ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಇತ್ತೀಚೆಗೆ ನಡೆದ ಘಟನೆಯ ಕುರಿತು ಕಾನೂನು ಚೌಕಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಬೇಕು. ಅ ಎಲ್ಲಾ ಕ್ರಮವನ್ನು ಅನುಸರಿಸುವ ಮೂಲಕ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದರು.
ರಾಯಚೂರು ನಗರದ ಹೊರವಲಯದ ನೂತನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಭಾನುವಾರ ರಾಯಚೂರು ಜಿಲ್ಲಾ ಉತ್ಸವ ಆಚರಣೆ ಹಿನ್ನಲೆಯಲ್ಲಿ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಳ್ಳಾರಿ ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಹೇಳಿಕೆ ನೀಡಿದ್ರೆ, ಹೀಗಾಗಿ ಅದರ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ ಎಂದು ತಿಳಿಸಿದವರು, ಅದರ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ. ಪಕ್ಷದಿಂದಲೂ ಒಂದು ಸಮಿತಿ ರಚಿಸಿ ಅಧ್ಯಕ್ಷರು ಸಮಿತಿ ಕಳುಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಬಳ್ಳಾರಿಯಲ್ಲಿ ಬ್ಯಾನರ್ ಪ್ರಕರಣ ಸಿಐಡಿಗೆ ಹಸ್ತಾಂತರ ಮಾಡುವದರ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರ ಚರ್ಚಿಸಿ ತಿರ್ಮಾನ ಕೈಗೊಳ್ಳುತ್ತಾರೆ. ಚರ್ಚೆನೂ ಮಾಡುತ್ತಿದ್ದಾರೆ. ಏಕಾಏಕಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲೆ ಕ್ರಮ ಕೈಗೊಂಡಿರುವ ವಿಚಾರಕ್ಕೆ ಪ್ರಾಥಮಿಕ ವರದಿಯನ್ನು ಪಡೆದು ನಿರ್ಧಾರ ಮಾಡಲಾಗುತ್ತದೆ ಎಂದು ಸಿಎಂ ಹಾಗೂ ಗೃಹ ಸಚಿವರು ತಿಳಿಸಿದ್ದರೆ. ಅಲ್ಲಿ ಕರ್ತವ್ಯ ಲೋಪ ಅಂತ ಆರೋಪ ಇರುವುದ್ದರಿಂದ ಇಂತಹ ದೊಡ್ಡ ಘಟನೆ ಆದಾಗ ಅದನ್ನ ಸ್ಥಳೀಯವಾಗಿ ಹತೋಟಿಗೆ ತೆಗೆದುಕೊಳ್ಳಬೇಕು ಎನ್ನುವ ಭಾವನೆ ಇದೆ. ಹಾಗಾಗಿ ಹಾಗೆ ಮಾಡಿದ್ದಾರೆ. ನೀವು ಕ್ರಮಕೈಗೊಂಡ್ರೆ ಯಾಕೆ ಕೈಗೊಂಡರಿ ಅಂತಿರಿ. ಮಾಡಲಿಲ್ಲ. ಅಂದ್ರೆ ಮಾಡಲಿಲ್ಲ ಅಂತಿರಿ. ನಿಮಗೆ ಉತ್ತರ ಮಾಡೋದೇ ಕಷ್ಟ ಆಗಿದೆ. ಅಧಿಕಾರ ಸ್ವೀಕಾರ ಮಾಡಿದ ಮೇಲೆ ಅದು ಜವಾಬ್ದಾರಿ. ನಿಗದಿತ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ದೌಡಯಿಸಿ ಕ್ರಮ ಕೈಗೊಳ್ಳಬೇಕು. ರಿಪೋರ್ಟ್ ಹಿನ್ನೆಲೆ ಮಾಡಿದ್ದಾರೆ. ಅದನ್ನ ಸಿಎಂ ಎನ್ ಹೇಳಿದ್ದಾರೆ, ಆನ್ ಸ್ಪಾಟ್ ಏನ್ ಮಾಡಬೇಕೊ ಮಾಡಿದ್ದಾರೆ. ಅದನ್ನ ಮುಂದೆ ಏನು ಮಾಡ ಬೇಕು ಮಾಡುತ್ತಾರೆ ಎಂದರು.


