಚಿನ ಹಣ ವಸೂಲಿ, ಅನೈರ್ಮಲ್ಯ ಹಾಗೂ ಅಕ್ರಮಗಳ ಕುರಿತು ಆರೋಪಗಳು ಕೇಳಿಬಂದಿದ್ದು, ಕರ್ನಾಟಕ ಆರೋಗ್ಯ ಇಲಾಖೆ ತನಿಖೆಗೆ ಮುಂದಾಗಿದೆ. ರಕ್ತದ ಮಾದರಿಗಳನ್ನು ಸಂಗ್ರಹ, ಸ್ವಚ್ಛತೆ, ಸಂಗ್ರಹಣಾ ಕ್ರಮಮತ್ತು ಶುಚಿತ್ವದ ಮಾನದಂಡಗಳನ್ನು ಡ್ರಗ್ ಕಂಟ್ರೋಲ್ ಬೋರ್ಡ್ ತಂಡಗಳು




