Menu

ಹಾಲು, ಮೊಸರು, ಕಾಫಿ ಟೀ, ನೀರು, ವಿದ್ಯುತ್‌, ವಾಹನ ಶುಲ್ಕ ದರ ಹೆಚ್ಚಳ, ಕಸಕ್ಕೂ ಕಾಸು

ಬಸ್, ಮೆಟ್ರೋ ಟಿಕೆಟ್‌ ದರ ಹೆಚ್ಚಳದ ಬಳಿಕ ಹಾಲು, ಮೊಸರು, ವಿದ್ಯುತ್‌, ನೀರಿನ ದರ ದುಬಾರಿಯಾಗಿ ಪರಿಣಮಿಸುವ ಜೊತೆಗೆ ಕಸಕ್ಕೂ ನಾಗರಿಕರು  ಸೆಸ್ ಕಟ್ಟಬೇಕಿದೆ. ಕಸ ಸಂಗ್ರಹ ಸೆಸ್ (ಮಾಸಿಕ)ದರ ಹೀಗಿದೆ, ವಸತಿ ಕಟ್ಟಡ: 600 ಚದರಡಿವರೆಗೆ – 10 ರೂ., 601-1000 ಚದರಡಿ- 50 ರೂ., 1001-2000 ಚದರಡಿ – 100 ರೂ., 2001-3000 ಚದರಡಿ – 150 ರೂ., 3001-4000 ಚದರಡಿ – 200 ರೂ., 4000

ಬೇಸಿಗೆಯಲ್ಲಿ ಬೆಂಗಳೂರು-ಮುಂಬೈ ಮಧ್ಯೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳು

ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿರ್ವಹಿಸಲು ಅನುಕೂಲವಾಗುವಂತೆ ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಬೆಂಗಳೂರು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಡುವೆ ವಿಶೇಷ ಎಕ್ಸ್‌ ಪ್ರೆಸ್ ರೈಲುಗಳು ಸಂಚರಿಸಲಿವೆ. ರೈಲು ಸಂಖ್ಯೆ 01013/01014 ಸಿಎಸ್ಎಂಟಿ ಮುಂಬೈ-ಎಸ್ಎಂವಿಟಿ ಬೆಂಗಳೂರು-ಸಿಎಸ್ಎಂಟಿ ಮುಂಬೈ

ಸಾಲದ ಶೂಲ: ದೊಡ್ಡಬಳ್ಳಾಪುರದಲ್ಲಿ ತಿಂಗಳ ಹಿಂದೆ ತಾಯಿ, ಇಂದು ಮಗ ಆತ್ಮಹತ್ಯೆ

ಸಾಲದ ಸುಳಿಗೆ ಸಿಲುಕಿ ಒಂದೂವರೆ ತಿಂಗಳ ಅವಧಿಯಲ್ಲಿ ತಾಯಿ ಮಗ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ನಡೆದಿದೆ. ತಾಲೂಕಿನ ನಂದಿ ಮೋರಿ ಬಳಿ ಸೋಮವಾರ ಬೆಳಗ್ಗೆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ಯುವಕನನ್ನು ತಾಲೂಕಿನ ಕೊನಘಟ್ಟ

“ಉದಯಕಾಲ” ಯುಗಾದಿ ವಿಶೇಷಾಂಕ ಬಿಡುಗಡೆಗೊಳಿಸಿದ ಡಿಸಿಎಂ

ಉದಯಕಾಲ ದಿನಪತ್ರಿಕೆಯ ಯುಗಾದಿ ವಿಶೇಷಾಂಕವನ್ನು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ಸದಾಶಿವನಗರದ ನಿವಾಸದಲ್ಲಿ ಬಿಡುಗಡೆ ಮಾಡಿದರು. ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಬಿ ಬಸವರಾಜು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಳೆದ ೨೭ ವರ್ಷಗಳಿಂದ ಹೊರಬರುತ್ತಿರುವ ‘ಕನ್ನಡಿಗರ ಜೀವಾಳ’ ಎನ್ನುವ

ಮಕ್ಕಳಲ್ಲಿ ಉದ್ಯಮ ಮನೋಭಾವ ಬೆಳೆಸಲು ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯಿಂದ ವೈವಿಸಿಸಿ ಪಠ್ಯಕ್ರಮ

ಬೆಂಗಳೂರು: ಮಕ್ಕಳಲ್ಲಿ ಉದ್ಯಮ ಮನೋಭಾವ ಬೆಳೆಸಲು ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಶಾಲೆಯು ವೈವಿಸಿಸಿ (Young Value Creators Circle) ಪಠ್ಯಕ್ರಮ ಪರಿಚಯಿಸುವ ಮೂಲಕ ಶಿಕ್ಷಣದ ಹೊಸ ವ್ಯಾಖ್ಯಾನ ಬರೆದಿದೆ. ಬೆಂಗಳೂರಿನ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಈ

ಬಿಬಿಎಂಪಿ ಬಜೆಟ್ ಮಂಡನೆ: ಪ್ರತಿ ವಾರ್ಡ್ ಅಭಿವೃದ್ಧಿಗೆ 2.5 ಕೋಟಿ, ಕಸದ ಮೇಲೆ ತೆರಿಗೆ!

ಬೆಂಗಳೂರು:  ಹಲವು ಬಾರಿ ಮುಂದೂಡಿಕೆ ನಂತರ ಕೊನೆಗೂ ಇಂದು 2025-26ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡಿಸಲಾಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಹರೀಶ್ ಕುಮಾರ್​ ಬಜೆಟ್ ಮಂಡನೆ ಮಾಡಿದ್ದಾರೆ. ಜನಪ್ರತಿನಿಧಿಗಳಿಲ್ಲದೇ ಸತತ ಐದನೇ ಬಾರಿಗೆ ಬಜೆಟ್​ ಮಂಡಿಸಿದ್ದು, ಇದರಲ್ಲಿ ಬ್ರ್ಯಾಂಡ್

ಬಿಬಿಎಂಪಿ ಕಸದ ಲಾರಿಗೆ ಬಾಲಕ ಬಲಿ: ಲಾರಿಗೆ ಬೆಂಕಿ ಹಚ್ಚಿ ಸಾರ್ವಜನಿಕರ ಆಕ್ರೋಶ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಸದ ಲಾರಿಗೆ ಬೈಕ್‌ ಗೆ ಡಿಕ್ಕಿ ಹೊಡೆದ ಪರಿಣಾಮ ೧೦ ವರ್ಷದ ಬಾಲಕ ಮೃತಪಟ್ಟ ಘಟನೆ ಥಣಿಸಂಧ್ರ ರೈಲ್ವೆ ಟ್ರ‍್ಯಾಕ್ ಬಳಿ ಸಂಭವಿವಿಸಿದೆ. ಬೈಕ್‌ ಗೆ ಕಸದ ಲಾರಿ ಡಿಕ್ಕಿ ಹೊಡೆದ ಪರಿಣಾಮ ೧೦

ವಂಡರ್ ಲಾಗೆ 25 ವರ್ಷದ ಸಂಭ್ರಮ: ದೇಶದ ಅತೀ ದೊಡ್ಡ ‘ಮಿಷನ್ ಇಂಟರ್ ಸ್ಟೆಲ್ಲಾರ್’ ಅನಾವರಣ

ಬೆಂಗಳೂರು: ದೇಶದ ಅತಿದೊಡ್ಡ ಮನರಂಜನಾ ಪಾರ್ಕ್ ಸರಪಳಿಯಾದ ವಂಡರ್ ಲಾ ಹಾಲಿಡೇಸ್ ಲಿಮಿಟೆಡ್ 25 ವರ್ಷ ಪೂರೈಸುತ್ತಿರುವ ಸಮಯದಲ್ಲಿ ದೇಶದ ಅತಿದೊಡ್ಡ ಎಲ್ಇಡಿ ಆಧಾರಿತ ಇಮ್ಮರ್ಸಿವ್ ಸ್ಕ್ರೀನ್ ಸ್ಪೇಸ್ ಥಿಯೇಟರ್ ‘ಮಿಷನ್ ಇಂಟರ್ ಸ್ಟೆಲ್ಲಾರ್’ ಅನಾವರಣಗೊಳಿಸಿದೆ ಸುಮಾರು 35 ಕೋಟಿ ರೂ.

ಯುಗಾದಿಗೆ ಓರಾದ ಸಾಂಪ್ರದಾಯಿಕ ವಜ್ರದ ಆಭರಣಗಳ ಜೊತೆ ಸಂಭ್ರಮ

ಓರಾದೊಂದಿಗೆ ಈ ಯುಗಾದಿಯನ್ನು ಹಿಂದೆಂದಿಗಿಂತಲೂ ಉತ್ತಮವಾಗಿ ಆಚರಿಸಿ ಸಾಂಪ್ರದಾಯಿಕ ಕಾಲಾತೀತ ವಜ್ರಗಳ ಭವ್ಯತೆಯ ಜತೆಗೂಡಿ ಯುಗಾದಿಯು ಹೊಸ ವರ್ಷದ ಪ್ರಾರಂಭಕ್ಕಿಂತ ಹೆಚ್ಚಿನದಾಗಿದೆ, ಅದು ಹೊಸ ಪ್ರಾರಂಭಗಳು, ನವೀಕರಿಸಿದ ಆಕಾಂಕ್ಷೆಗಳು ಮತ್ತು ಸಂಪತ್ತಿನ ಭರವಸೆಯ ಸಂಭ್ರಮಾಚರಣೆಯಾಗಿದೆ. ಈ ಪವಿತ್ರ ಸಂದರ್ಭವು ಸೊಗಸು ಮತ್ತು

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಾಚಾರ್ ಇನ್ನಿಲ್ಲ

ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಾಚಾರ್ (96)  ಶುಕ್ರವಾರ ಮುಂಜಾನೆ  ನಿಧನರಾದರು. ಬೆಂಗಳೂರಿನ ಮೊದಲ ಪೊಲೀಸ್ ಕಮಿಷನರ್ ಸಿ.ಚಾಂಡಿ ಅವರ ಅಧಿಕಾರಾವಧಿಯಲ್ಲಿ ಬೆಂಗಳೂರು ಸಂಚಾರ ವಿಭಾಗದ ಡಿಸಿಪಿ ಆಗಿದ್ದ ಬಿ.ಎನ್ ಗರುಡಾಚಾರ್ ಅವರು ಮೊಟ್ಟ ಮೊದಲು ಎನ್.ಆರ್ ಜಂಕ್ಷನ್ (ಎಲ್ಐಸಿ ಕಚೇರಿ