Menu

ಬೆಂಗಳೂರಿನಲ್ಲಿ ಅ.10ರಿಂದ ರಾಜ್ಯದ ಅತೀ ದೊಡ್ಡ `ಕ್ರೆಡಾಯ್’ ರಿಯಾಲ್ಟಿ ಎಕ್ಸ್ ಪೋ 2025

ಬೆಂಗಳೂರು: ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಸಂಘಗಳ ಒಕ್ಕೂಟ (CREDAI) – ಕರ್ನಾಟಕ ಮುಂಬರುವ ರಿಯಾಲ್ಟಿ ಎಕ್ಸ್‌ಪೋ 2025 ಅನ್ನು ಘೋಷಿಸಿದೆ. ಇದು ರಾಜ್ಯದ ಅತಿದೊಡ್ಡ ಮತ್ತು ಅತ್ಯಂತ ಸಮಗ್ರ ಆಸ್ತಿ ಪ್ರದರ್ಶನಗಳಲ್ಲಿ ಒಂದಾಗಲಿದೆ. ಕಾರ್ಯಕ್ರಮದಿಂದ ಪ್ರಮುಖ ಡೆವಲಪರ್‌ಗಳು, ಬ್ಯಾಂಕುಗಳು ಮತ್ತು ವಸತಿ ಹಣಕಾಸು ಕಂಪನಿಗಳನ್ನು ಒಗ್ಗೂಡಿಸಿ ಕರ್ನಾಟಕದ ವಸತಿ, ವಾಣಿಜ್ಯ ಮತ್ತು ಮೂಲಸೌಕರ್ಯ ವಿಭಾಗಗಳಲ್ಲಿ ವಿಕಸನಗೊಳ್ಳುತ್ತಿರುವ ರಿಯಲ್ ಎಸ್ಟೇಟ್ ಭೂದೃಶ್ಯವನ್ನು ಪ್ರದರ್ಶಿಸುತ್ತದೆ. ಬೆಂಗಳೂರಿನಲ್ಲಿ ನಿರಂತರ ಬೆಳವಣಿಗೆ ಮತ್ತು ಮೈಸೂರು

ಬೆಂಗಳೂರಿನಲ್ಲಿ ಹೆಡ್‌ಫೋನ್‌ ಹಾಕಿಕೊಂಡು ಹಳಿ ದಾಟುತ್ತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿಯಾಗಿ ಸಾವು

ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಗೇನಹಳ್ಳಿಯಲ್ಲಿ ಕಿವಿಗೆ ಹೆಡ್‌ಫೋನ್‌ ಹಾಕಿಕೊಂಡು ರೈಲು ಹಳಿ ದಾಟುತ್ತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವೀರಣ್ಣಪಾಳ್ಯ ನಿವಾಸಿ ಶಶಿಕುಮಾರ್‌ (20) ಮೃತಪಟ್ಟ ವಿದ್ಯಾರ್ಥಿ.  ಬೆಳಿಗ್ಗೆ ನಾಗೇನಹಳ್ಳಿ ರೈಲ್ವೆ ಟ್ರ್ಯಾಕ್‌ ಬಳಿ ಘಟನೆ

ಬೆಂಗಳೂರು ಪೊಲೀಸರಿಂದ 23 ಕೋಟಿ ಮೌಲ್ಯದ ಮಾದಕ ವಸ್ತು ಜಪ್ತಿ

ಬೆಂಗಳೂರು ಸಿಟಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 23 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ಸಿಟಿ ಪೊಲೀಸರು  ಮತ್ತು ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಸೇರಿ ಒಟ್ಟು ಆರು ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಅವರಲ್ಲಿ

ಸಹಕರಿಸಿದರೆ ಫುಲ್ ಮಾರ್ಕ್ಸ್ ಕೊಡ್ತೀನಿ: ಮನೆಗೆ ಕರೆದು ವಿದ್ಯಾರ್ಥಿನಿಗೆ ಕಿರುಕುಳವಿತ್ತ ಹೆಚ್‌ಒಡಿ ಅರೆಸ್ಟ್‌

ಬೆಂಗಳೂರಿನ ತಿಲಕ್‌ ನಗರದಲ್ಲಿ ಮನೆಗೆ ಊಟಕ್ಕೆ ಕರೆದು ಬಿಸಿಎ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಸಂಬಂಧ ಆರೋಪಿಯಾಗಿರುವ ಖಾಸಗಿ ಕಾಲೇಜಿನ ವಿಭಾಗವೊಂದರ ಮುಖ್ಯಸ್ಥನನ್ನು ಪೊಲೀಸರು ಬಂಧಿಸಿದ್ದಾರೆ. ಸಂಜೀವ್ ಕುಮಾರ್ ಮಂಡಲ್‌ ಬಂಧಿತ. ಆತ ಖಾಸಗಿ ಕಾಲೇಜಿನ ಹೆಡ್ ಆಫ್ ಡಿಪಾರ್ಟ್‌ಮೆಂಟ್.

ರಿಕವರಿ ಚಿನ್ನ ವಾರಸುದಾರರಿಗೆ ನೀಡದ ಪೊಲೀಸ್‌ ವಿರುದ್ಧ ದೂರು

ಕಳ್ಳತನ ಪ್ರಕರಣಗಳಲ್ಲಿ ಚಿನ್ನ ರಿಕವರಿ ಮಾಡಿರುವ ಪೊಲೀಸರು ಆ ಚಿನ್ನವನ್ನು ವಾರಸುದಾರರಿಗೆ ಹಿಂತಿರುಗಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸೂರ್ಯನಗರ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ವಿರುದ್ಧ ಈ ಸಂಬಂಧ ದೂರು ದಾಖಲಾಗಿದೆ. ಕೇಂದ್ರ ವಲಯ ಐಜಿ ಲಾಬೂರಾಮ್​ ಅವರಿಗೆ ವಕೀಲ

ಬೆಂಗಳೂರಲ್ಲಿ ಸ್ನೇಹಿತರ ಗಲಾಟೆ ಕೊಲೆಯಲ್ಲಿ ಅಂತ್ಯ

ಬೆಂಗಳೂರಿನ ವೀರಣ್ಣಪಾಳ್ಯ ಲೇಬರ್ ಶೆಡ್ ನಲ್ಲಿ ಸ್ನೇಹಿತ ನಡುವೆ ಶುರುವಾಗಿದ್ದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ. ಜಾರ್ಖಂಡ್ ಮೂಲದ ರಾಜು ಕೊಲೆಯಾದವ, ಸ್ನೇಹಿತ ರಾಘು ಕೊಲೆಗಾರ. ಒಂದೇ ಶೆಡ್ ನಲ್ಲಿ ನಾಲ್ವರು ಸ್ನೇಹಿತರು ವಾಸ್ತವ್ಯವಿದ್ದರು. ಎರಡು ದಿನದ‌ ಹಿಂದೆ ರಾಜು ಮತ್ತು

ಬಂಗಾರಪೇಟೆ: ಎಕ್ಸ್‌ಪ್ರೆಸ್‌ ಹೈವೇನಲ್ಲಿ ಅಪಘಾತಕ್ಕೆ ಮೂವರು ಬಲಿ

ಕೋಲಾರದ ಬಂಗಾರಪೇಟೆ ತಾಲೂಕಿನ ಕಲ್ಕೆರೆ ಬಳಿ ಸೋಮವಾರ ರಾತ್ರಿ ಬೆಂಗಳೂರು- ಚೆನ್ನೈ ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಶಿವರಾಜ್ , ಅಶೋಕ, ವಿಕ್ರಂಪಾಲ್ ಮೃತಪಟ್ಟವರು. ಅಡುಗೆ ಕ್ಯಾಟರಿಂಗ್ ಗೆ ತೆರಳುತ್ತಿದ್ದ ಟೆಂಪೋ ಹಾಗೂ ಈಚರ್ ವಾಹನ ಡಿಕ್ಕಿಯಾಗಿ

ಮ್ಯಾಟ್ರಿಮೊನಿಯಲ್ಲಿ ಸಿಕ್ಕ ಯುವ ಪ್ರಿಯಕರ: ನಿವೃತ್ತ ಶಾಲಾ ಶಿಕ್ಷಕಿಗೆ 2.3 ಕೋಟಿ ರೂ. ವಂಚನೆ

ಬೆಂಗಳೂರಿನ ನಿವೃತ್ತ ಶಾಲಾ ಶಿಕ್ಷಕಿಯೊಬ್ಬರು ಮ್ಯಾಟ್ರಿಮೊನಿಯಲ್ಲಿ ಪರಿಚಯವಾಗಿ ಸ್ನೇಹಿತನಾದ ಯುವಕನ ಮಾತು ನಂಬಿ 2.3 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ. 4 ವರ್ಷಗಳಲ್ಲಿ ಈ ಪ್ರಮಾಣದ ಹಣ ಕಳೆದುಕೊಂಡಿರುವ ಶಿಕ್ಷಕಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರು ಮೂಲದ 59 ವರ್ಷದ ಮಹಿಳೆ ಹಲವು

ಕಾಮಾಕ್ಷಿಪಾಳ್ಯದಲ್ಲಿ ರಿವರ್ಸ್‌ ತೆಗೆಯುತ್ತಿದ್ದ ಕಾರಿಗೆ ಮಗು ಬಲಿ

ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿವರ್ಸ್‌ ತೆಗೆಯುತ್ತಿದ್ದ ಕಾರು ಹರಿದು ಹನ್ನೊಂದು ತಿಂಗಳ ಮಗು ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತ ಮಗುವನ್ನು ಉಮರ್ ಫಾರೂಕ್ ಎಂದು ಗುರುತಿಸಲಾಗಿದೆ. ಕಾಮಾಕ್ಷಿಪಾಳ್ಯದಲ್ಲಿ ವಾಸಿಸುತ್ತಿರುವ ಸ್ವಾಮಿ ಎಂಬವರ ಮನೆಯಲ್ಲಿ ಕುಣಿಗಲ್‌ನಿಂದ ಬಂದಿದ್ದ

ಪತಿ, ಮಕ್ಕಳಿದ್ದರೂ ಅಕ್ರಮ ಸಂಬಂಧ: ಪ್ರಿಯಕರನ ಜೊತೆ ತನ್ನ ಸ್ನೇಹಿತೆಯ ನೋಡಿ ಬಸವೇಶ್ವರ ನಗರದಲ್ಲಿ ಮಹಿಳೆ ಆತ್ಮಹತ್ಯೆ

ತನ್ನ ಆಪ್ತ ಸ್ನೇಹಿತೆಯೇ ತನ್ನ ಪ್ರಿಯಕರನ ಜೊತೆ ಸಂಬಂಧದಲ್ಲಿ ಇರುವುದನ್ನು ಕಂಡ ವಿವಾಹಿತ ಮಹಿಳೆಯೊಬ್ಬರು ಬೆಂಗಳೂರಿನ ಬಸವೇಶ್ವರ ನಗರದ ಕೆ ಹೆಚ್ ಬಿ ಕಾಲೊನಿಯಲ್ಲಿರುವ ಓಯೋ ಚಾಂಪಿನಿಯನ್ ಕಂಫರ್ಟ್ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿರುವ ಯಶೋಧಾ (38)