ಬೆಂಗಳೂರು: ನೆಲಮಂಗಲ ಹಾಗೂ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಮೂರು ರಸ್ತೆ ಅಪಘಾತಗಳಲ್ಲಿ ಇಬ್ಬರು ಪಾದಚಾರಿಯರು ಸೇರಿ ಮೂವರು ಮೃತಪಟ್ಟಿದ್ದಾರೆ.
ನೆಲಮಂಗಲ ಬಳಿಯ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ಅಶೋಕ್ (27) ಮೃತಪಟ್ಟಿದ್ದಾರೆ.
ನೆಲಮಂಗಲದ ಆಶೋಕ್ ಅವರು ರಸ್ತೆ ದಾಟುತ್ತಿದ್ದಾಗ ದುರ್ಘಟನೆ ನಡೆದಿದ್ದು ಅಪಘಾತ ನಡೆಸಿ ಪರಾರಿಯಾಗಿರುವ ವಾಹನ ಹಾಗೂ ಚಾಲಕನ ಪತ್ತೆಗೆ ಶೋಧ ನಡೆಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮಾಕಳಿ ಬಸ್ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ 9:30ರ ವೇಳೆ ಬೈಕ್ ಗೆ ಕ್ಯಾಂಟರ್ ಡಿಕ್ಕಿ ಹೊಡೆದು ಸವಾರ ಹನುಮಂತಪ್ಪ (38) ಮೃತಪಟ್ಟಿದ್ದಾರೆ.
ಮಾಕಳಿಯ ಹನುಮಂತಪ್ಪ ಅವರು ಕೆಲಸಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದ್ದು, ಇವೆರಡೂ ಪ್ರಕರಣಗಳನ್ನು ದಾಖಲಿಸಿರುವ ನೆಲಮಂಗಲ ಸಂಚಾರ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಮಹಿಳೆ ದುರ್ಮರಣ:
ಮಾದನಾಯಕನಹಳ್ಳಿಯ ಚಿಕ್ಕ ಗೊಳ್ಳರಹಳ್ಳಿಯ ಬಳಿ ನಡೆದುಹೋಗುತ್ತಿದ್ದ ಮರಿಯಮ್ಮ(35) ಅವರು ಟಾಟಾ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಪರಿಣಾಮ ಮೃತಪಟ್ಟಿರುತ್ತಾರೆ.
ಪ್ರಕರಣ ದಾಖಲಿಸಿರುವ ಮಾದನಾಯಕನಹಳ್ಳಿ ಪೊಲೀಸರು ಗೂಡ್ಸ್ ವಾಹನ ಚಾಲಕನನ್ನು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.