Menu

ಕ್ಲಾಸ್‌ನಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್‌ ಎಂದ ಬೆಂಗಳೂರಿನ ಪ್ರೊಫೆಸರ್‌ ಅಮಾನತು

ಬೆಂಗಳೂರಿನ ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ಡಾ. ಮುರಳೀಧರ ದೇಶಪಾಂಡೆ ಎಂಬವರು ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಯನ್ನು ಟೆರರಿಸ್ಟ್‌ ಎಂದು ಕರೆದು ಅವಮಾನಿಸಿರುವ ಪ್ರಕರಣ ಸಂಬಂಧ ಕಾಲೇಜು ಆಡಳಿತ ಮಂಡಳಿ ಅವರನ್ನು ಅಮಾನತುಗೊಳಿಸಿದೆ.

ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿಗಳ ಗಲಾಟೆ ವೇಳೆ ಕೋಪಗೊಂಡ ಪ್ರೊಫೆಸರ್ ಡಾ. ದೇಶಪಾಂಡೆ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ‘ಟೆರರಿಸ್ಟ್‌’ ಎಂದು ಕರೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮುಸ್ಕಿಂ ವಿದ್ಯಾರ್ಥಿಯನ್ನು ನೀವೆಲ್ಲ ಟೆರರಿಸ್ಟ್‌ ಎಂದು ನಿಂದಿಸುತ್ತಿರುವುದನ್ನು ಇತರ ವಿದ್ಯಾರ್ಥಿಗಳು ಮೊಬೈಲ್​ನಲ್ಲಿ ಘಟನೆಯನ್ನು ಸೆರೆ ಹಿಡಿದಿದ್ದು, ಆ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿದೆ.
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಈ ಬಗ್ಗೆ ದೂರು ದಾಖಲಿಸಿದ ಬಳಿಕ ವಿವಿ ಆಡಳಿತವು ತಕ್ಷಣ ಕ್ರಮ ಕೈಗೊಂಡು ಪ್ರೊಫೆಸರ್ ಅವರನ್ನು ಅಮಾನತುಗೊಳಿಸಿದೆ.

ತರಗರಿಯಲ್ಲೇ ಲವ್‌ ಪ್ರಪೋಸ್‌ ಮಾಡಿದ ಪ್ರೊಫೆಸರ್‌ ಅಮಾನತು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಟಿ.ಬೇಗೂರಿನ ಮೆಡಿಕಲ್‌ ಕಾಲೇಜಿನ ತರಗತಿಯಲ್ಲೇ ಮೆಡಿಕಲ್ ವಿದ್ಯಾರ್ಥಿನಿಗೆ ಲವ್‌ ಪ್ರಪೋಸ್‌ ಮಾಡಿದ್ದ ಪ್ರಾಧ್ಯಾಪಕ ಅಬ್ದುಲ್ ಎಂಬವರನ್ನು ನೆಲಮಂಗಲ ಗ್ರಾಮಾಂತರ ಠಾಣೆ ಪೋಲೀಸರು ಬಂಧಿಸಿದ್ದಾರೆ.

ತರಗತಿ ನಡೆಯುತ್ತಿದ್ದಾಗಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರೊಫೆಸರ್‌ ಅಬ್ದುಲ್‌ ಪ್ರಪೋಸ್‌ ಮಾಡಿದ್ದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿ ಚಪ್ಪಲಿಯಿಂದ ಥಳಿಸಿದ್ದಳು. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು ಮೈಕ್ರೋಬಯಾಲಾಜಿ ವಿಷಯದ ಪ್ರೊಫೆಸರ್‌ ನೆಲಮಂಗಲ ನಿವಾಸಿ ಅಬ್ದುಲ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Related Posts

Leave a Reply

Your email address will not be published. Required fields are marked *