Menu

ಬಾಲಕಿ ಹೊಟ್ಟೆಯಲ್ಲಿತ್ತು ಮೂರು ಕೆಜಿ ಕೂದಲು

ಬೆಂಗಳೂರಿನಲ್ಲಿ ವೈದ್ಯರೇ ಅಚ್ಚರಿಪಡುವಂತೆ ಎಂಟು ವರ್ಷದ ಬಾಲಕಿಯ ಹೊಟ್ಟೆಯೊಳಗೆ ಮೂರು ಕೆಜಿ ಕೂದಲು ಪತ್ತೆಯಾಗಿದೆ. ಬೆಂಗಳೂರಿನ ನಾಯಂಡಹಳ್ಳಿಯ ನೇಟಸ್‌ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಹೊಟ್ಟೆಯೊಳಗಿದ್ದ ಮೂರು ಕೆಜಿ ತೂಕದ ಕೂದಲು ಗಂಟನ್ನು ಹೊರ ತೆಗೆದಿದ್ದಾರೆ. ‘ಟ್ರೈಕೊ ಬೆಜೋರ್’ ಎಂಬ ಕೂದಲು ನುಂಗುವ ರೋಗದಿಂದ ಬಳಲುತ್ತಿದ್ದ ಬಾಲಕಿ 4-5 ವರ್ಷಗಳಿಂದ ಕೂದಲು ನುಂಗಿರುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದ್ದು, ಇದು ಬಹು ಅಪರೂಪದ ಕಾಯಿಲೆ

ಬೆಂಗಳೂರಿನಲ್ಲಿ ಏಳು ಕೋಟಿ ದರೋಡೆ: ರೂವಾರಿ ಎನ್ನಲಾದ ಪಿಸಿ ಅರೆಸ್ಟ್‌

ಬೆಂಗಳೂರಿನ ಜಯನಗರದಲ್ಲಿ ಎಟಿಎಂಗೆ ಸಾಗಿಸುತ್ತಿದ್ದ ಹಣವಿದ್ದ ವಾಹನವನ್ನು ದರೋಡೆ ಮಾಡಿ ಏಳು ಕೋಟಿ ರೂ. ಒಯ್ದು ಪರಾರಿಯಾಗಿರುವ ಪ್ರಕರಣದ ಮಾಸ್ಟರ್‌ ಮೈಂಡ್‌ ಎನ್ನಲಾದ ಪೊಲೀಸ್ ಕಾನ್ಸ್‌ಟೇಬಲ್‌ವೊಬ್ಬರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತಿರುಪತಿಯಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆ

ಕೊಳಗೇರಿ ನಿವಾಸಿಗಳಿಗೆ ಕಡಿಮೆ ವೆಚ್ಚದಲ್ಲಿ ವಸತಿ ಸೌಕರ್ಯ: ಸಚಿವ ಕೆಜೆ ಜಾರ್ಜ್

ಬೆಂಗಳೂರು, ನವೆಂಬರ್ 20, 2025: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೊಳಗೇರಿ ನಿವಾಸಿಗಳಿಗೆ ಸರ್ಕಾರದ ವತಿಯಿಂದ ಕಡಿಮ ವೆಚ್ಚದಲ್ಲಿ ವಸತಿ ಸೌಕರ್ಯ ಕಲ್ಪಿಸುವ ಕುರಿತು ಪರಿಶೀಲಿಸಲು ಕ್ಷೇತ್ರದ ಶಾಸಕರೂ ಆಗಿರುವ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ವಸತಿ ಸಚಿವ ಬಿ.ಝಡ್ ಜಮೀರ್

ಬೆಂಗಳೂರಿನಲ್ಲಿ 7 ಕೋಟಿ ರೂ. ದರೋಡೆ: ತಿರುಪತಿಯಲ್ಲಿ ಆರೋಪಿಗಳ ಬಂಧನ

ಬೆಂಗಳೂರಿನಲ್ಲಿ ಬುಧವಾರ ಎಟಿಎಂಗೆ ಹಣ ಹಾಕುವ ಕಾರು ತಡೆದು 7 ಕೋಟಿ ರೂ. ದರೋಡೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ತಿರುಪತಿಯಲ್ಲಿ ಬಂಧಿಸಿದ್ದಾರೆ.  ಹೇಮಂತ್, ಸುನೀಲ್  ಬಂಧಿತ ಆರೋಪಿಗಳಾಗಿದ್ದು, ದರೋಡೆಗೆ ಬಳಸಿದ್ದಾರೆ ಎನ್ನಲಾದ ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಯನಗರದ ಅಶೋಕ

ಕೆಲಸ ಮಾಡಲು ಯೋಗ್ಯತೆ ಇಲ್ಲದವರಿಂದ ಪ್ರತಿಭಟನೆ: ಜೆಡಿಎಸ್ ವಿರುದ್ಧ ಡಿಸಿಎಂ ವಾಗ್ದಾಳಿ

“ಜೆಡಿಎಸ್‌ನವರ  ಯೋಗ್ಯತೆಗೆ ಒಂದು ಕೆಲಸ ಮಾಡಿಲ್ಲ. ತುಂಗಭದ್ರಾ ಅಣೆಕಟ್ಟಿನ ಗೇಟ್ ಕಿತ್ತು ಹೋದಾಗ ಒಂದೇ ವಾರದಲ್ಲಿ ಗೇಟ್ ದುರಸ್ತಿ ಮಾಡಲಾಗಿದೆ. ಜೆಡಿಎಸ್ ಅವರಿಗೆ ಏನೂ ಮಾಡಲು ಆಗಿಲ್ಲ. ಈಗ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ” ಎಂದು ಡಿಸಿಎಂ ಡಿಕೆಶಿವಕುಮಾರ್  ಹರಿಹಾಯ್ದರು.

ಬೆಂಗಳೂರಿಗೆ ಟನಲ್ ರಸ್ತೆ ಅಗತ್ಯ: ಭಾರತೀಯ ಇಂಜಿನಿಯರ್ ಗಳ ಸಂಸ್ಥೆ ರಾಜ್ಯ ಸರ್ಕಾರಕ್ಕೆ ಬೆಂಬಲ

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ಟನಲ್ ರಸ್ತೆ ಅಗತ್ಯವಿದ್ದು, ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಭಾರತೀಯ ಇಂಜಿನಿಯರ್ ಗಳ ಸಂಸ್ಥೆ (ಐಐಇ) ಡಿಸಿಎಂ ಡಿಕೆ ಶಿವಕುಮಾರ್ ಅವರ ಸಮ್ಮುಖದಲ್ಲಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು. ಅಲಿ ಆಸ್ಕರ್ ರಸ್ತೆಯಲ್ಲಿ ಬುಧವಾರ ನಡೆದ ಬೆಂಗಳೂರು

ಚಳಿ ತಡೆಯಲಾಗುತ್ತಿಲ್ಲ, ಬೆಡ್‌ಶೀಟ್‌ ಕೊಡಿಸಿ: ನಟ ದರ್ಶನ್‌ ಜಡ್ಜ್‌ಗೆ ಮನವಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್‌ ಬೆಡ್‌ಶೀಟ್‌ಗಾಗಿ ಕೋರ್ಟ್‌ನಲ್ಲಿ ಬೇಡಿಕೆ ಇಟ್ಟಿದ್ದಾರೆ. ಚಳಿ ತಡೆಯಲಾಗುತ್ತಿಲ್ಲ, ಈ ಕಾರಣ ನಿದ್ದೆ ಬರುತ್ತಿಲ್ಲ, ಬೆಡ್‌ಶೀಟ್‌ ಕೊಡಿಸಿ ಎಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾರೆ. ಪ್ರಕರಣದ ವಿಚಾರಣೆ ಸಂಬಂಧ ಪರಪ್ಪನ ಅಗ್ರಹಾರ

ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ: 11 ಜನರ ಸಾವಿಗೆ ಆರ್‌ಸಿಬಿಯೇ ಹೊಣೆಯೆಂದು ಸಿಐಡಿ ಚಾರ್ಜ್‌ಶೀಟ್‌

ಆರ್‌ಸಿಬಿ ವಿಜಯೋತ್ಸವ ವೇಳೆ ಬೆಂಗಳೂರಿನ  ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತದಿಂದ 11 ಜನ ಮೃತಪಟ್ಟ ಪ್ರಕರಣದ ತನಿಖೆ ಮುಗಿಸಿ ಚಾರ್ಜ್​ಶೀಟ್ ಸಲ್ಲಿಕೆಗೆ ಸಿಐಡಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಕೆಗೆ ಹೈಕೋರ್ಟ್ ಸಮ್ಮತಿಸಿದೆ. 2,200ಕ್ಕೂ ಅಧಿಕ ಪುಟಗಳ ಚಾರ್ಜ್‌ಶೀಟ್‌ನಲ್ಲಿ ಈ ಸಾವುಗಳಿಗೆ

ತೆರಿಗೆ ಬಾಕಿ ಪಾವತಿಸದ ಮಂತ್ರಿ ಮಾಲ್ ಗೆ ಮತ್ತೆ ಬೀಗ!

ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡು ಪಾವತಿಸಲು ಹಿಂದೇಟು ಹಾಕುತ್ತಿರುವ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಗೆ ಮತ್ತೊಮ್ಮೆ ಬೀಗ ಬಿದ್ದಿದೆ. ಮಂತ್ರಿ ಮಾಲ್ 30.81 ಕೋಟಿ ರೂ. ಆಸ್ತಿ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಮಾಲ್‌ ಗೆ

ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಲೈಂಗಿಕ ದೌರ್ಜನ್ಯ: ಆರೋಪಿಯ ರಕ್ಷಿಸಿದ ಪಿಎಸ್‌ಐ ವಿರುದ್ಧ ಪ್ರತಿಭಟನೆ

ಬೆಂಗಳೂರು ಹೊರವಲಯದ ಆನೇಕಲ್ ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ಮಹಿಳೆ ಮೇಲೆ ಸ್ಕ್ಯಾನಿಂಗ್ ವೇಳೆ ನಡೆಸಿದ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ರಕ್ಷಿಸಲು ಯತ್ನಿಸಿದ ಆರೋಪದಡಿ ಆನೇಕಲ್ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ ತಿಪ್ಪೇಸ್ವಾಮಿ ವಿರುದ್ಧ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ನವೆಂಬರ್ 10ರಂದು ಹೊಟ್ಟೆ