Menu

ಆರ್‌ಟಿಒ ದಾಳಿ: ಐಷಾರಾಮಿ ಕಾರುಗಳ ಟ್ಯಾಕ್ಸ್‌ ಪಾವತಿಸಿದ ಕೆಜಿಎಫ್‌ ಬಾಬು

ಆರ್‌ಟಿಒ ಅಧಿಕಾರಿಗಳ ದಾಳಿ ಬಳಿಕ ಎರಡು ರೋಲ್ಸ್ ರಾಯ್ಸ್ ಕಾರುಗಳಿಗೆ ಉದ್ಯಮಿ ಕೆಜಿಎಫ್‌ ಬಾಬು 38 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ. ಈ ಕಾರುಗಳನ್ನು ನಟರಾದ ಅಮಿತಾಬ್ ಬಚ್ಚನ್ ಹಾಗೂ ಆಮಿರ್‌ ಖಾನ್‌ರಿಂದ ಖರೀದಿಸಿದ್ದರು. ಆಮಿರ್‌ ಖಾನ್‌ರಿಂದ ಖರೀದಿಸಿದ್ದ ರೋಲ್ಸ್‌ ರಾಯ್ಸ್‌ ಕಾರಿಗೆ 19.73 ಲಕ್ಷ ರೂ. ಹಾಗೂ ಅಮಿತಾಬ್ ಬಚ್ಚನ್ ರಿಂದ ಖರೀದಿಸಿದ್ದ ರೋಲ್ಸ್‌ ರಾಯ್ಸ್‌ ಕಾರಿಗೆ 18.53 ಲಕ್ಷ ರೂ. ತೆರಿಗೆ ಪಾವತಿ ಮಾಡಿದ್ದಾರೆ. ಬೆಂಗಳೂರಿನ

Heart attack deaths-ಬೆಂಗಳೂರಿನಲ್ಲಿ ಶಿಕ್ಷಕಿ, ಪೊಲೀಸ್‌ ಸೇರಿ ಮೂವರು ಹೃದಯಾಘಾತಕ್ಕೆ ಬಲಿ

ಬೆಂಗಳೂರಿನಲ್ಲಿ ಶಿಕ್ಷಕಿ, ಗೃಹಿಣಿ ಹಾಗೂ ಹೆಡ್‌ ಕಾನ್ಸ್‌ಟೇಬಲ್‌ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜಯನಗರದ ಗೃಹಿಣಿ ಮಹೇಶ್ವರಿ (೪೯), ನೆಲಮಂಗಲದ ಬಸವಣ್ಣ ದೇವರ ಮಠದ ಶಿಕ್ಷಕಿ ಸುಲೋಚನಾ (49) ಮನೆಯಲ್ಲೇ ಕುಸಿದು ಬಿದ್ದು ಅಸು ನೀಗಿದ್ದಾರೆ. ಸುಲೋಚನಾ ಅವರಿಗೆ ನೆಲಮಂಗಲದ ಭಕ್ತನಪಾಳ್ಯದ ತಮ್ಮ ಮನೆಯಲ್ಲಿದ್ದಾಗ

ಕೆಜಿಎಫ್ ಬಾಬು ನಿವಾಸಕ್ಕೆ ಆರ್‌ಟಿಒ ದಾಳಿ: ದುಬಾರಿ ಕಾರುಗಳ ದಾಖಲೆ ಪರಿಶೀಲನೆ

ಚಲನಚಿತ್ರ ನಿರ್ಮಾಪಕ ಮತ್ತು ಉದ್ಯಮಿ ಕೆಜಿಎಫ್ ಬಾಬು ಅಲಿಯಾಸ್ ಯೂಸುಫ್ ಷರೀಫ್ ನಿವಾಸಕ್ಕೆ ಸಾರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಅವರ ಬಳಿ ಇರುವ ಐಷಾರಾಮಿ ಕಾರುಗಳ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಕೆಜಿಎಫ್ ಬಾಬು ಬಳಿ ರೋಲ್ಸ್ ರಾಯ್ಸ್, ವೆಲ್ಪೇರ್ ಸೇರಿದಂತೆ

ಎರಡು ದಿನ ಎಸ್ಕಾಂಗಳ ಆನ್‌ ಲೈನ್‌ ಸೇವೆ ವ್ಯತ್ಯಯ

ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ಉನ್ನತೀಕರಣದ ಹಿನ್ನೆಲೆಯಲ್ಲಿ ಐದು ಎಸ್ಕಾಂಗಳ ಆನ್‌ ಲೈನ್‌ ಸೇವೆಗಳಾದ ವಿದ್ಯುತ್‌ ಬಿಲ್‌ ಪಾವತಿ, ಹೆಸರು ಬದಲಾವಣೆ, ಜಕಾತಿ ಬದಲಾವಣೆ ಹಾಗೂ ಹೊಸ ಸಂಪರ್ಕ ಸೇರಿದಂತೆ ಆನ್‌ ಲೈನ್‌ ಆಧರಿತ ಸೇವೆಗಳು ಜುಲೈ 25ರ ರಾತ್ರಿ 8.30

Accident Death-ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಮಹಿಳೆ ಸಾವು

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದು ಹಿಂಬದಿ ಸವಾರ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೇಷ್ಮೆ ಸಂಸ್ಥೆ ಮೆಟ್ರೋ ಸ್ಟೇಷನ್ ಬಳಿ ನಡೆದ ಈ ದುರಂತದಲ್ಲಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆ.ಆರ್. ಮಾರ್ಕೆಟ್‌ನಿಂದ ಹಂಚಿಪುರ ಕಾಲೋನಿಗೆ ತೆರಳುತ್ತಿದ್ದ

ಕೆಪಿಸಿಎಲ್ ಸಂಸ್ಥಾಪನಾ ದಿನ ನಾಳೆ, ನಿಗಮದ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್) ದ 56ನೇ ಸಂಸ್ಥಾಪನಾ ದಿನವನ್ನು ಬುಧವಾರ (ಜು. 23) ಆಯೋಜಿಸಲಾಗಿದೆ. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ  ಉದ್ಘಾಟಿಸಲಿದ್ದಾರೆ. ಇಂಧನ ಸಚಿವ ಕೆ.ಜೆ.ಜಾರ್ಜ್,

ಯುಪಿಐ ಪೇಮಂಟ್‌ ಟ್ಯಾಕ್ಸ್‌- ಬೇಕರಿ ಉತ್ಪನ್ನ, ಹಾಲು ಮಾರಾಟ ನಾಳೆ ಬಂದ್‌

ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಪಾವತಿಸುವಂತೆ ನೀಡಿರುವ ನೋಟಿಸ್‌ ಹಿಂಪಡೆಯದಿದ್ದರೆ ಜು.23 ರಿಂದ ಎರಡು ದಿನ ರಾಜ್ಯವ್ಯಾಪಿ ಹಾಲು, ಬೇಕರಿ ಉತ್ಪನ್ನ ಮಾರಾಟ ಬಂದ್ ಮಾಡಲಾಗುವುದು. ಜು.25 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ ಎಚ್ಚರಿಸಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗ ಇಂದಿನಿಂದ  ಸುರಕ್ಷತಾ ಪರಿಶೀಲನೆ

ಬೆಂಗಳೂರು ಆರ್‌ವಿ ರಸ್ತೆಯನ್ನು ಬೊಮ್ಮಸಂದ್ರಕ್ಕೆ ಸಂಪರ್ಕಿಸುವ ಮೆಟ್ರೋ ರೈಲು ಸಂಪರ್ಕದ ಹಳದಿ ಮಾರ್ಗದಲ್ಲಿ ಜುಲೈ 22 ರಿಂದ 25 ರವರೆಗೆ ಸುರಕ್ಷತಾ ಪರಿಶೀಲನೆ ನಡೆಯಲಿದೆ . ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು  ಸುರಕ್ಷತಾ ಪರೀಕ್ಷೆ ನಡೆಸಿ  ಎಲ್ಲವೂ ಸರಿಯಿದ್ದರೆ  ಸಂಚಾರಕ್ಕೆ ಅನುಮತಿ

ಬಿಕ್ಲು ಶಿವ ಕೊಲೆ ಕೇಸ್: ಪೊಲೀಸ್‌ಗೆ ಸಿಗದ ಪ್ರಮುಖ ಆರೋಪಿ ಜಾಮೀನಿಗೆ ಅರ್ಜಿ

ಬೆಂಗಳೂರಿನಲ್ಲಿ ಬಿಕ್ಲು ಶಿವ ಕೊಲೆ ನಡೆದು ವಾರ ಕಳೆದರೂ ಪ್ರಮುಖ ಆರೋಪಿ ಜಗದೀಶ ಇನ್ನೂ ಪೊಲೀಸರಿಗೆ ಪತ್ತೆಯಾಗಿಲ್ಲ, ಆದರೆ ಆತ ಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಕೊಲೆಯ ಪ್ರಮುಖ ಆರೋಪಿ ಜಗದೀಶ್‌ಗೆ ಶಾಸಕ ಬೈರತಿ ಬಸವರಾಜ್ ಶ್ರೀರಕ್ಷೆ ಎಂಬ ಆರೋಪ

ಪೊಲೀಸ್‌ಗೆ ದಿನಕ್ಕೆ 200ರೂ. ಕೊಟ್ರೆ ಮೆಜೆಸ್ಟಿಕ್‌ ದಾರಿಯುದ್ದ ಖಾಸಗಿ ಬಸ್‌ ಪಾರ್ಕಿಂಗ್‌

ಮೆಜೆಸ್ಟಿಕ್ ನ ದಾರಿ ಉದ್ದಕ್ಕೂ ಪ್ರೈವೇಟ್ ಬಸ್‌ಗಳ ನಿಲುಗಡೆಯಿಂದ ಬಹಳಷ್ಟು ಸಮಸ್ಯೆಗಳಾಗುತ್ತಿದ್ದರೂ ಕೇಳುವವರೇ ಇಲ್ಲ. ಏಕೆಂದರೆ ಪೊಲೀಸ್‌ಗೆ ದಿನಕ್ಕೆ 200ರೂ. ಕೊಟ್ರೆ ಮೆಜೆಸ್ಟಿಕ್‌ ದಾರಿಯುದ್ದ ಬಸ್ ಪಾರ್ಕಿಂಗ್‌ಗೆ ಜಾಗ ಸಿಗುತ್ತದೆ. ಖಾಸಗಿ ಬಸ್‌ ಹಾಬಳಿಯಿಂದ ಟ್ರಾಫಿಕ್‌ ಜಾಮ್‌ ಆಗುತ್ತಿದ್ದರೂ ಪೊಲೀಸರು ತಲೆ