ಬಿಬಿಎಂಪಿ ಸೇರಿ ರಾಜ್ಯದ 10 ಮಹಾನಗರ ಪಾಲಿಕೆ ಸಿಬ್ಬಂದಿ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದು, ಹಲವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಳೆ ಪ್ರತಿಭಟನೆ ನಡೆಸಲಿದ್ದಾರೆ.
ಕಾಂಗ್ರೆಸ್ ಸರ್ಕಾರ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿ 8 ತಿಂಗಳು ಕಳೆದಿದೆ, ಇದುವರೆಗೆ ಬೇಡಿಕೆ ಈಡೇರಿಸಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬೃಹತ್ ಪ್ರತಿಭಟನೆನಡೆಸಲು ಮುಂದಾಗಿದ್ದಾರೆ.
7 ನೇ ವೇತನ ಸೌಲಭ್ಯ ಜಾರಿಯಾಗಬೇಕು, ಸರ್ಕಾರಿ ನೌಕರರಿಗೆ ನೀಡಿರೋ ಕೆ.ಜಿ.ಐ.ಡಿ ಸೌಲಭ್ಯಗಳನ್ನು ಪಾಲಿಕೆ ನೌಕರರಿಗೂ ಜಾರಿ ಮಾಡಬೇಕು, ಸರ್ಕಾರಿ ನೌಕರರಿಗೆ ನೀಡಿರೋ ಆರೋಗ್ಯ ಜ್ಯೋತಿ, ಆರೋಗ್ಯ ಸಂಜೀವಿನಿ ಯೋಜನೆ ಪಾಲಿಕೆ ನೌಕರರಿಗೆ ಜಾರಿ ಮಾಡಬೇಕು, ಪಾಲಿಕೆಯ ನೌಕರರಿಗೆ ವಿವಿಧ ಹುದ್ದೆಗಳಲ್ಲಿ ಮುಂಬಡ್ತಿ ನೀಡಬೇಕು ಎಂಬುದು ಪಾಲಿಕೆ ನೌಕರರ ಬೇಡಿಕೆಯಾಗಿದೆ.