ಬೆಂಗಳೂರಿನ ಜಯಶ್ರೀ ಫಣೀಶ್ ಎಂಬವರು ಚಿನ್ನದ ಕುಸುರಿಯೊಂದಿಗೆ ಅಮೂಲ್ಯ ರತ್ನಗಳು ಮತ್ತು ಹರಳುಗಳನ್ನು ಬಳಸಿ ಮರದ ಚೌಕಟ್ಟಿನಲ್ಲಿ ಕೆತ್ತಿರುವ 2.5 ಕೋಟಿ ರೂಪಾಯಿ ಮೌಲ್ಯದ
ರಾಮನ ಕಲಾಕೃತಿಯನ್ನು ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ದೇಣಿಗೆಯಾಗಿ ನೀಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಧ್ವಜಾರೋಹಣ ನೆರವೇರಿಸುವ ಸಂದರ್ಭ ಈ ಕಲಾಕೃತಿಯನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ.
ಈ ಕಲಾಕೃತಿಯು 800 ಕೆಜಿ ತೂಕ ಹೊಂದಿದ್ದು, ೧೮ ಅಡಿ ಅಗಲ, ಎಂಟು ಅಡಿ ಎತ್ತರವಿದೆ, ಮುಂಭಾಗದಲ್ಲಿ ಗ್ಲಾಸ್ ಅಳವಡಿಸಲಾಗಿದೆ.
ತಂಜಾವೂರು ಶೈಲಿಯಲ್ಲಿ ರಚಿಸಲಾಗಿದೆ. ಇದು ರಾಮಮಂದಿರದ ಆವರಣದಲ್ಲಿ ಸ್ಥಾಪನೆಯಾಗಲಿದೆ. ಇದನ್ನು ಅಂಚೆ ಇಲಾಖೆ ಲಾಜಿಸ್ಟಿಕ್ ಮೂಲಕ ಬೆಂಗಳೂರಿನಿಂದ ಅಯೋಧ್ಯೆಗೆ ತಲುಪಿಸಿದೆ. ಡಿಸೆಂಬರ್ ೧೭ರಂದು ಬೆಂಗಳೂರಿನಿಂದ ಕಳಿಸಿದ್ದು, ಡಿಸೆಂಬರ್ ೨೨೨ರಂದು ಅಯೋಧ್ಯೆಯಲ್ಲಿ ಇಳಿಸಲಾಗಿದೆ.


