ಬೆಂಗಳೂರು
ಆರು ತಿಂಗಳಲ್ಲಿ ಬೆಸ್ಕಾಂ ಅವಘಡಗಳಿಗೆ ಬಲಿಯಾದವರ ಸಂಖ್ಯೆ 118
ಬೆಸ್ಕಾಂ ವ್ಯಾಪ್ತಿಯಲ್ಲಿ ಸಂಭವಿಸಿದ ವಿದ್ಯುತ್ ಅವಘಡಗಳಲ್ಲಿ ಕಳೆದ ವರ್ಷ ಆರು ತಿಂಗಳಲ್ಲಿ 118 ಮಂದಿ ಮೃತಪಟ್ಟಿದ್ದಾರೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಸುಂಕ ಪರಿಷ್ಕರಣೆ ಪ್ರಸ್ತಾವನೆಯ ಭಾಗವಾಗಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಸಲ್ಲಿಸಿದ ವರದಿ ತಿಳಿಸಿದೆ. ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಈ ಸಾವುಗಳು ಸಂಭವಿಸಿವೆ. ಈ ಅವಘಡಗಳಿಗೆ ಸಾರ್ವಜನಿಕರ ನಿರ್ಲಕ್ಷ್ಯವೇ ಕಾರಣ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ, ದಾವಣಗೆರೆ, ತುಮಕೂರು,
ಬೇಸಿಗೆ ಮಳೆಯಿಂದ ಬೆಂಗಳೂರಿನಲ್ಲಿ ಡೆಂಗ್ಯು, ಚಿಕನ್ ಗುನ್ಯ ಆತಂಕ
ಬೇಸಿಗೆ ಮಳೆಯ ಕಾರಣ ಬೆಂಗಳೂರಿನಲ್ಲಿ ಮತ್ತೆ ಡೆಂಗ್ಯು ಹಾಗೂ ಚಿಕುನ್ ಗುನ್ಯ ಭೀತಿ ಶುರುವಾಗಿದೆ. ಕಳೆದ ಮೂರು ತಿಂಗಳಲ್ಲಿ ನಗರದಲ್ಲಿ 910ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಳೆ ಬಂದ ಬಳಿಕ ಒಂದೇ ವಾರದಲ್ಲಿ 75ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ಕಳೆದ ಒಂದೇ
ಮೆಟ್ರೋ ಪಿಲ್ಲರ್, ಪಾರಂಪರಿಕ ಕಟ್ಟಡಗಳಿಗೆ ದೀಪಾಲಂಕಾರ ಟೆಂಡರ್ : ಡಿ.ಕೆ.ಶಿವಕುಮಾರ್
“ಮೆಟ್ರೋ ಪಿಲ್ಲರ್ ಹಾಗೂ ಐತಿಹಾಸಿಕ ಪಾರಂಪರಿಕ ಕಟ್ಟಡಗಳ ದೀಪಾಲಂಕಾರಕ್ಕೆ ಬ್ರಾಂಡ್ ಬೆಂಗಳೂರು ಅಡಿ ಟೆಂಡರ್ ಕರೆಯಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ನೂತನ ವಿದ್ಯುತ್ ದೀಪ ಅಲಂಕಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಹಾಗೂ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. “ಸರ್ಕಾರದ ಆಸ್ತಿಗಳಲ್ಲಿ ದೀಪಾಲಂಕಾರ
ಉದ್ಯೋಗ ಸೃಷ್ಟಿಸುವುದು ನಿಮ್ಮ ಗುರಿಯಾಗಲಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ಈಗಿನ ಮಕ್ಕಳು ಭವಿಷ್ಯದಲ್ಲಿ ಉದ್ಯೋಗ ಪಡೆಯುವುದಕ್ಕಿಂತ ಚೆನ್ನಾಗಿ ಓದಿ ನೀವೇ ನೂರಾರು ಉದ್ಯೋಗ ಸೃಷ್ಟಿ ಮಾಡುವ ಗುರಿಯನ್ನು ಇಟ್ಟುಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಕ್ಕಳಿಗೆ ಕಿವಿಮಾತು ಹೇಳಿದರು. ಕನಕಪುರದಲ್ಲಿ ಭಾನುವಾರ ದ ರೂರಲ್ ಎಜುಕೇಷನ್ ಸೊಸೈಟಿ ಸ್ಥಾಪಕ ಅಧ್ಯಕ್ಷ,
ಬೆಂಗಳೂರಿನಲ್ಲಿ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಕಲ್ಲಿಂದ ಹೊಡೆದ ಸಾಲಗಾರ
ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ಲೋನ್ ರಿಕವರಿಗೆ ಹೋದ ಬ್ಯಾಂಕ್ ಸಿಬ್ಬಂದಿಗೆ ಸಾಲಗಾರ ಕಲ್ಲಿನಿಂದ ತಲೆಗೆ ಹೊಡೆದಿರುವ ಘಟನೆ ನಡೆದಿದೆ. ಚಂದನ್ ಕಲ್ಲೇಟು ತಿಂದ ಬ್ಯಾಂಕ್ ಸಿಬ್ಬಂದಿ. ರಮೇಶ್ ಎಂಬಾತ ಎರಡು ತಿಂಗಳಿನಿಂದ ಬ್ಯಾಂಕ್ ಸಾಲದ ಇಎಂಐ ಕಟ್ಟಿರಲಿಲ್ಲ. ಕಾಲ್ ಮಾಡಿದರೆ ರಿಸೀವ್
ನಾಗವಾರದ ಕಚೇರಿಯಲ್ಲಿ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ
ಬೆಂಗಳೂರಿನ ನಾಗವಾರದಲ್ಲಿ ಮಡಿಕೇರಿಯ ಬಿಜೆಪಿ ಕಾರ್ಯಕರ್ತರೊಬ್ಬರು ಕಚೇರಿಯಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿನಯ್ ಸೋಮಯ್ಯ (35) ಆತ್ಮಹತ್ಯೆ ಮಾಡಿಕೊಂಡ ಕಾರ್ಯಕರ್ತ. ತನ್ನ ವಿರುದ್ಧ ಎಫ್ಐಆರ್ ದಾಖಲಾಗಿದ್ದಕ್ಕೆ ಮನನೊಂದು ನಾಗವಾರದ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಮೊದಲುಸಾಮಾಜಿಕ ಜಾಲತಾಣಗಳಲ್ಲಿ ಡೆತ್
ಬೆಂಗಳೂರಿನಲ್ಲಿ 25ರ ಯುವತಿಯ ಹನಿಟ್ರ್ಯಾಪ್ ಬಲೆಗೆ ಸಿಲುಕಿದ 68ರ ವೃದ್ಧ
ಬೆಂಗಳೂರಿನಲ್ಲಿ 68ರ ವೃದ್ಧರೊಬ್ಬರು 25ರ ಯುವತಿಯ ಹನಿಟ್ರ್ಯಾಪ್ ಬಲೆಯೊಳಗೆ ಸಿಲುಕಿರುವುದು ಬಯಲಾಗಿದೆ. ಯುವತಿ ವೃದ್ಧರಲ್ಲಿ ಎರಡು ಕೋಟಿ ರೂ. ನೀಡುವಂತೆ ಬೇಡಿಕೆಯಿಟ್ಟು ಬೆದರಿಸಿರುವುದಾಗಿ ಆರೋಪಿಸಲಾಗಿದೆ. ಇಬ್ಬರು ಯುವಕರ ಮೂಲಕ ಯುವತಿ 2 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾಳೆ. ಎರಡು ಕೋಟಿ ರೂ. ನೀಡದಿದ್ದರೆ
ಬೆಂಗಳೂರಿನಲ್ಲಿ ಮಳೆಯ ಸಿಂಚನ: ಇನ್ನೆರಡು ದಿನ ಭಾರೀ ಮಳೆ ಮುನ್ಸೂಚನೆ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಮಳೆಯಾಗಿದ್ದು, ಬಂಗಾಳಕೊಲ್ಲಿಯಲ್ಲಿ ಸಂಭವಿಸಿದ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೆರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನ ಒಳ ಮತ್ತು ಹೊರವಲಯಗಳಲ್ಲಿ ಗುರುವಾರ ಬೆಳಗ್ಗೆಯೇ ಮಳೆಯಾಗಿದೆ. ಪೀಣ್ಯ, ದಾಸರಹಳ್ಳಿ, ಹೆಸರಘಟ್ಟ ಸುತ್ತಮುತ್ತ
ಬೆಂಗಳೂರಿನಲ್ಲಿ ಮನೆಗೆ ನುಗ್ಗಿದ ಚಿರತೆ: ಸಮಯಪ್ರಜ್ಞೆಯಿಂದ ಪಾರಾದ ಕುಟುಂಬ!
ಚಿರತೆಯೊಂದು ಮನೆಯೊಳಗೆ ನುಗ್ಗಿದ್ದು, ಮನೆ ಸದಸ್ಯರ ಸಮಯಪ್ರಜ್ಞೆಯಿಂದ ಪಾರಾದ ಘಟನೆ ಬೆಂಗಳೂರಿನ ಆನೇಕಲ್ ಬಳಿಯ ಜಿಗಣಿಯಲ್ಲಿ ನಡೆದಿದೆ. ಬುಧವಾರ ರಾತ್ರಿಯೀಡಿ ಮನೆಯ ಸುತ್ತಮುತ್ತ ಅಲೆದಾಡುತ್ತಿದ್ದ ಚಿರತೆ ಗುರುವಾರ ಬೆಳಿಗ್ಗೆ ಮನೆಯ ಬಾಗಿಲು ತೆಗೆಯುತ್ತಿದ್ದಂತೆ ಒಳಗೆ ಪ್ರವೇಶಿಸಿದೆ. ಮನೆಯೊಳಗೆ ಹೋದ ಚಿರತೆ ಕೊಠಡಿ
ಬೆಂಗಳೂರಿನಲ್ಲಿ ಅಣ್ಣನೊಂದಿಗೆ ತೆರಳುತ್ತಿದ್ದ ಬಿಹಾರ ಯುವತಿಯ ಅಪಹರಿಸಿ ರೇಪ್
ಬೆಂಗಳೂರು ಕೆಆರ್ ಪುರಂ ರೈಲ್ವೆ ಸ್ಟೇಷನ್ನಿಂದ ಬುಧವಾರ ಮಧ್ಯರಾತ್ರಿ ಅಣ್ಣನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದ ಬಿಹಾರದ ಯುವತಿಯನ್ನು ಅಪಹರಿಸಿದ ಕಿರಾತಕರು ಅತ್ಯಾಚಾರ ಎಸಗಿದ್ದಾರೆ. ಯುವತಿಯ ಅಣ್ಣನ ಮೇಲೂ ಹಲ್ಲೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಿಹಾರ ಮೂಲದ ಯುವತಿ