Menu

ವಿಧಾನಸೌಧ ಸೇರಿ ಆಸ್ತಿ ತೆರಿಗೆ ಪಾವತಿಸಲು ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟಿಸ್‌

ವಿಧಾನಸೌಧ, ರಾಜಭವನ ಸೇರಿ ಒಟ್ಟು 258 ಸರ್ಕಾರಿ ಕಟ್ಟಡಗಳಿಗೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ಪಾವತಿಸುವಂತೆ ಬಿಬಿಎಂಪಿ ನೋಟಿಸಿ ನೀಡಿದೆ.

ಈಗಾಗಲೇ ರಾಜ್ಯಾದ್ಯಂತ ಬಹುತೇಕ ಸರ್ಕಾರಿ ಇಲಾಖೆಗಳು 8 ಸಾವಿರ ಕೋಟಿ ರೂ.ಗಳಷ್ಟು ವಿದ್ಯುಲ್ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ಬಿಬಿಎಂಪಿ ಮೂಲಗಳು ಹೇಳುತ್ತಿವೆ.

ವಿಧಾನಸೌಧ, ವಿಕಾಸ ಸೌಧ, ರಾಜಭವನ ಸೇರಿ ಅನೇಕ ಸರ್ಕಾರಿ ಕಟ್ಟಗಳು ಕೋಟಿಗಟ್ಟಲೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಈಗಾಗಲೇ ನೋಟಿಸ್‌ ನೀಡಲಾಗಿದೆ. ಕೆಲವು ಕಟ್ಟಡಗಳು 17 ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿವೆ. ಆಯಾ ಇಲಾಖೆ ಮುಖ್ಯಸ್ಥರಿಗೆ ತೆರಿಗೆ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ.

ನೋಟಿಸ್‌ ಪಡೆದಿರುವ ಕಟ್ಟಡಗಳ ತೆರಿಗೆ ಪಾವತಿ ಮಾಡದಿದ್ದರೆ, ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಬಿಬಿಎಂಪಿ ಅಧಿಕಾರಿ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *