Menu

ವಿಜಯ್ ಹಜಾರೆ ಟೂರ್ನಿ: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅವಕಾಶ ನಿರಾಕರಿಸಿದ ಪೊಲೀಸ್‌

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ನಡೆಯಬೇಕಿದ್ದ ದೆಹಲಿ ಮತ್ತು ಆಂಧ್ರಪ್ರದೇಶ ವಿಜಯ್ ಹಜಾರೆ ಪಂದ್ಯಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಪಂದ್ಯ ನಡೆಸುವ ಸಂಬಂಧ ಬೆಂಗಳೂರು ಆಯುಕ್ತ ಸೀಮಂತ್‌ ಕುಮಾರ್‌, ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿ ಪರಿಶೀಲನೆ ನಡೆಸಿದದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಕ್ರೀಡಾಂಗಣಕ್ಕೆ ಆಗಮಿಸಿ ಸುರಕ್ಷತೆ ಬಗ್ಗೆ ಪರಿಶೀಲಿಸಿ ಬಳಿಕ ಸರ್ಕಾರಕ್ಕೆ ವರದಿ ನೀಡಲಾಗಿದೆ. ಎಲ್ಲವನ್ನೂ ಪರಿಶೀಲಿಸಿರುವ ಪೊಲೀಸರು ಪಂದ್ಯಕ್ಕೆ ಅನುಮತಿ ನಿರಾಕರಿಸಿದ್ದಾರೆ. ಸ್ಟೇಡಿಯಂನಲ್ಲಿ ಇನ್ನಷ್ಟು

ಮಾರ್ಚ್‌ಗೆ ಕೋರಮಂಗಲ- ಸರ್ಜಾಪುರ ಬಫರ್ ರಸ್ತೆ ಕಾಮಗಾರಿ ಪೂರ್ಣ: ಡಿಸಿಎಂ

“ಮುಂದಿನ ವರ್ಷ ಮಾರ್ಚ್ ತಿಂಗಳ ವೇಳೆಗೆ ಕೋರಮಂಗಲದಿಂದ ಸರ್ಜಾಪುರವರೆಗಿನ 5.50 ಕಿ.ಮೀ ಉದ್ದದ ಬಫರ್ ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲಿ ರಾಜಕಾಲುವೆ ಪಕ್ಕದಲ್ಲಿ ಸಂಚಾರಿಯುಕ್ತ ಬಫರ್ ರಸ್ತೆ ನಿರ್ಮಾಣ ಕಾಮಗಾರಿಗಳನ್ನು

ಬಾಗಲೂರಿನಲ್ಲಿ ಕಲ್ಲು ಎತ್ತಿಹಾಕಿ ಪತ್ನಿಯ ಹತ್ಯೆ ಮಾಡಿ ಅಪಘಾತದ ಕಥೆ ಕಟ್ಟಿದ ಪತಿ ಅರೆಸ್ಟ್‌

ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಗಾನಹಳ್ಳಿ ಬಳಿ ವ್ಯಕ್ತಿಯೊಬ್ಬ ಪತ್ನಿಯನ್ನು ಹತ್ಯೆ ಮಾಡಿ ಅಪಘಾತದಿಂದ ಮೃತಪಟ್ಟಿರುವುದಾಗಿ ಬಿಂಬಿಸಲು ಪ್ರಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.  ಹತ್ಯೆ ನಡೆಸಿದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯಲಹಂಕದ ಬೊಮ್ಮಸಂದ್ರದ ನಿವಾಸಿ ಅನಂತ್ (64) ಎಂಬಾತ

2027ರ ವೇಳೆಗೆ ಬೆಂಗಳೂರಿನ ಮೆಟ್ರೋ ಜಾಲ 175 ಕಿ.ಮೀ.ಗೆ ವಿಸ್ತರಣೆ: ಡಿಸಿಎಂ ಶಿವಕುಮಾರ್

ಬೆಂಗಳೂರು: 2027ರ ಡಿಸೆಂಬರ್ ವೇಳೆಗೆ ಬೆಂಗಳೂರು 175 ಕಿ.ಮೀ ಮೆಟ್ರೋ ಜಾಲ ಹೊಂದಲಿದೆ ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು. ಮೆಟ್ರೋ ಕಾಮಗಾರಿಗಳ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐಟಿ ನಗರವು

50+ ನಾಗರಿಕರಿಗಾಗಿ ಬೆಂಗಳೂರಿನಲ್ಲಿ ಚೊಚ್ಚಲ ‘ಮರ್ಜಿ ಕಾರ್ನಿವಲ್ 2025’ ಮರ್ಜಿ ಬೈ ಪ್ರೈಮಸ್‌

ಬೆಂಗಳೂರು: ಮರ್ಜಿ ಬೈ ಪ್ರೈಮಸ್ ಸಂಸ್ಥೆಯು ಇದೇ ಮೊದಲ ಬಾರಿಗೆ 50 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ ಮರ್ಜಿ ಕಾರ್ನಿವಲ್ 2025 ಅನ್ನು ಯಶಸ್ವಿಯಾಗಿ ಆಯೋಜಿಸಿದೆ. ಚರ್ಚ್ ಸ್ಟ್ರೀಟ್‌ನಲ್ಲಿರುವ ಭೈವ್ ಪ್ಲಾಟಿನಂ ವರ್ಕ್‌ಸ್ಪೇಸ್‌ನಲ್ಲಿ ನಡೆದ ಈ ಕಾರ್ಯಕ್ರಮವು ಭೈವ್,

ಕಿಚ್ಚ ಸುದೀಪ್‌ ಅಭಿಮಾನಿಗೆ ಎಟಿಎಸ್‌ ಹೆಸರಲ್ಲಿ ಬೆದರಿಸಿ ಹಣ ದೋಚಿದ ಸೈಬರ್‌ ವಂಚಕರು

ಸೈಬರ್ ವಂಚಕರು ಕಿಚ್ಚ ಸುದೀಪ್ ಅಭಿಮಾನಿಯೊಬ್ಬರಿಗೆ ATS (ಭಯೋತ್ಪಾದನಾ ನಿಗ್ರಹ ದಳ) ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಿ ಹಣ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ದೆಹಲಿ ಬಾಂಬ್ ಸ್ಪೋಟದಲ್ಲಿ ನಿಮ್ಮ ಕೈವಾಡ ಇದೆ. ನಿಮ್ಮ ಮೊಬೈಲ್ ನಂಬರ್ ಬಳಕೆಯಾಗಿದೆ ಎಂದು

ಆನೇಕಲ್‌ನಲ್ಲಿ ಸರಣಿ ಅಪಘಾತ: ಇಬ್ಬರು ಬಲಿ, ಚಾಲಕನ ಥಳಿಸಿದ ಸಾರ್ವಜನಿಕರು

ಬೆಂಗಳೂರಿನ ಹೊರವಲಯ ಆನೇಕಲ್‌ನಲ್ಲಿ ಕಂಟೈನರ್ ಚಾಲಕ ಸಿಕ್ಕ ಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದಿದ್ದು ಎರಡು ಮಂದಿ ಮೃತಪಟ್ಟಿದ್ದಾರೆ, ಐದಕ್ಕೂ ಹೆಚ್ಚು ಮಂದಿ ಗಂಬೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಲ್ಲಿಸಿದ್ದ ವಾಹನ, ಚಲಿಸುತ್ತಿದ್ದ ವಾಹನಗಳ ಮೇಲೆ ಕಂಟೈನರ್ ಹರಿದಿದೆ. ವಾಹನಗಳಿಗೆ ಡಿಕ್ಕಿಯಾದರೂ

ಹಣ ಸಹಾಯ ನೀಡಿದ ಸ್ನೇಹಿತನಿಂದ ಸೆಕ್ಸ್‌ಗಾಗಿ ಕಿರುಕುಳ: ಮಹಿಳೆ ಆತ್ಮಹತ್ಯೆ ಯತ್ನ

ಬೆಂಗಳೂರಿನ ರಾಜಗೋಪಾಲ ನಗರ ಪೋಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸ್ನೇಹಿತ ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸ್ನೇಹಿತನಾಗಿ ಪರಿಚಿತನಾಯಿದ್ದ ವ್ಯಕ್ತಿ ಸಹಾಯದ ಹೆಸರಲ್ಲಿ ಮಹಿಳೆಯನ್ನು

ಬೆಂಗಳೂರಿನ ಭವಿಷ್ಯಕ್ಕಾಗಿ ಟನಲ್ ರಸ್ತೆ, ಡಬಲ್ ಡೆಕ್ಕರ್, ಮೇಲ್ಸೇತುವೆ ಯೋಜನೆ

“ಬೆಂಗಳೂರು ಭವಿಷ್ಯದ ನಗರವಾಗಿ ರೂಪುಗೊಳ್ಳುತ್ತಿದ್ದು, ಇದಕ್ಕಾಗಿ ನಮ್ಮ ಸರ್ಕಾರ ಟನಲ್ ರಸ್ತೆ, ಮೇಲ್ಸೇತುವೆ, ಡಬಲ್ ಡೆಕ್ಕರ್ ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಬೆಂಗಳೂರಿನ ಬಾಲ್ಡ್ ವಿನ್ ಶಾಲೆಯಲ್ಲಿ  ಏರ್ಪಡಿಸಿದ್ದ ಯುನೈಟೆಡ್ ಕ್ರಿಸ್ಮಸ್ ಆಚರಣೆಯಲ್ಲಿ ಡಿಸಿಎಂ 

ಜ್ವರವೆಂದು ಆಸ್ಪತ್ರೆಗೆ ಹೋದ ಯುವಕನ ಬಾಳು ನರಕವಾಯ್ತು

ಜ್ವರವೆಂದು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿರುವ ೨೩ ವರ್ಷದ ಯುವಕನ ಬಾಳು ನರಕಸದೃಶವಾಗಿ ಹೋಗಿದೆ. ಜ್ವರವೆಂದು ಚಿಕಿತ್ಸೆಗೆ ಹೋದಾತ ಹಾಸಿಗೆ ಹಿಡಿದು ಮೇಲೇಳಲಾಗದ ಸ್ಥಿತಿ ತಲುಪಿ ಏಳು ತಿಂಗಳು ಕಳೆದಿದೆ. ರಾಜ್ಯದ ಹೆಸರಾಂತ ಪ್ರತಿಷ್ಠಿತ ಇಎಸ್ಐ ಆಸ್ಪತ್ರೆ ವೈದ್ಯರು ಮಾಡಿದ ಎಡವಟ್ಟು