ಲಾಸ್ ಏಂಜಲೀಸ್: ಹಲವು ವರ್ಷಗಳಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬ್ಯಾಟ್ ಮನ್ ಫಾರೇವರ್ ಚಿತ್ರದ ಖ್ಯಾತಿಯ ನಟ ವಲ್ ಕಿಲ್ಮೇರ್ ನಿಧನರಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ಏಪ್ರಿಲ್ 1ರಂದು ವಲ್ ಕಿಲ್ಮೇರ್ ಅಸುನೀಗಿದ್ದಾರೆ ಎಂದು ಪುತ್ರಿ ಮರ್ಸಿಡೀಸ್ ಘೋಷಿಸಿದ್ದಾರೆ.
ಹಾಸ್ಯ ಚಿತ್ರ ಟಾಪ್ ಸಿಕ್ರೇಟ್ (1984), ರಿಯಲ್ ಜೀನಿಯಸ್ (1985), ಅತ್ಯಂತ ಜನಪ್ರಿಯ ಚಿತ್ರಗಳಲ್ಲಿ ಒಂದಾದ ಟಾಪ್ ಗನ್ (1986) ಚಿತ್ರದಲ್ಲಿ ಟಾಮ್ ಕ್ರೂಸ್ ವಿರುದ್ಧ ನಟಿಸಿದ್ದ ವಲ್ ಕಿಲ್ಮೇರ್, ಲಿಜಾರ್ಡ್ ಕಿಂಗ್, ಥಂಬ್ ಸ್ಟೋನ್, ಟ್ರೂ ರೋಮಾನ್ಸ್, ಹೀಟ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು.
2022ರಲ್ಲಿ ಬಿಡುಗಡೆ ಆದ ಟಾಮ್ ಕ್ರೂಸ್ ಅವರ ಟಾಪ್ ಗನ್ ಚಿತ್ರದಲ್ಲಿ ನಟಿಸಿದ್ದರೂ ಗಂಟಲು ಕ್ಯಾನ್ಸರ್ ನಿಂದ ಮಾತನಾಡಲು ಆಗಿರಲಿಲ್ಲ. 2012ರಲ್ಲಿ ಜೊರೊ ಚಿತ್ರಕ್ಕಾಗಿ ನೀಡಿದ ಧ್ವನಿಗಾಗಿ ಶ್ರೇಷ್ಠ ಹಿನ್ನೆಲೆ ಧ್ವನಿಯಾಗಿ ಗ್ರ್ಯಾಮಿ ಪ್ರಶಸ್ತಿ ಸ್ವೀಕರಿಸಿದ್ದರು. 1996ರಲ್ಲಿ ಪತ್ನಿ ವ್ಯಾಲಿಗೆ ವಿಚ್ಛೇದನ ನೀಡಿದ್ದು, ಪುತ್ರಿ ಮರ್ಸಿಡೀಸ್ ಮತ್ತು ಪುತ್ರ ಜಾಕ್ ಜೊತೆ ವಾಸವಾಗಿದ್ದರು.