Wednesday, November 19, 2025
Menu

ಬೆಂಗಳೂರಿನ ಮಹಿಳೆಗೆ ಇಂದೋರ್ ವ್ಯಕ್ತಿಗಳಿಂದ ಜೀವಬೆದರಿಕೆ

ಬೆಂಗಳೂರಿನ ಪ್ರೆಸ್ಟೀಜ್ ಜಿಂದಾಲ್ ಸಿಟಿಯಲ್ಲಿ ವಾಸಿಸುವ ಪ್ರಿಯಾಂಕ ರಾಯ್ ಅವರಿಗೆ ಇಂದೋರ್ ಮೂಲದ ವ್ಯಕ್ತಿಗಳು ಲೈಂಗಿಕ ಕಿರುಕುಳ ಮತ್ತು ಅಪಹರಣದ ಬೆದರಿಕೆ ಹಾಗೂ ಜೀವ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ.

ವಾಟ್ಸಾಪ್‌ನಲ್ಲಿ ಶಾರ್ಪ್‌ಶೂಟರ್ ಪೋಟೊ ಕಳುಹಿಸಿ ಹಣ ಕೊಡದಿದ್ದರೆ ಮೂರು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳನ್ನು ಅಪಹರಿಸಿ ವೇಶ್ಯಾವಾಟಿಕೆ ಕೇಂದ್ರಕ್ಕೆ ಮಾರಾಟ ಮಾಡುವುದಾಗಿ ಹೆದರಿಸಲಾಗಿದೆ.  ವಾಟ್ಸಾಪ್ ಮತ್ತು ಕರೆಗಳ ಮೂಲಕ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಸಂತ್ರಸ್ತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಪತಿ ಮೋಹಿನ್ ಶೇರು ಮಾರುಕಟ್ಟೆಯ ಆರ್ಥಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದೋರ್ ಪೊಲೀಸರ ಬಂಧನದಲ್ಲಿದ್ದಾರೆ. ನಮ್ಮ ಜೀವಕ್ಕೂ, ಮಕ್ಕಳಿಗೂ ಅಪಾಯವಿದೆ, ರಕ್ಷಣೆ ನೀಡಿ ಎಂದು ಪ್ರಿಯಾಂಕ ಮನವಿ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ IT Act 67 ಜೊತೆ 352, 351(4)ಪ್ರಕರಣ ದಾಖಲಾಗಿದೆ.

ಅರಕಲಗೂಡು: ಗ್ಯಾಸ್‌ ಸಿಲಿಂಡರ್‌ ಸ್ಫೋಟದಲ್ಲಿ ನಾಲ್ವರಿಗೆ ಗಾಯ

ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅರಕಲಗೂಡು ಪಟ್ಟಣದ, ಹೆಂಟಗೆರೆ ವಾರ್ಡ್‌ನಲ್ಲಿ ನಡೆದಿದೆ. ‌ಹೆಂಟಿಗೆರೆ ಗ್ರಾಮದ ದೊಡ್ಡೇಗೌಡ ಎಂಬವರ ಮನೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರು ವಾಸವಿದ್ದು ಬೆಳಿಗ್ಗೆ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡ‌ರ್ ಸ್ಫೋಟಗೊಂಡಿದೆ.

ಇಬ್ಬರ ಕೈ ಕಾಲುಗಳು ಸಂಪೂರ್ಣ ಸುಟ್ಟು ಹೋಗಿವೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಬೆಂಕಿಗಾಹುತಿಯಾಗಿವೆ. ಗಾಯಾಳುಗಳಿಗೆ ಅರಕಲಗೂಡು ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Related Posts

Leave a Reply

Your email address will not be published. Required fields are marked *