Menu

3 ತಿಂಗಳು ಬಿರು ಬಿಸಿಲು‌ ಸಾಮಾನ್ಯ ತಾಪಮಾನ

ಬೆಂಗಳೂರು: ಮಾರ್ಚ್- ಎಪ್ರಿಲ್‌ ಮೇ ಅಂತ್ಯದವರೆಗೂ ಉತ್ತರ ಕರ್ನಾಟಕದಲ್ಲಿ ತೀವ್ರ ಬಿಸಿಲು ಕಾಡುವ ಬೆನ್ನಲ್ಲೇ,ವಾಡಿಕೆಗಿಂತ ಅಧಿಕ ಮುಂಗಾರು ಮಳೆಯಿಂದಾಗಿ ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯ ತಾಪಮಾನ ಇರಲಿದೆ ಎಂದು ಹವಾಮಾನ ಮುನ್ಸೂಚನೆ ಇದೆ. ಮಾರ್ಚ್ ನಿಂದ ಮೇ ತಿಂಗಳವರೆಗೆ ಕರ್ನಾಟಕದಲ್ಲಿ ತೀವ್ರ ಬಿಸಿಲು ಮತ್ತು ಇದೇ ಸಂದರ್ಭದಲ್ಲಿ ಅಧಿಕ ಮಳೆಯೂ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರು ಸೇರಿದಂತೆ, ದಕ್ಷಿಣ ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಸಾಮಾನ್ಯಕ್ಕಿಂತ ಹೆಚ್ಚಾಗಿ

ಕನಕಪುರದಲ್ಲಿ ಪೊಲೀಸರ ಮೇಲೆ ಹಲ್ಲೆಗೈದ ಪುಂಡರ ಬಂಧನ

ಕನಕಪುರ ತಾಲೂಕಿನ ಕುರುಬಳ್ಳಿದೊಡ್ಡಿ ಗ್ರಾಮದ ಬಳಿ ರಾಮನಗರ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ರೌಡಿಶೀಟರ್ ಸೇರಿ ಪುಂಡರ ಗುಂಪೊಂದು ಹಲ್ಲೆ ನಡೆಸಿದೆ. ಆರೋಪಿಗಳಾದ ರೌಡಿಶೀಟರ್ ಕಿರಣ್, ಗುರುಪ್ರಸಾದ್, ಸುಂದರ್ ಎಂಬವರನ್ನು ಸಾತನೂರು

ಕೋಣನಕುಂಟೆಯಲ್ಲಿ ಪಿಜಿ ಮಾಲಕಿ ಆತ್ಮಹತ್ಯೆ, ಸ್ನೇಹಿತನೇ ಕೊಲೆಗೈದ ಶಂಕೆ

ಬೆಂಗಳೂರಿನ ಕೋಣನಕುಂಟೆಯಲ್ಲಿ ಪಿಜಿ ಮಾಲಕಿಯೊಬ್ಬರು ಅನುಮಾನಾಸ್ಪದವಾಗಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಸ್ತಿಯ ವಿಚಾರಕ್ಕೆ ಸ್ನೇಹಿತನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೆಲವು ದಿನಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಹೇಮಾವತಿ, ಪಿಜಿ ನಡೆಸುತ್ತಿದ್ದರು. ಪಿಜಿ ಜೊತೆಗೆ ಮನೆ ಕಡೆಯೂ ಆರ್ಥಿಕವಾಗಿ ಚೆನ್ನಾಗಿದ್ದ

ಚಿನ್ನ ಕಳ್ಳಸಾಗಣೆ: ಐಪಿಎಸ್‌ ಅಧಿಕಾರಿಯ ಹತ್ತಿರದ ಸಂಬಂಧಿ ಪೊಲೀಸ್‌ ವಶ

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿಯೊಬ್ಬರ ಹತ್ತಿರದ ಸಂಬಂಧಿಯನ್ನು ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಡಿಆರ್‌ಐ (ಡೈರೆಕ್ಟೊರೇಟ್‌ ಆಪ್‌ ರೆವಿನ್ಯು ಇಂಟೆಲಿಜೆನ್ಸ್‌) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೇರೆ ದೇಶದಿಂದ ದೆಹಲಿ ಮೂಲಕ ಚಿನ್ನ ಸಾಗಣೆ ಮಾಡುತ್ತಿದ್ದರು ಎಂಬ ಆರೋಪದ ಮೇಲೆ ಐಪಿಎಸ್‌ ಅಧಿಕಾರಿಯ ಹತ್ತಿರದ

ಮಹಾಕುಂಭ ಮೇಳದಿಂದ ಮರಳಿದ ಕಳ್ಳರ ಬಂಧನ

ಬೆಂಗಳೂರಿನಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ಇಬ್ಬರು  ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಮಹಾ ಕುಂಭಮೇಳಕ್ಕೆ ಹೋಗಿ ಬಂದ ಬಳಿಕ  ಕೆ.ಪಿ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಳ್ಳರಲ್ಲಿ ಒಬ್ಬ ಅಪ್ರಾಪ್ತ ವಯಸ್ಕನಾಗಿದ್ದಾನೆ. ಆರೋಪಿಗಳು ಫೆಬ್ರವರಿ 6ರಂದು ರಾತ್ರಿ ಅಂಗಡಿಗಳ ಶೆಟರ್‌ ಮುರಿದು ಸರಣಿ ಕಳ್ಳತನ

ದರ ಎರಿಕೆ ಎಫೆಕ್ಟ್: ಮೆಟ್ರೋ ಪ್ರಯಾಣ ಶೇ.13ರಷ್ಟು ಇಳಿಕೆ

ಬೆಂಗಳೂರು: ಕಡಿಮೆ ಆದಾಯದ ಮಧ್ಯಮ ಬಡ ವರ್ಗದ ಜನ, ಆದಾಯವೇ ಇಲ್ಲದ ವಿದ್ಯಾರ್ಥಿಗಳ ದಿನನಿತ್ಯದ ಓಡಾಟಕ್ಕೆ ಮೆಟ್ರೋ ದುಬಾರಿಯಾಗಿದ್ದು,ಮೆಟ್ರೋ ಪ್ರಯಾಣವನ್ನೇ ನಿಲ್ಲಿಸಿದ್ದಾರೆ. ಇದರಿಂದ ಗಣನೀಯ ಪ್ರಮಾಣದಲ್ಲಿ ಮೆಟ್ರೋ ಸವಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ದರ ಹೆಚ್ಚಳದ ಬಳಿಕ ಪ್ರತಿದಿನ ಸರಾಸರಿ 13% ರಷ್ಟು

ಬೆಂಗಳೂರು ಜಾಗತಿಕವಾಗಿ ಬೆಳೆಯಲು ಕೊಡುಗೆ ನೀಡಿದ ಮನಮೋಹನ್ ಸಿಂಗ್: ಡಿಕೆ ಶಿವಕುಮಾರ್

ಬೆಂಗಳೂರು: ದೂರದೃಷ್ಟಿಯ ನಾಯಕ, ಆರ್ಥಿಕ ನೀತಿಗಳ ಮೂಲಕ ಜನಸಾಮಾನ್ಯರ ಹಾಗೂ ದೇಶ ಹಾಗೂ ಬೆಂಗಳೂರು ಜಾಗತಿಕವಾಗಿ ಬೆಳೆಯಲು, ಗುರುತಿಸಿಕೊಳ್ಳಲು ಕೊಡುಗೆ ನೀಡಿದ ವ್ಯಕ್ತಿ ಮನಮೋಹನ್ ಸಿಂಗ್ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ವಿಧಾನಸಭೆ ಬಜೆಟ್ ಅಧಿವೇಶನದ ಮೊದಲನೇ ದಿನದ ಸಂತಾಪ ಸೂಚನೆ

ವಿಧಾನಸೌಧ ಸೇರಿ ಆಸ್ತಿ ತೆರಿಗೆ ಪಾವತಿಸಲು ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್‌

ವಿಧಾನಸೌಧ, ರಾಜಭವನ ಸೇರಿ ಒಟ್ಟು 258 ಸರ್ಕಾರಿ ಕಟ್ಟಡಗಳಿಗೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಪಾವತಿಸುವಂತೆ ಬಿಬಿಎಂಪಿ ನೋಟಿಸಿ ನೀಡಿದೆ. ಈಗಾಗಲೇ ರಾಜ್ಯಾದ್ಯಂತ ಬಹುತೇಕ ಸರ್ಕಾರಿ ಇಲಾಖೆಗಳು 8 ಸಾವಿರ ಕೋಟಿ ರೂ.ಗಳಷ್ಟು ವಿದ್ಯುಲ್ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಬಿಬಿಎಂಪಿ ಮೂಲಗಳು

ಬೆಂಗಳೂರಲ್ಲಿ  ಇನೊವೇಟಿವ್‌ ಇಂಟರ್‌ನ್ಯಾಷನಲ್‌ ಫಿಲ್ಮ್‌ ಫೆಸ್ಟಿವಲ್‌ (ಐಫಾ) ಆಯೋಜನೆ: ಡಿಕೆ ಶಿವಕುಮಾರ್‌

“ಐಫಾ ಚಲನಚಿತ್ರ ಪ್ರಶಸ್ತಿ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸಲು ನಿನ್ನೆ ಒಂದು ತಂಡವೇ ಇಲ್ಲಿಗೆ ಆಗಮಿಸಿ ಸಭೆ ಮಾಡಲಾಗಿದೆ. ಮತ್ತೊಂದು ಸುತ್ತಿನ ಸಭೆ ಬಳಿಕ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುತ್ತೇನೆ. ಕನ್ನಡ ಸಿನಿಮಾವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಹೀಗಾಗಿ ನಿಮಗೆ ಅಭಿನಂದನೆ

ರಾಜ್ಯದ ಕೈಗಾರಿಕಾ ನೀತಿಯಲ್ಲಿ ಪ್ರವಾಸೋದ್ಯಮ ಸೇರ್ಪಡೆ: ಡಿ‌ಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ವಿವಿಧ ಆಯಾಮಗಳನ್ನು ಹೊಂದಿರುವ ರಾಜ್ಯ. ಕರ್ನಾಟಕ ಇಡೀ ಭಾರತದಲ್ಲಿಯೇ ವೈವಿಧ್ಯಮಯ ಪ್ರವಾಸೋದ್ಯಮಕ್ಕೆ ತಕ್ಕನಾಗಿದೆ. ಈ ಕಾರಣಕ್ಕೆ ನಮ್ಮ ಕೈಗಾರಿಕಾ ನೀತಿಯಲ್ಲಿ ಪ್ರವಾಸೋದ್ಯಮವನ್ನು ಪ್ರಮುಖವಾಗಿ ಸೇರ್ಪಡೆ ಮಾಡಿದ್ದೇವೆ. ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಇದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.