ಬೆಂಗಳೂರು ನಗರದಲ್ಲಿ 40 ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳನ್ನು ಹೊಂದಿರುವ ವಸತಿ ಪ್ರದೇಶಗಳಲ್ಲಿರುವ ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳ (2015 ರ ನಂತರ ತೆರೆದ ಅಂಗಡಿಗಳು) ವ್ಯಾಪಾರ ಪರವಾನಗಿಗಳನ್ನು ನವೀಕರಿಸಲಾಗುವುದಿಲ್ಲ ಎಂದು ಬಿಬಿಎಂಪಿ ಮಾರ್ಗಸೂಚಿಯಲ್ಲಿ ತಿಳಿಸಿದೆ.
ಫೆ.28ರ ಒಳಗಡೆ 2025-26ನೇ ಹಣಕಾಸು ವರ್ಷದ ವ್ಯಾಪಾರ ಪರವಾನಗಿಗಳ ನವೀಕರಣ ಮಾಡಬೇಕೆಂದು ಬಿಬಿಎಂಪಿ ಸೂಚಿಸಿದೆ. ನವೀಕರಣ ಶುಲ್ಕವನ್ನು ಉದ್ದಿಮೆದಾರರು ಕೋರುವ ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸಿಕೊಳ್ಳುವಂತೆ ಸೂಚಿಸಲಾಗಿದೆ. ಉದ್ದಿಮೆ ಪರವಾನಗಿ ಶುಲ್ಕವನ್ನು ಆನ್ಲೈನ್ ಮೂಲಕ ಮಾಡಬೇಕು.
ಫೆ.1 ರಿಂದ ಫೆ. 28ರ ವರೆಗೆ ದಂಡವಿಲ್ಲದೆ ಶುಲ್ಕ ಪಾವತಿಸಬಹುದು. ಫೆ.28ರ ಬಳಿಕ ದಂಡ ವಿಧಿಸಲಾಗುತ್ತದೆ. ಮಾರ್ಚ್ 1 ರಿಂದ 31ರವರೆಗೆ ಪರವಾನಗಿ ನವೀಕರಣ ಶುಲ್ಕದ 25% ದಂಡ ಮೊತ್ತದೊಂದಿಗೆ ಪಾವತಿಸಬೇಕು. ಏಪ್ರಿಲ್ 1 ರಿಂದ ಪರವಾನಗಿ ಶುಲ್ಕದ 100% ದಂಡದ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸ ಬೇಕಾಗುತ್ತದೆ.