Menu

ಬಯಲಾಟ ಅಕಾಡೆಮಿಯಿಂದ ಪ್ರಕಟ: 10 ಜನರಿಗೆ ವಾರ್ಷಿಕ ಪ್ರಶಸ್ತಿ

Bayalata Academy

ಕರ್ನಾಟಕ ಬಯಲಾಟ ಅಕಾಡೆಮಿ 2025ನೇ ಸಾಲಿನಲ್ಲಿ ಐವರಿಗೆ ಗೌರವ ಹಾಗೂ 10 ಜನರಿಗೆ ವಾರ್ಷಿಕ ಪ್ರಶಸ್ತಿಯನ್ನು ಘೋಷಿಸಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಪ್ರೊ.ಕೆ.ಆರ್. ದುರ್ಗಾದಾಸ, ಫೆಬ್ರುವರಿ ಮೊದಲ ವಾರ ಧಾರವಾಡದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಗೌರವ ಪ್ರಶಸ್ತಿ ಪುರಸ್ಕೃತರು:

ಕೆ. ಈರಣ್ಣ (ಬಯಲಾಟ-ಬಳ್ಳಾರಿ), ಹನಮಂತಪ್ಪ ಪೂಜಾರ (ಸಣ್ಣಾಟ-ಕೊಪ್ಪಳ), ಕಾಡಪ್ಪ ಉಪ್ಪಾರ (ಸಣ್ಣಾಟ-ಬೆಳಗಾವಿ), ಆರ್.ಬಿ. ಪುಟ್ಟೇಗೌಡ (ಮೂಡಲಪಾಯ-ಹಾಸನ), ಸುಶೀಲವ್ವ ಹೆಗಡೆ (ದೊಡ್ಡಾಟ-ಬೆಳಗಾವಿ). ಪುರಸ್ಕೃತರಿಗೆ ತಲಾ 50 ಸಾವಿರ ರೂ. ನಗದು, ಪ್ರಶಸ್ತಿ ಫಲಕ ನೀಡಲಾಗುವುದು ಎಂದು ಹೇಳಿದರು.

ವಾರ್ಷಿಕ ಪ್ರಶಸ್ತಿ ಪುರಸ್ಕೃತರು :

ಎಚ್.ಸಿ. ಶಿವಬುದ್ಧಿ (ಸೂತ್ರದ ಗೊಂಬೆಯಾಟ-ಮೈಸೂರು), ಜಯಪ್ರಕಾಶಗೌಡ (ಮೂಡಲಪಾಯ-ಮಂಡ್ಯ), ಹೊಳೆಯಾಚೆ ಕೊಟ್ರಪ್ಪ (ಬಯಲಾಟ-ವಿಜಯನಗರ), ಶಿವಾಜಿ ಜಾಧವ (ಬಯಲಾಟ-ಬಾಗಲಕೋಟೆ), ನಂದಗೋಪಾಲ (ಬಯಲಾಟ- ಚಿತ್ರದುರ್ಗ), ಮಲ್ಲಪ್ಪ ಕರಿಮಲ್ಲಣ್ಣವರ (ದೊಡ್ಡಾಟ-ಧಾರವಾಡ), ಬಂಡ್ರಿ ಲಿಂಗಪ್ಪ (ಬಯಲಾಟ-ಬಳ್ಳಾರಿ), ಚೂಟಿ ಚಿದಾನಂದ (ಬಯಲಾಟ-ವಿಜಯನಗರ), ಓದೋವೀರಪ್ಪ (ಬಯಲಾಟ-ದಾವಣಗೆರೆ), ಮಳೆಪ್ಪ ಬಡಿಗೇರ (ಬಯಲಾಟ-ವಿಜಯಪುರ) ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ತಲಾ 25 ಸಾವಿರ ನಗದು, ಪ್ರಶಸ್ತಿ ಫಲಕ ನೀಡಲಾಗುವುದು ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *