Wednesday, August 06, 2025
Menu

ಆನ್‌ಲೈನ್‌ ವಧುವಿನ ಹೆಸರಲ್ಲಿ ಬೆಂಗಳೂರಿನ ಟೆಕ್ಕಿಗೆ 55 ಲಕ್ಷ ರೂ. ವಂಚನೆ

ಮ್ಯಾಟ್ರಿಮೋನಿಯಲ್ ಪೋರ್ಟಲ್‌ನಲ್ಲಿ ವಧು ಎಂದು ಬಿಂಬಿಸಿದ್ದ ಸೈಬರ್ ವಂಚಕರ ನಂಬಿ ಬೆಂಗಳೂರಿನ ಟೆಕ್ಕಿಯೊಬ್ಬರು 55 ಲಕ್ಷ ರೂ.ಗೂ ಹೆಚ್ಚು ಕಳೆದುಕೊಂಡಿದ್ದಾರೆ. ಉಲ್ಲಾಳ ಉಪನಗರದ 32 ವರ್ಷದ ಸಂತ್ರಸ್ತ ಟೆಕ್ಕಿ, ಒಕ್ಕಲಿಗ ವೈವಾಹಿಕ ವೇದಿಕೆಯಲ್ಲಿ ನಿಹಾರಿಕಾ ಗೌಡ ಎಂಬವರ ಸಂಪರ್ಕ ಪಡೆದುಕೊಂಡಿದ್ದರು. ಇಬ್ಬರೂ ಚಾಟ್ ಆರಂಭಿಸಿ ಸಲುಗೆ ಹೊಂದಿದ್ದಾರೆ. ಟೆಕ್ಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆಕೆ, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡುವಂತೆ ಮನವೊಲಿಸಿದ್ದಳು. ಟೆಕ್ಕಿಗೆ ನಕಲಿ ವೆಬ್‌ಸೈಟ್‌ನ ಲಿಂಕ್ ಕಳುಹಿಸಿ ವ್ಯಾಲೆಟ್ ರಚಿಸಲು ಮಾರ್ಗದರ್ಶನ ನೀಡಿದ್ದಳು.

ಆರಂಭದಲ್ಲಿ 1 ಲಕ್ಷ ರೂ. ವರ್ಗಾಯಿಸಿದ್ದ ಟೆಕ್ಕಿ, ಸೈಟ್ ಲಾಭವನ್ನು ತೋರಿಸುತ್ತಿದ್ದಂತೆ ಹೂಡಿಕೆ ಮಾಡುವುದನ್ನು ಮುಂದುವರಿಸಿದದ್ದ. ಹಂತ ಹಂತವಾಗಿ 55.64 ಲಕ್ಷ ರೂ. ವರ್ಗಾಯಿಸಿದ್ದ. ಬಳಿಕ ಹಣವನ್ನು ಹಿಂಪಡೆಯಲು ಸಾಧ್ಯವಾಗದಿದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ. ವಧುವೆಂದು ಬಿಂಬಿಸಿಕೊಂಡಿದ್ದ ವ್ಯಕ್ತಿಯಿಂದಲೂ ಪ್ರತಿಕ್ರಿಯೆ ಬರುವುದು ನಿಂತಿದ್ದು, ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಕಾಲ್ ಗರ್ಲ್​​ ಸೇವೆ ಬೇಕೆಂದು ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್‌ನಲ್ಲಿ ಬಂದಿದ್ದ ಲಿಂಕ್ ಕ್ಲಿಕ್ ಮಾಡಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು 1.4 ಲಕ್ಷ ರೂ. ಕಳೆದುಕೊಂಡಿದ್ದಾರೆ. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಕಾಲ್ ಗರ್ಲ್ ಮತ್ತು ಸ್ಪಾ ಸೇವೆಗಳನ್ನು ನೀಡುವುದಾಗಿ ಹೇಳಿಕೊಂಡ ಇಶಾನಿ, 299 ರೂ. ಪಾವತಿಸುವಂತೆ ಸೂಚಿಸಿದ್ದಳು. ಪಾವತಿಸಿದ ನಂತರ ಸೇವಾ ಶುಲ್ಕಗಳ ಹೆಸರಿನಲ್ಲಿ ಹೆಚ್ಚಿನ ಹಣವನ್ನು ಟ್ರಾನ್ಸ್​​ಫರ್ ಮಾಡುವಂತೆ ಒತ್ತಾಯಿಸಿದ್ದಳು. ಒಟ್ಟಾರೆ 1,49,052 ರೂ. ಟೆಕ್ಕಿ ಪಾವತಿಸಿದ್ದರು.

ಬಳಿಕಮೊತ್ತ ಹೆಚ್ಚಾಗಿದ್ದು, ಸೇವೆ ಬೇಕಾಗಿಲ್ಲ, ಪಾವತಿ ಮಾಡಿದ್ದ ಮೊತ್ತವನ್ನು ರಿಫಂಡ್ ಮಾಡಿ ಎಂದು ಟೆಕ್ಕಿ ಕೇಳಿಕೊಂಡಿದ್ದಾರೆ. ಆ ಕಡೆಯಿಂದ ಉತ್ತರ ಬರದ ಕಾರಣ ಟೆಕ್ಕಿ ರಾಷ್ಟ್ರೀಯ ಸೈಬರ್ ಅಪರಾಧ ಪೋರ್ಟಲ್‌ನಲ್ಲಿ ವರದಿ ಮಾಡಿ ಹೈಗ್ರೌಂಡ್ಸ್ ಪೊಲೀಸರಿಗೆ ದೂರು ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *